ಹೊನ್ನಾವರ: ತಾಲೂಕಿನ ಶ್ರೀ ಶಾರದಾಂಬ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯ ಉಪ್ಪೊಣಿ ಯಲ್ಲಿ ನಡೆದ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಹೊನ್ನಾವರದ ಎಸ್‌ಡಿಎಂ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆಯನ್ನು ಮಾಡ್ದಿದ್ದಾರೆ.

ಶ್ರೀನಿಧಿ ಪ್ರಕಾಶ್ ನಾಯ್ಕ್ ಪ್ರಥಮ ಪಿ ಯು ವಿಜ್ಞಾನ ಹಾಗೂ ದೀಕ್ಷಿತಾ. ಎಮ್ ಪಟಗಾರ್ ದ್ವಿತೀಯ ಕಲಾ ಏಕಪಾತ್ರ ಅಭಿನಯದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ . ರಸಪ್ರಶ್ನೆಯಲ್ಲಿ ಎಂ ಸ್ ಭೂಮಿಕಾ ಹಾಗೂ ರಕ್ಷಿತಾ ನಾಯ್ಕ್ ಪ್ರಥಮ ಸ್ಥಾನ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಾದ ಸಂಜನಾ ನಾಯ್ಕ್ ಹಾಗೂ ಶಿವ ಗಣಪತಿ ಶೇಟ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಭಾವಗೀತೆಯಲ್ಲಿ ಶ್ರಾವಣಿ ಪ್ರಥಮ ಸ್ಥಾನ, ಭೂಮಿಕಾ ಕಾಮತ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಜಾನಪದ ನ್ರತ್ಯ ದಲ್ಲಿ ಸಂಜನಾ ಎ ನಾಯ್ಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಕನ್ನಡ ಪ್ರಭಂದ ಸ್ಪರ್ಧೆಯಲ್ಲಿ ಶ್ರೇಯ ಎಂ ನಾಯ್ಕ್ ಪ್ರಥಮ ಸ್ಥಾನ ಪಡೆದಿರುತ್ತಾರೆ.ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಮಾನಸ ಎಚ್ ಗೌಡ, ವೈಷ್ಣವಿ ಎನ್ ನಾಯ್ಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ.ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ದಿವ್ಯ ಜಿ ನಾಯ್ಕ್, ಕಾಂತಿ ಎಸ್ ಹೆಗಡೆ ಪ್ರಥಮ ಸ್ಥಾನ ಪಡೆದಿರುತ್ತಾರೆ.ಇಂಗ್ಲೀಷ್ ಪ್ರಭಂದ ಸ್ಪರ್ಧೆಯಲ್ಲಿ ಮರ್ವ ಪ್ರಥಮ ಸ್ಥಾನ, ಧನ್ಯ ಜಿ ಭಟ್ ತೃತೀಯ ಸ್ಥಾನ ಪಡೆದಿರುತ್ತಾರೆ.ಜಾನಪದ ಗೀತೆಯಲ್ಲಿ ಶ್ರೀನಿಧಿ ಶೇಟ್ ದ್ವಿತೀಯ, ಪ್ರತೀಕ್ಷಾ ಎಸ್ ಭಟ್ ತೃತೀಯ ಸ್ಥಾನ ಪಡೆದಿರುತ್ತಾರೆ.ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಜ್ಞಾ ಮತ್ತು ಸಾಗರ್ ಎಸ್ ನಾಯ್ಕ್ ಪ್ರಥಮ ಸ್ಥಾನ ಪಡೆದಿರುತ್ತಾರೆ.ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರೀತಿ ಪ್ರಭು ದ್ವೀತಿಯ,ಪ್ರಿಶಾ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರಥಮ ಸ್ಥಾನ ಗಳಿಸಿದ ಎಲ್ಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”