November 19, 2025

ಮೊಬೈಲ್‌ನಿಂದ ಹೊರಗೆ ಬನ್ನಿ –ಜಯಂತಕಾಯ್ಕಿಣಿ

ಹೊನ್ನಾವರ: ನಮ್ಮ ಬದುಕಿಗೆ ಬೇಕಾದಅನುಭವಯು-ಟ್ಯೂಬ್‌ನಲಿ,ಆನ್‌ಲೈನ್‌ನಲ್ಲಿ,ಡಿಜಿಟಲ್ ಮಾಧ್ಯಮದಲ್ಲಿ ಸಿಗುವುದಿಲ್ಲ. ಅವು ನಿಜಜೀವನದಲ್ಲಿ ಮಾತ್ರ ಸಿಗುತ್ತದೆ. ಅಂತಹಅನುಭವ ಪಡೆಯಲು ವಿದ್ಯಾರ್ಥಿಗಳು ದಯವಿಟ್ಟು ಮೊಬೈಲ್‌ನಿಂದ ಹೊರಗೆ ಬನ್ನಿ ಎಂದು ಕವಿ, ಕತೆಗಾರಜಯಂತ್‌ಕಾಯ್ಕಿಣಿ ಹೇಳಿದರು.
ಅವರು ಪಟ್ಟಣದಎಸ್.ಡಿ.ಎಂ. ಕಾಲೇಜಿನಲ್ಲಿಐ.ಕ್ಯೂ.ಎ.ಸಿ.,ಕನ್ನಡ ಸಂಘ, ಇಂಗ್ಲೀಷ್ ಲಿಟರರಿಕ್ಲಬ್ ಸಹಯೋಗದಲ್ಲಿ ನಡೆದ ‘ಕವಿ ಸಮಯ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕೈಬರೆಹ ಪತ್ರಿಕೆ ದೀಪಿಕಾ ಮತ್ತುಬ್ಲೂಮ್ ಬಿಡುಗಡೆಗೊಳಿಸಿ ಮಾತನಾಡಿದರು.


ನಾವು ಕಣ್ಣುತೆರೆದು ನೋಡಿದಾಗ ಮಾತ್ರಕತೆ, ಕವಿತೆ, ಕಾಣಸಿಗುತ್ತದೆ. ನಮ್ಮಅನುಭವದಿಂದ ಹುಟ್ಟಿದಸಾಹಿತ್ಯ ಬಾಳುತ್ತದೆ. ನಾವು ಎಲ್ಲವನ್ನೂಆಸ್ವಾದಿಸುತ್ತ ಬದುಕಿನಲ್ಲಿ ಕಳೆದುಹೋದಾಗ ಕವಿತೆಯೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ‘ಜಗತ್ತೇಒಂದುಅದ್ಭುತವಾದ ಪಠ್ಯೇತರ. ವಿದ್ಯಾರ್ಥಿಗಳು ಪಠ್ಯದಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ನಮ್ಮ ಸುತ್ತಮುತ್ತಲಿನ ಮನುಷ್ಯರ ಕಷ್ಟಗಳನ್ನು ಅರಿತು ಸ್ಪಂದಿಸುವ ಮಾನವೀಯಗುಣ ಬೆಳೆಸಿಕೊಳ್ಳುವುದು ನಮ್ಮ ಬಾಳಿನ ಆದ್ಯತೆ ಆಗಬೇಕು ಎಂದುಅವರು ಹೇಳಿದರು.

ನಂತರ ವಿದ್ಯಾಥಿಗಳ ಜೊತೆಗೆ ಸಂವಾದ ನಡೆಸಿದ ಜಯಂತಕಾಯ್ಕಿಣಿಅವರುಕಾವ್ಯದ ಮತ್ತು ಬರವಣಿಗೆಯಕುರಿತುಚಿಂಥನ-ಮAಥನ ನಡೆಸಿದರು.
ಇಂಗ್ಲೀಷ್ ಲಿಟರರಿಕ್ಲಬ್‌ಆಶ್ರಯದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಡಾ. ಡಿ. ಎಲ್. ಹೆಬ್ಬಾರ ಮಾತನಾಡಿ,ಜಯಂತರ ಸರಳವಾದ ನಡೆ-ನುಡಿ, ಅವರುಜನಸಾಮಾನ್ಯನ ನೋವಿಗೆ ಕನ್ನಡಿ ಹಿಡಿಯುವರೀತಿ ನಮಗೆ ಮಾದರಿಎಂದರು.
ಡಾ. ಎಂ. ಜಿ. ಹೆಗಡೆ ಸ್ವಾಗತಿಸಿದರು. ನಾಗರಾಜ ಅಪಗಾಲ ಪ್ರಾಸ್ಥಾವಿಕವಾಗಿ ಮಾತನಾಡಿದರು. ಡಾ. ಸುರೇಶ್‌ಎಸ್. ವಂದಿಸಿದರು. ಮಂಜುನಾಥ ಭಂಡಾರಿ ಉಪಸ್ಥಿತರಿದ್ದರು. ಬಿಂದುಅವಧಾನಿ ನಿರೂಪಿಸಿದರು.

About The Author

error: Content is protected !!