ಶಿರಾಲಿ : ಜನತಾ ವಿದ್ಯಾಲಯ ಮುರುಡೇಶ್ವರ ಇದರ 2005ನೇ ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ 14 /11 /2025 ನೇ ಶುಕ್ರವಾರ ಸ್ಥಳ ಜನತಾ ವಿದ್ಯಾಲಯ ಮುರುಡೇಶ್ವರ ಶಾಲಾ ಆವರಣದಲ್ಲಿ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು 25ನೇ ಸಾಲಿನ ವಿದ್ಯಾರ್ಥಿಗಳು ಸಾಂಪ್ರದಾಯಿಕವಾಗಿ ಶ್ರೀ ಗಣೇಶ ದೇವರಿಗೆ ಪೂಜೆ ಮಾಡಿ ಡಾಕ್ಟರ್ ದಿನಕರ್ ದೇಸಾಯಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಗುರು ವೃಂದವನ್ನ ಕನ್ನಡಾಂಬೆಯ ಹಳದಿ ಮತ್ತು ಕೆಂಪು ಸಾಲನ್ನು ಹಾಕಿ ಗುರುಗಳಿಗೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿ ಸರ್ವಪಲ್ಲಿ ರಾಧಾಕೃಷ್ಣ ಗುರುಗಳ ಫೋಟೋಗೆ ಪುಷ್ಪಾರ್ಚನೆ ಮಾಡಿ ಗಿಡಕ್ಕೆ ನೀರು ಹಾಕುವುದರ ಮೂಲಕ ದೀಪ ಬೆಳಗಿ ಚಾಲನೆಗೆ ನೀಡಲಾಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಶ್ರೀಮತಿ ಆಶಾ ಕಲ್ಮನೆ ಅವರು, ಉದ್ಘಾಟಕರಾಗಿ ಕೆಜೆ ಹೆಗಡೆ ನಿವೃತ್ತ ಮುಖ್ಯ ಶಿಕ್ಷಕರು, ಗೌರವ ಉಪಸ್ಥಿತಿಯನ್ನ ಎಸ್ ಎಸ್ ಕಾಮತ್, ಸುಬ್ರಹ್ ನಾಯಕ್, ಗುರುವಂದನ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಗೌರವಾನ್ವಿತ ಶ್ರೀ ದಾಮೋದರ್ ಶರ್ಮಾ , ಹಾಗೂ ಶಿಕ್ಷಕ ವೃಂದದವರಾದ ಭಟ್ಕಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವೆಂಕಟೇಶ್ ನಾಯಕ್ ಬಿ ಆರ್ ಸಿ ಪೂರ್ಣಿಮಾ ಶ್ರೀ ರಾಘವೇಂದ್ರ ನಾಯ್ಕ, ಪ್ರತಿಭಾ ಎಸ್ ಹೆಗಡೆ, ರಾಜೇಶ್ ಕುಪ್ಪಯ್ಯ ಶೆಟ್ಟಿ, ಶಂಕರ ದೇವಾಡಿಗ, ಅಶೋಕ್ ಈಶ್ವರ ಆಚಾರಿ, ಸತೀಶ್ ಶೆಟ್ಟಿ, ಬಾಬು ನಾಯ್ಕ್, ಮೋಹನ್ ನಾಯ್ಕ, ನೇತ್ರ ಬಿ ಮಡಿವಾಳ
ವಿಜಯ ನಾಯ್ಕ, ಮಿತಾ ಹೊನ್ನಿ, ಸವಿತಾ ನಾಯ್ಕ, ಅನಿತಾ ಭಟ್, ಮಾದೇವಿ ನಾಯ್ಕ, ರವೀಂದ್ರ ನಾಯ್ಕ ಎಲ್ ಈ ನಾಯ್ಕ ಪ್ರಭಾ ನಾಯ್ಕ, ಜನತಾ ವಿದ್ಯಾಲಯದ ಮಾದರಿ ವಿದ್ಯಾರ್ಥಿಯಾದ ಶಿವಾನಂದ್ ನಾಯ್ಕ, ಮೊದಲಾದವರು ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಈ ಶಾಲಾ ಹಳೆವಿದ್ಯಾರ್ಥಿಯಾದ ಹರೀಶ್ ನಾಯಕ್ ಇವರಿಗೆ ಭಾರತೀಯ ಸೇನೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿದ ಗೌರವಕ್ಕಾಗಿ ಗುರುರಂದದಿAದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಿಕ್ಷಕ ವೃಂದದವರೆಲ್ಲ ಈ ರೀತಿಯ ಅದ್ಭುತ ಪೂರ್ವವಾದ ಗುರುವಂದನಾ ಕಾರ್ಯಕ್ರಮ ಎಲ್ಲರಿಗೂ ಮಾದರಿಯಾಗಿದೆ ಪ್ರೇರಣೆಯಾಗಿದೆ ಎನ್ನುವುದರ ಮೂಲಕ, ಕಾರ್ಯವನ್ನು ಮನಪೂರ್ವಕವಾಗಿ ಸಂತೋಷಗೊAಡು ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು, ಈ ರೀತಿಯ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಗುರು ಶಿಷ್ಯ ಬಾಂಧವ್ಯ ವೃದ್ಧಿ ಆಗುವುದರ ಜೊತೆಗೆ ಸಮಾಜದಲ್ಲಿ ಒಂದು ಸಾಮರಸ್ಯದ ಒಳ್ಳೆಯ ಬಾಂಧವ್ಯ ಬೆಳೆಯಲು ಸಾಧ್ಯ, ಈ ಕಾರ್ಯಕ್ರಮದಲ್ಲಿ ಭಾರತೀಯ ಸಂಸ್ಕೃತಿಯ ಮೆಲುಕು ಹಾಕಿರುವುದು ಗಮನಹರವಾಗಿತ್ತು,
ಸಭೆಯಲ್ಲಿ 2005ನೇ ಸಾಲಿನ ಎಲ್ಲಾ ವಿದ್ಯಾರ್ಥಿಗಳು ಹಾಗೂ ಪ್ರಸ್ತುತ ಜನತಾ ವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಪಾಲಕರು ಪೋಷಕರು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಟ್ಟರು, ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆ ಹರೀಶ, ವಿಶ್ವನಾಥ್, ನಮಿತಾ, ಶಿವಕುಮಾರ, ಗಣೇಶ, ವಿಷ್ಣು, ಮೋಹನ, ಸುನಂದ, ಗೀತಾ ಮೊದಲಾದವರು ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸಿ ಕೆಲಸ ಮಾಡಿರುವುದು ಸ್ಮರಿಸಬಹುದಾಗಿತ್ತು.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ