ಭಟ್ಕಳ: ಮುಗಳಿಕೋಣೆಯ ಶ್ರೀ ಗೋಪಾಲಕೃಷ್ಣ ಕಾಣ ಮಂಟಪದಲ್ಲಿ ಭಟ್ಕಳ ತಾಲೂಕು ಕಾರ್ಪೆಂಟರ್ಸ್ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭ ನೆರವೇರಿತು. ಕಾರ್ಯಕ್ರಮವನ್ನು ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಉದ್ಘಾಟಿಸಿದರು.

ಸಚಿವರು ಮಾತನಾಡಿ, ಒಂದೇ ಸಮುದಾಯಕ್ಕೆ ಸೀಮಿತವಾಗಿದ್ದ ಮರದ ವೃತ್ತಿಗೆ ಈಗ ಹಲವು ವರ್ಗಗಳ ಯುವಕರು ಸೇರುತ್ತಿರುವುದು ಉದ್ಯೋಗ ಕ್ಷೇತ್ರಕ್ಕೆ ಒಳ್ಳೆಯ ಬೆಳವಣಿಗೆ. ಭಟ್ಕಳದ ಕಾರ್ಮಿಕರ ನೈಪುಣ್ಯ ಮತ್ತು ವಿನ್ಯಾಸ ಸಾಮರ್ಥ್ಯ ಅತ್ಯುತ್ತಮ ಎಂದು ಶ್ಲಾಘಿಸಿದರು. ತಾಲೂಕಿನಲ್ಲಿ ಮರದ ಕೆಲಸಕ್ಕೆ ಸಂಬAಧಿಸಿದ 4 ರಿಂದ 5 ಸಾವಿರ ಕ್ಕೂ ಹೆಚ್ಚು ಮಂದಿ ತೊಡಗಿಕೊಂಡಿರುವುದು ವಿಶೇಷ ಎಂದರು.
ಮತದಾರರ ಪಟ್ಟಿಯಲ್ಲಿ 1,700 ಆಚಾರ್ಯರ ಹೆಸರುಗಳಿದ್ದರೂ ವೃತ್ತಿಯಲ್ಲಿ ತೊಡಗಿರುವವರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಕಾರ್ಮಿಕ ಸೌಲಭ್ಯಗಳನ್ನು ಸರ್ಕಾರ ಈಗ ಎಲ್ಲಾ ವರ್ಗದ ಕಾರ್ಮಿಕರಿಗೆ ವಿಸ್ತರಿಸುತ್ತಿದೆ ಎಂದು ತಿಳಿಸಿದರು. ಸಂಘಟನೆ ಸದಸ್ಯರ ಸಂಪೂರ್ಣ ಮಾಹಿತಿಯನ್ನು ಪ್ರತಿಮಾಸವೂ ಸಲ್ಲಿಸಿದಲ್ಲಿ ಸೌಲಭ್ಯ ತಲುಪುವಂತೆ ಕ್ರಮ ವಹಿಸುವುದಾಗಿ ಹೇಳಿದರು.
ಸಂಘಟನೆ ಪ್ರತಿ ತಿಂಗಳು ಸಭೆ ನಡೆಸಿ, ಸದಸ್ಯರ ಸಂಪೂರ್ಣ ಮಾಹಿತಿಯನ್ನು ಸರ್ಕಾರಕ್ಕೆ ನೀಡಿದಲ್ಲಿ ಲಭ್ಯವಿರುವ ಎಲ್ಲಾ ಸವಲತ್ತುಗಳನ್ನು ತಲುಪಿಸುವ ಭರವಸೆಯನ್ನು ಸಚಿವರು ನೀಡಿದರು.ಸಂಘಟನೆ ಬಲವಾಗಿರಬೇಕು,ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರಿಂದ ಸ್ಥಳೀಯರಿಗೆ ಅನ್ಯಾಯವಾಗದಂತೆ ದರ ನಿಗದಿ ಮತ್ತು ಉದ್ಯೋಗ ಹಂಚಿಕೆಯಲ್ಲಿ ಕ್ರಮವಹಿಸಬೇಕು. ಮಧ್ಯವರ್ತಿಗಳ ಅಣಕದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ನಿರ್ಮೂಲಿಸಲು ಸಂಘಟನೆ ಗಟ್ಟಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.
ಕಾರ್ಪೆಂಟರ್ಸ್ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮ ರೂಪಿಸುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದರು. ನಂತರ ಸಂಘದ ಲೋಗೋವನ್ನು ಸಚಿವರು ಅನಾವರಣ ಗೊಳಿಸಿದರು,ಸಂಘಟನೆ ವತಿಯಿಂದ ಸಚಿವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷತೆಯನ್ನು ಭಾಸ್ಕರ ಬಿ. ಆಚಾರ್ಯ ವಹಿಸಿದ್ದರು. ಜಾಲಿ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ ದಿನೇಶ್ ಆಚಾರ್ಯ,ಕಾರ್ಪೆಂಟರ್ಸ್ ಸಂಘದ ಗೌರವಾಧ್ಯಕ್ಷ ಗುಂಡು ಆಚಾರ್ಯ,ಕಾಳಿಕಾಂಬಾ ದೇವಸ್ಥಾನದ ಮೊತ್ತೇಸರಾದ ಗಜಾನನ ನಾಗಪ್ಪಯ್ಯ ಆಚಾರ್ಯ,ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ