ಭಟ್ಕಳ: ಹಿಮಾಲಯದ ಬದರಿನಾಥಧಾಮದಿಂದ ಅಕ್ಟೋಬರ್ 19ರಂದು ಹೊರಟ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಭಟ್ಕಳದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯಲ್ಲಿ ಭವ್ಯ ಸ್ವಾಗತ ಲಭಿಸಿದೆ.

ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ಸ್ಥಾಪನಾ ವರ್ಷದ ಸ್ಮರಣಾರ್ಥ ಹಮ್ಮಿಕೊಂಡ 550 ಕೋಟಿ ಶ್ರೀರಾಮ ಜಪಯಜ್ಞ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ರಥಯಾತ್ರೆ ದೇಶದ ಪ್ರಮುಖ ಕ್ಷೇತ್ರಗಳಲ್ಲಿ ಸಂಚಾರ ಮಾಡುತ್ತಿದ್ದು, ಭಟ್ಕಳ ಆಗಮನಕ್ಕೆ ಭಕ್ತರಲ್ಲೂ ಹರ್ಷೋದ್ಗಾರ ವ್ಯಕ್ತವಾಗಿದೆ. ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬಳಿ ರಥ ಆಗಮಿಸಿದ ಬಳಿಕ ಪುಷ್ಪಾಂಜಲಿ ಸರ್ಕಲ್ನಿಂದ ಮೆರವಣಿಗೆಯಾಗಿ ವಡೆಯರ ಮಠಕ್ಕೆ ಸಾಗಿಸಲಾಯಿತು. ಇಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಿ, ಮಠದ ಆವರಣದಲ್ಲಿ ವಿಸಿಷ್ಟ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಾತ್ರಿ 8 ಗಂಟೆಗೆ ರಾಮಲೀಲಾ ಕಥಾ, ಝೇಂಕಾರ ಮೆಲೋಡಿಸ್ ತಂಡದ ಭರತನಾಟ್ಯ, ಸೌಮ್ಯ ಹಾಗೂ ಯುವಕರ ರಿತಿಕಾ ಕಿಣಿ ಹಾಗೂ ತಂಡದವರಿAದ ರಾಮನ ಕುರಿತ ನೃತ್ಯರೂಪಕಗಳು ಪ್ರೇಕ್ಷಕರ ಮನಸೆಳೆಯುವಂತಿತ್ತು. ಸಾಂಪ್ರದಾಯಿಕ ಉಡುಗೆ, ಭಜನೆ-ಕೀರ್ತನೆಗಳ ನಡುವೆ ರಥಾರೂಢ ಶ್ರೀಸೀತಾಪತಿ ರಾಮಚಂದ್ರ, ಲಕ್ಷ್ಮಣ, ಮಾರುತಿ ದೇವರ ಮೆರವಣಿಗೆ ಪಟ್ಟಣದಲ್ಲಿ ಹಬ್ಬದ ವರ್ತಮಾನ ರಚಿಸಿತು.
ಗಿಂಡಿ ನೃತ್ಯ, ಭಜನೆ-ಕೀರ್ತನೆ, ಪುಟ್ಟ ಮಕ್ಕಳಿಂದ ರಾಮ-ಲಕ್ಷ್ಮಣ-ಹನುಮಂತನ ವೇಷಭೂಷಣದ ಟ್ಯಾಬ್ಲೊಗಳು ವಿಶೇಷ ಆಕರ್ಷಣೆ ಆಗಿದ್ದವು. ಬಳಿಕ ನಡೆದ ಸುಡುಮದ್ದು ಪ್ರದರ್ಶನ ಸಮೂಹವನ್ನು ತನ್ನತ್ತ ಸೆಳೆದಿತು. ಭಟ್ಕಳ ತಾಲೂಕಿನಲ್ಲಿ 8 ಜಪಕೇಂದ್ರಗಳಿದ್ದು, ಎಲ್ಲ ಕಡೆಗೂ ರಥ ತೆರಳಿ ಪೂಜೆ ಸ್ವೀಕರಿಸಲಿದೆ. ಭಾನುವಾರ ಬೆಳಿಗ್ಗೆ ತಿರುಮಲ, ಕಾಮಾಕ್ಷಿ ಹಾಗೂ ರಘುನಾಥ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸ್ವೀಕರಿಸಿದ ಬಳಿಕ ವೆಂಕಟಾಪುರಕ್ಕೆ ತೆರಳಲಿದೆ.
ಬದರಿಕಾಶ್ರಮದಿಂದ ಆರಂಭವಾದ ರಥಯಾತ್ರೆಗೆ ಎಲ್ಲೆಡೆ ಭಕ್ತರಿಂದ ಅದ್ದೂರಿ ಸ್ವಾಗತ ದೊರೆಯುತ್ತಿದ್ದು, ರಾತ್ರಿ ನಡೆದ ಶ್ರೀರಾಮದೇವರ ಪೂಜೆಯ ನಂತರ ನಡೆದ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು. ಭಟ್ಕಳ, ಶಿರಾಲಿ, ಮುರುಡೇಶ್ವರ ಪ್ರದೇಶಗಳಿಂದಲೂ ಸಮಾಜ ಬಾಂಧವರು ಆಗಮಿಸಿ ಈ ಪಾವನ ಕ್ಷಣ ಕಣ್ತುಂಬಿಕೊAಡರು.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ
ದುಃಖದ ಕ್ಷಣದಲ್ಲಿ ಗ್ರಾಹಕ ಕುಟುಂಬದ ಬೆಂಬಲಕ್ಕೆ ಕರ್ಣಾಟಕ ಬ್ಯಾಂಕ್: ರೂ 10 ಲಕ್ಷ ವಿಮಾ ಚೆಕ್ ಹಸ್ತಾಂತರ