ಹೊನ್ನಾವರ: ಸರ್ಕಾರ ಮಾಡುವ ಕಾರ್ಯವನ್ನು ಒನ್ ಸೈಟ್ ಫೌಂಡೇಶನ್ ಅವರ ಸಹಕಾರದಿಂದ ಸ್ಪಂದನ ಸೇವಾ ಟ್ರಸ್ಟ್ ನಡೆಸುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ಪ್ರಶಂಸೆ ವ್ಯಕ್ತಪಡಿಸಿದರು.

ಹಳದೀಪುರದ ಆರ್.ಇ.ಎಸ್. ಕಾಲೇಜಿನಲ್ಲಿ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್, ಬೆಂಗಳೂರು, ಸ್ಪಂದನ ಸೇವಾ ಟ್ರಸ್ಟ್ ಹಡಿನಬಾಳ ಆರ್.ಇ.ಎಸ್. ಸಂಯುಕ್ತ ಪದವಿ ಪೂರ್ವ ವಿದ್ಯಾಲಯ ಹಳದೀಪುರ ಮತ್ತು ಗ್ರಾ.ಪಂ. ಹಳದೀಪುರ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗಗಳಲ್ಲಿ ಇದು ಚಿಕ್ಕ ಕಾರ್ಯಕ್ರಮವೇ ಆಗಿರಬಹುದು. ಆದರೆ, ಇದು ಬಹಳ ಉಪಯುಕ್ತವಾದ ಕಾರ್ಯಕ್ರಮವಾಗಿದೆ. ಕಳೆದ ಎರಡು ವರ್ಷಗಳಿಂದ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟನೆಯವರು ನಡೆಸುತ್ತಿದ್ದಾರೆ ಹಾಗೂ ಅವಶ್ಯವಿರುವವರಿಗೆ ಉಚಿತವಾಗಿ ಕನ್ನಡಕವನ್ನು ವಿತರಿಸುತ್ತಿದ್ದಾರೆ. ಸಂಸ್ಥೆಯ ಈ ಕಾರ್ಯಕ್ಕೆ ಗ್ರಾಮ ಪಂಚಾಯತ ಹಾಗೂ ಸ್ಥಳೀಯರ ಸಹಕಾರ ಹೆಚ್ಚಿನ ರೀತಿಯಲ್ಲಿ ಸಿಗಬೇಕು. ಸ್ಪಂದನಾ ಸೇವಾ ಟ್ರಸ್ಟ್ ನ ಕಾರ್ಯಗಳಿಗೆ ಯಶಸ್ಸಾಗಲಿ ಎಂದರು.
ಗ್ರಾ.ಪA.ಸದಸ್ಯ ಗಣೇಶ ಪೈ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳು ನಡೆಯಬೇಕು. ನಾವು ಸಹಕಾರ ಹಾಗೂ ಮಾರ್ಗದರ್ಶನ ನೀಡುತ್ತೇವೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಜಿತ್ ನಾಯ್ಕ ಕಣ್ಣಿನ ತಪಾಸಣೆಯ ಮಹತ್ವ ನಮಗೆಲ್ಲರಿಗೂ ತಿಳಿದಿರಬೇಕು, ಹಾಗೂ ಈ ಕಾರ್ಯಕ್ರಮದಲ್ಲಿ ಅವಶ್ಯವಿರುವವರಿಗೆ ಕನ್ನಡಕವನ್ನು ಉಚಿತವಾಗಿ ನೀಡುತ್ತಾರೆ. ಇದರ ಪ್ರಯೋಜನವನ್ನು ಗ್ರಾಮದವರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಶ್ರೀಧರ ನಾಯ್ಕ ಹಳದೀಪುರ, ಮಂಜುನಾಥ ನಾಯ್ಕ ಮತ್ತು ಹೊನ್ನಾವರ ರೈತ ಉತ್ಪಾದಕ ಕಂಪನಿಯ ಎಂ.ಡಿ. ಎನ್.ಎಸ್. ಹೆಗಡೆ ಉಪಸ್ಥಿತರಿದ್ದರು. ಸ್ಪಂದನಾ ಸೇವಾ ಟ್ರಸ್ಟನ ಅಧ್ಯಕ್ಷ ಗಣಪತಿ ಹೆಗಡೆ ಸ್ವಾಗತಿಸಿ, ಮಹೇಶ ಗೌಡ ವಂದಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್, ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”
ಹೊನ್ನಾವರ ಬಿಜೆಪಿ ಮಂಡಲದಿAದ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ