March 1, 2026

ಹೋನ್ನಾವರದ ವ್ಯಕ್ತಿಗೆ ಫಾರೆಕ್ಸ್ ಟ್ರೇಡಿಂಗ್ ಮೋಸ: ರೂ 46.5 ಲಕ್ಷ ದೋಚಿದ ನಾಲ್ವರು ಸೈಬರ್ ಅಪರಾಧಿಗಳ ಬಂಧನ

ಕಾರವಾರ: ಫಾರೆಕ್ಸ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭ ಸಿಗುತ್ತದೆ ಎಂಬ ನಂಬಿಕೆ ಮೂಡಿಸಿ,ಹೊನ್ನಾವರದ ವ್ಯಕ್ತಿಯೊಬ್ಬರ ಬಳಿ ಲಕ್ಷಾಂತರ ರೂಪಾಯಿ ದೋಚಿದ ಪ್ರಕರಣದಲ್ಲಿ ಕಾರವಾರ ಸೈಬರ್ ಅಪರಾಧ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಭಾತನಗರ,ಹೊನ್ನಾವರದ ವ್ಯಕ್ತಿ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದ ಫಾರೆಕ್ಸ್ ಟ್ರೇಡಿಂಗ್ ಜಾಹೀರಾತನ್ನು ನಂಬಿ, ಅದರಲ್ಲಿ ನೀಡಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ M.MarketAxess ಎಂಬ ಆ್ಯಪ್ ಮೊಬೈಲ್‌ಗೆ ಡೌನ್‌ಲೋಡ್ ಆಗಿದ್ದು ಅದರ ಮೂಲಕ ಹೂಡಿಕೆ ಮಾಡಲು ಸೂಚಿಸಲಾಗಿತ್ತು.

ಆ್ಯಪ್‌ನಲ್ಲಿ ಹಣ ಜಮಾ ಮಾಡಿದಂತೆ ಲಾಭ ಹೆಚ್ಚುತ್ತಿರುವಂತೆ ತೋರಿಸುವ ಮೂಲಕ ಆರೋಪಿಗಳು ವಿವಿಧ ಖಾತೆಗಳಿಗೆ ಒಟ್ಟು ರೂ. 46,50,000 ಹಾಕಿಸಿಕೊಳ್ಳಿದ್ದರು. ಬಳಿಕ ಆ್ಯಪ್‌ನಲ್ಲಿ ರೂ 75 ಲಕ್ಷ ಲಾಭ ತೋರಿಸಿದರೂ, ಹಣವನ್ನು ವಿತ್‌ಡ್ರಾ ಮಾಡಲು ಅವಕಾಶ ನೀಡದೆ ವಂಚಿಸಿರುವುದಾಗಿ ಈ ಸಂಬAಧ ಕಾರವಾರ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕ ದೀಪನ್ ಎಂ.ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ ಎಂ ಅವರ ಮಾರ್ಗದರ್ಶನದಲ್ಲಿ ಸೈಬರ್ ಪೊಲೀಸ್ ಡಿವೈಎಸ್ಪಿ ಬಿ. ಅಶ್ವಿನಿ ನೇತೃತ್ವದ ತಂಡ ಪ್ರಮುಖ ಆರೋಪಿ ಷಾ ಅಲಮ್ (23), ಸಮೀಮ್ ಆಖ್ತರ್ ಈಸ್ಟ್ ಚಂಪಾರಣ (ಬಿಹಾರ) ಇವರನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿತು.

ಹೈದರಾಬಾದ್‌ಗೆ ತೆರಳಿದ ಪಿಎಸೈ ಮಯೂರ ಪಟ್ಟಣಶೆಟ್ಟಿ, ತಂಡ ಆರ್‌ಬಿಐ ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಪಿಣ್ಣೆ ಶ್ರವಣಕುಮಾರ (35) ವಾರಂಗಲ್, ವಿನಯ ಕುಮಾರ್ (35) ಮಲಕಾಜಗಿರಿ ಈ ಇಬ್ಬರನ್ನು ಬಂಧಿಸಿದೆ. ಅನ್ಯರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆಗಳನ್ನು ತೆರೆಯಿಸಿ ಸೈಬರ್ ಮೋಸಕ್ಕೆ ಬಳಸುತ್ತಿದ್ದರೆಂದು ತನಿಖೆಯಲ್ಲಿ ಬಹಿರಂಗವಾಗಿದೆ.

ಬAಧಿತರನ್ನು ಕಾರವಾರಕ್ಕೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಈ ಕಾರ್ಯಾಚರಣೆಯಲ್ಲಿ ಸೈಬರ್ ಪೊಲೀಸ್ ಡಿವೈಎಸ್ಪಿ ಬಿ. ಅಶ್ವಿನಿ, ಪಿಎಸೈಗಳಾದ ಮಯೂರಪಟ್ಟಣ ಶೆಟ್ಟಿ, ಮಂಜೇಶ್ವರ ಚಂದಾವರ, ಸಿಬ್ಬಂದಿ ಗುರುರಾಜ ಬಿ.ಜಿ., ವಿವೇಕ ಧರ್ಮವೀರ, ನಾಮದೇವ ನಾಂದ್ರೆ, ಟೆಕ್ನಿಕಲ್ ಸೆಲ್ ಸಿಬ್ಬಂದಿ ಉದಯ ಗುನಗಾ, ಬಬನ್ ಕದಂ ಹಾಗೂ ತನಿಖಾ ಸಹಾಯಕ ಸುದರ್ಶನ ನಾಯ್ಕ ಭಾಗವಹಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ತೋರಿದ ಕಾರ್ಯಕ್ಷಮತೆಯನ್ನು ಪೊಲೀಸ್ ಇಲಾಖೆ ಅಭಿನಂದಿಸಿದೆ.

About The Author

error: Content is protected !!