March 2, 2026

ಮದ್ಯ ವ್ಯಸನದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ

ಭಟ್ಕಳ: ತಾಲ್ಲೂಕಿನ ಮೂಡಭಟ್ಕಳದಲ್ಲಿ ಮದ್ಯ ವ್ಯಸನದಿಂದ ಬಳಲುತ್ತಿದ್ದ ಯುವಕನೊಬ್ಬ ಗೂಡಂಗಡಿ ಶೆಡ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆಸಿದೆ ಮೃತ ಲೋಕೇಶ ಮಾಯಪ್ಪ ತೇವರ (34). ಇವನು ಕಳೆದ ಒಂದು ತಿಂಗಳಿನಿ0ದ ಅತಿಯಾದ ಮದ್ಯಪಾನದ ಪರಿಣಾಮವಾಗಿ ಆರೋಗ್ಯ ತೊಂದರೆ ಅನುಭವಿಸುತ್ತಿದ್ದನೆಂದು ಕುಟುಂಬದವರು ತಿಳಿಸಿದ್ದಾರೆ. ಟಾಪ್ ಆಫ್ ಲಾಡ್ಜ್ ಹಿಂಭಾಗದಲ್ಲಿರುವ ಗೂಡಂಗಡಿ ಶೆಡ್‌ನ ಕಬ್ಬಿನ ಪಟ್ಟಿಗೆ ನೈಲಾನ್ ದಾರವನ್ನು ಕಟ್ಟಿ, ಕುತ್ತಿಗೆಗೆ ಸುತ್ತಿಕೊಂಡು ಲೋಕೇಶ್ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದುಬಂದಿದೆ.

ಘಟನೆಯ ಕುರಿತು ಮೃತನ ತಮ್ಮ ರಾಕೇಶ್ ತೇವರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು ಮುಂದಿನ ತನಿಖೆ ಮುಂದುವರಿಸಿದ್ದಾರೆ.

About The Author

error: Content is protected !!