December 23, 2025

ಹಳಿಯಾಳದಲ್ಲಿ ಸಾಕು ನಾಯಿಗೆ ಸೀಮಂತ: ಪ್ರೇಮಾ ಪ್ರಭು ದಂಪತಿಗಳ ಅಪೂರ್ವ ಸಂಪ್ರದಾಯ

ಹಳಿಯಾಳ: ಮನುಷ್ಯರಿಗೆ ಮಾತ್ರ ಸೀಮಂತ ಮಾಡುವ ಸಂಪ್ರದಾಯ ಸಾಮಾನ್ಯ.ಆದರೆ ಉತ್ತರ ಕನ್ನಡ ಜಿಲ್ಲೆಯ,ಹಳಿಯಾಳದ ಪ್ರೇಮಾ ಮತ್ತು ಪ್ರಭು ಶಿಗ್ಲಿ ದಂಪತಿಗಳು ತಮ್ಮ ಸಾಕು ನಾಯಿ ಸೋನಿ ಚೊಚ್ಚಲ ಗರ್ಭಿಣಿಯಾಗಿರುವುದನ್ನು ಸಂಭ್ರಮಿಸಲು ಸೀಮಂತ ಕಾರ್ಯಕ್ರಮ ನೆರವೇರಿಸಿ, ಸಾಕು ಪ್ರಾಣಿಗಳನ್ನೂ ಮನೆಯ ಸದಸ್ಯರಂತೆ ನೋಡಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದ್ದಾರೆ.

ಪ್ರಸ್ತುತ ದೇಶದಲ್ಲಿ ನಾಯಿಗಳ ಬಗ್ಗೆ ಚರ್ಚೆಗಳು ಹೆಚ್ಚು ತೀವ್ರಗೊಂಡಿದ್ದು, ಸುಪ್ರೀಂ ಕೋರ್ಟ್ನ ಕೆಲವು ತೀರ್ಪುಗಳನ್ನು ಹಿನ್ನೆಲೆಯಾಗಿ ಡಾಗ್ ಲವರ್ಸ್ ಮತ್ತು ಡಾಗ್ ಹೇಟರ್ಸ್ ನಡುವೆ ಉದ್ವಿಗ್ನತೆ ನಿರ್ಮಾಣವಾಗಿದೆ. ಆದರೆ ಇದಕ್ಕೆ ವಿರುದ್ಧವಾಗಿ ಕೆಲವು ಕುಟುಂಬಗಳು ಪ್ರಾಣಿಗಳನ್ನು ಮನೆಯ ಮಕ್ಕಳೇ ಎಂಬAತೆ ಸಾಕುತ್ತಿರುವುದು ಗಮನಾರ್ಹ.

ಶಿಗ್ಲಿ ದಂಪತಿಗೆ ಹೆಣ್ಣು ಮಕ್ಕಳಿಲ್ಲದೆ, ಮನೆದಲ್ಲಿರುವ ದೇಸಿ ತಳಿಯ ಸಾಕು ನಾಯಿ ಸೋನಿಯನ್ನು ಮಗಳಂತೆ ಪಾಲಿಸಿಕೊಂಡಿದ್ದಾರೆ. ಈಗ ಒಂದು ವರ್ಷ ವಯಸ್ಸಿನ ಸೋನಿ ಚೊಚ್ಚಲ ಗರ್ಭಿಣಿಯಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮರಿಗಳಿಗೆ ಜನ್ಮ ನೀಡಲಿದ್ದಾಳೆ. ಅದರ ಸಂಭ್ರಮವಾಗಿ ಶುಕ್ರವಾರ ರಾತ್ರಿ ಕುಟುಂಬವು ಸಾಂಪ್ರದಾಯಿಕ ರೀತಿಯಲ್ಲಿ ಸೋನಿಗೆ ಸೀಮಂತ ನೆರವೇರಿಸಿದೆ.

ಸಂಪ್ರದಾಯದAತೆ ನಾಯಿಗೆ ಸೀರೆ ಉಡಿಸಿ, ಕುಪ್ಪಸ, ಬಂಗಾರ ಬೆಳ್ಳಿಯ ದಾಗಿನಗಳು, ಹಣ್ಣು ಹಂಪಲು ಮತ್ತು ಸಿಹಿ ದ್ರವ್ಯಗಳನ್ನು ಅರ್ಪಿಸಲಾಯಿತು. ನಂತರ ಮುತೈದೆಯರು ಆರತಿ ಬೆಳಗಿ ಆಶೀರ್ವಾದ ನೀಡಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದ ಈ ಕಾರ್ಯಕ್ರಮದಲ್ಲಿ ಸೋನಿ ಅತ್ಯಂತ ಶಾಂತವಾಗಿ ಕುಳಿತುಕೊಂಡಿದ್ದು ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಶ್ರೀನಿಕಾ ಪೂಜಾರ, ಶಾರದೆ ಕುಂಬಾರ, ದ್ರಾಕ್ಷಾಯಿಣಿ ಕಳ್ಳಿಮಣಿ, ಲಕ್ಷ್ಮಿ ಮೇಲಿನಮನಿ, ದೇವಕ್ಕಾ ಪೂಜಾರ ಮತ್ತು ಚಿಂತನ ಮೇಲಿನಮನೆ ಉಪಸ್ಥಿತರಿದ್ದರು.

About The Author

error: Content is protected !!