December 23, 2025

ಕೆರೆಗೆ ನೀರು ಬಿಡುವ ವಿಚಾರವಾಗಿ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ – ಶಾಸಕ ಎಚ್ ಎಮ್ ಗಣೇಶ್ ಪ್ರಸಾದ್

ಗುಂಡ್ಲುಪೇಟೆ; ತಾಲೂಕಿನ ಕೆರೆಗಳಿಗೆ ನೀರು ಬಿಡುವ ವಿಚಾರವಾಗಿ ಡಿಸೆಂಬರ್ ತಿಂಗಳ ಮೊದಲನೇವಾರ ರೈತರುಗಳಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಮತ್ತು ನುಡಿದಂತೆ ನಡೆದಿದ್ದೇನೆ ಎಂದು ಶಾಸಕರಾದ ಎಚ್ ಎಂ ಗಣೇಶ್ ಪ್ರಸಾದ್ ರವರು ಸುದ್ದಿಗಾರರೊಂದಿಗೆ ತಿಳಿಸಿದರು. ವಿರೋಧ ಪಕ್ಷದವರು ಪ್ರತಿಭಟನೆಯನ್ನು ಹಮ್ಮಿಕೊಂಡಿರುವುದರಿAದ ನೀರು ಬಿಟ್ಟಿಲ್ಲ ರೈತರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡಿದ್ದೇವೆ ಮತ್ತು ರೈತರುಗಳಿಗೆ ಡಿಸೆಂಬರ್ ಮೊದಲನೇ ವಾರ ಕೆರೆ ತುಂಬುಸುವುದಾಗಿ ಮಾತು ಕೊಟ್ಟಿದ್ದೇವೆ ಅದರಂತೆ ಶುಕ್ರವಾರ ಹುತ್ತೂರು ಪಂಪ್ ಹೌಸ್ ಬಳಿ ಬಟನ್ ಒತ್ತುವುದರ ಮೂಲಕ ಚಾಲನೆ ಮಾಡಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಎಚ್ ಎಸ್ ನಂಜಪ್ಪ, ಕಬ್ಬಳ್ಳಿ ಮಹೇಶ್, ಪಿಬಿ ರಾಜಶೇಖರ್, ಮಂಚಳ್ಳಿ ಲೋಕೇಶ್, ಎಚ್ ಎನ್ ಬಸವರಾಜು, ಮಡಿವಾಳಪ್ಪ, ಶಶಿಧರ್, ಆರ್ ಎಸ್ ನಾಗರಾಜು, ಕಾವೇರಿ ನೀರಾವರಿ ನಿಗಮದ ಹಾಗೂ ಯುವ ಮುಖಂಡರುಗಳು ಅಧಿಕಾರಿಗಳು ಸೇರಿದಂತೆ ನೂರಾರು ಕಾರ್ಯಕರ್ತರು ಹಾಗೂ ಯುವ ಮುಖಂಡರುಗಳು ಉಪಸ್ಥಿತರಿದ್ದರು.
ಭಾವನ ಟಿವಿಗಾಗಿ ಸದಾನಂದ ಕಣ್ಣೇಗಾಲ ಗುಂಡ್ಲುಪೇಟೆ

About The Author

error: Content is protected !!