

ಹೊನ್ನಾವರ : ತಾಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಬೀಳಮಕ್ಕಿಯ ಗೋಪಾಲ ನಾಯ್ಕ ಮತ್ತು ದಯಾನಂದ ನಾಯ್ಕ ಮನೆಯ ತೋಟಕ್ಕೆ ನೀರು ನುಗ್ಗಿ ತೋಟದ ಸಣ್ಣ ಗಿಡಗಳು ನೀರಿನ ಪಾಲಾಗಿದೆ. ತಡೆಗೋಡೆ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದೆ.
ಬೆಣ್ಮನೆ ಶಂಕರ ಜಟ್ಟಿ ಹಳ್ಳೆರ ಮನೆಗೆ ಹೋಗುವ ಸೇತುವೆ ಕೆಳಗಿನ ಮಣ್ಣು ಕೊಚ್ಚಿ ಹೋಗಿ ಪೈಪ್ ಮಾತ್ರ ಕಾಣುತ್ತಿದ್ದು, ಕಾಂಕ್ರೆಟ್ ರಸ್ತೆ ಪ್ರತ್ಯೇಕವಾಗಿದೆ. ಅಡಿಪಾಯ ಇಲ್ಲದಂತಾದ ಸೇತುವೆ ಮೇಲೆ ವಾಹನ ಸಂಚಾರಕ್ಕೆ ಭಯ ಪಡುವಂತಾಗಿದೆ. ಕೆಂಚಗಾರ ವಾದಿರಾಜ್ ಮಠದ ಹತ್ತಿರ ಮಳೆ ನೀರು ಸಂಗ್ರಹವಾಗಿ ಕಾಂಪೌAಡ್ ಕುಸಿದಿದೆ.
ಬಳಕೂರು ಗ್ರಾಮ ಪಂಚಾಯತ ವ್ಯಾಪ್ತಿಯ ಹೆರಮಕ್ಕಿ ದೇವಸ್ಥಾನ ಸಮೀಪ ದರೆ ಕುಸಿತವಾಗಿದೆ. ರಾಷ್ಟ್ರೀಯ ಹೆದ್ದಾರಿ ೬೯ ರಲ್ಲಿ ಗಟಾರದಲ್ಲಿ ಹರಿಯಬೇಕಿದ್ದ ನೀರು ರಸ್ತೆ ಮೇಲೆ ಹರಿದಿದೆ, ಆರೋಳ್ಳಿ ಹತ್ತಿರ ಕಿರು ಸೇತುವೆ ಮೇಲೆ ನೀರು ತುಂಬಿಕೊAಡು, ಶೇಡಿಬಾಳ ಗುಡ್ಡ ಕುಸಿತ ಆಗಿರುವ ಸ್ಥಳದಲ್ಲಿ ನೀರು ರಸ್ತೆ ಮೇಲೆ ಹರಿದಿದೆ. ಹೆದ್ದಾರಿ ಉದ್ದಗಲಕ್ಕೂ ಅಲ್ಲಲ್ಲಿ ನೀರು, ಮಣ್ಣು ರಸ್ತೆಯ ಮೇಲೆ ಬಿದ್ದು ಸಂಚಾರಕ್ಕೆ ಕೆಲಕಾಲ ಸಮಸ್ಯೆ ಉಂಟಾಯಿತು. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ