ಕೆಆರ್‌ಪೇಟೆ : ವಿಶೇಷ ಚೇತನರಿಗೆ ಸಮಾಜದಲ್ಲಿ ಅನುಕಂಪ ಬೇಕಾಗಿಲ್ಲ ಅವರು ಸಾಧನೆ ಮಾಡಿ ಮುನ್ನಡೆಯಲು ಅವಕಾಶ ಮಾಡಿಕೊಟ್ಟು ಪ್ರೋತ್ಸಾಹಿಸಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಶೇಷಚೇತನ ಪ್ರತಿಭೆ ಡಾ. ಕೆ.ಎಸ್.ರಾಜಣ್ಣ ವಿಶ್ವಕರ್ಮ ಹೇಳಿದರು.
ಅವರು ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ಮಾತೃಭೂಮಿ ಉಚಿತ ವೃದ್ಧಾಶ್ರಮದಲ್ಲಿ ಅಂತರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವೃದ್ಧರು ಹಾಗೂ ವಿಶೇಷ ಚೇತನರೊಂದಿಗೆ ತಮ್ಮ 66ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡು ಆಶ್ರಮದಲ್ಲಿರುವ 75 ಜನ ವಯೋವೃದ್ಧರಿಗೆ ಉಲನ್ ಶಾಲನ್ನು ವಿತರಿಸಿ ಮಾತನಾಡಿದರು.
ವಿಶೇಷ ಚೇತನರು ದೇವರ ಮಕ್ಕಳಾಗಿದ್ದು ಅವರಲ್ಲಿ ಸಾಧನೆ ಮಾಡಿ ಮುನ್ನಡೆಯುವ ಆತ್ಮವಿಶ್ವಾಸ ಹಾಗೂ ಛಲವಿದೆ. ವಿಶೇಷ ಚೇತನರಿಗೆ ನಾಗರೀಕ ಸಮಾಜದ ಅನುಕಂಪ ಖಂಡಿತವಾಗಿಯೂ ಬೇಕಾಗಿಲ್ಲ ವಿಶೇಷ ಚೇತನರು ತಮ್ಮಲ್ಲಿರುವ ಸಾಮರ್ಥ್ಯವನ್ನು ಅನಾವರಣ ಮಾಡಲು ಸೂಕ್ತ ವೇದಿಕೆಯನ್ನು ಕಲ್ಪಿಸಿ ಸಾಧನೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮನವಿ ಮಾಡಿದ ರಾಜಣ್ಣ, ನಾನು ಬಾಲ್ಯದಲ್ಲಿಯೇ ಪೋಲಿಯೋ ರೋಗಕ್ಕೆ ತುತ್ತಾಗಿ ಶಾಶ್ವತವಾಗಿ ಕೈಕಾಲುಗಳನ್ನು ಕಳೆದುಕೊಂಡಿದ್ದರೂ, ಜೀವನದಲ್ಲಿ ಏನನ್ನಾದರೂ ಸಾಧಿಸಲೇಬೇಕು ಎಂಬ ಛಲವನ್ನು ಮಾತ್ರ ಬಿಡಲಿಲ್ಲ. ಆದ್ದರಿಂದ ನನ್ನ ಅರವತ್ತಾರನೇ ವಯಸ್ಸಿನಲ್ಲಿಯೂ ಉತ್ಸಾಹದಿಂದ ರಾಜ್ಯದಾದ್ಯಂತ ಓಡಾಡುತ್ತಿದ್ದೇನೆ. ಬೆಂಗಳೂರು ನಗರದಲ್ಲಿ ಸ್ವಂತ ಕಂಪನಿಯನ್ನು ಸ್ಥಾಪಿಸಿ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದೇನೆ ಎಂದು ತಿಳಿಸಿದ ರಾಜಣ್ಣ ಕೆ.ಆರ್.ಪೇಟೆ ತಾಲೂಕಿನಲ್ಲಿ ಮಾತೃಭೂಮಿ ಉಚಿತ ವೃದ್ಧಾಶ್ರಮವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೂ ಸರ್ಕಾರದಿಂದ ಸಿಗಬೇಕಾದ ಆರ್ಥಿಕ ನೆರವು ಮತ್ತು ಸೌಲಭ್ಯಗಳು ದೊರೆಯುತ್ತಿಲ್ಲ ಎಂಬುದನ್ನು ತಿಳಿದು ನನಗೆ ತುಂಬಾ ಬೇಸರವಾಗಿದೆ ಅನಾಥಾಶ್ರಮವು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ ರಾಜ್ಯ ಸರ್ಕಾರವು ಕೂಡಲೇ ಮಾತೃಭೂಮಿ ವೃದ್ದಾಶ್ರಮಕ್ಕೆ ಅಗತ್ಯವಾದ ಭೂಮಿಯನ್ನು ದೊರಕಿಸಿ ಕೊಟ್ಟು ಸ್ವಂತ ಕಟ್ಟಡ ಹೊಂದಲು ಸೂಕ್ತ ಹಣಕಾಸು ನೆರವು ನೀಡಬೇಕು ವಿಶೇಷ ಚೇತನ ವ್ಯಕ್ತಿಯಾಗಿರುವ ನಾನು ವೃದ್ಧಾಶ್ರಮ ಸ್ವಂತ ಕಟ್ಟಡ ಹೊಂದಲೆAದು ವೈಯಕ್ತಿಕವಾಗಿ ಇಂದು 21 ಸಾವಿರ ರೂಪಾಯಿ ಹಣ ನೀಡುತ್ತಿದ್ದೇನೆ ಎಂದು ರಾಜಣ್ಣ ಘೋಷಿಸಿದರು.
ನಾಗರೀಕ ಸಮಾಜವು ಇಂದು ಕಲುಷಿತವಾಗುತ್ತಿದೆ ಸ್ವಾರ್ಥ ಸಾಧನೆ ಹಾಗೂ ಗುಂಪುಗಾರಿಕೆಯು ಎಲ್ಲೆಡೆ ಮೇಲೈಸುತ್ತಿದೆ ಇಂತಹ ಸಂದರ್ಭದಲ್ಲಿ ಜೈಹಿಂದ್ ನಾಗಣ್ಣ ಅವರು ತಮ್ಮ ಇಡೀ ಕುಟುಂಬವನ್ನೇ ವೃದ್ಧರ ಸೇವೆಗೆ ಸಮರ್ಪಣೆ ಮಾಡಿಕೊಂಡು ಚನ್ನರಾಯಪಟ್ಟಣ ಹಾಗೂ ಕೃಷ್ಣರಾಜಪೇಟೆ ತಾಲೂಕುಗಳಲ್ಲಿ ಅನಾಥಾಶ್ರಮಗಳನ್ನು ಸ್ಥಾಪಿಸಿ ವಯೋ ವೃದ್ಧರ ಸೇವೆಯಲ್ಲಿ ಭಗವಂತನನ್ನು ಕಾಣುವ ಪ್ರಯತ್ನ ಮಾಡುತ್ತಿರುವುದು ಇಡೀ ನಾಗರಿಕ ಸಮಾಜವೇ ಮೆಚ್ಚುವ ವಿಚಾರವಾಗಿದೆ. ಇಂತಹ ಅಪರೂಪದ ವ್ಯಕ್ತಿಗಳು ಸಮಾಜಕ್ಕೆ ಬೇಕಾಗಿದ್ದಾರೆ ಎಂದು ಡಾ.ರಾಜಣ್ಣ ಅಭಿಮಾನದಿಂದ ಹೇಳಿದರು.
ಇದೇ ಸಂದರ್ಭದಲ್ಲಿ ಕೆ.ಆರ್.ಪೇಟೆ ಪಟ್ಟಣದ ಸಿವಿಲ್ ನ್ಯಾಯಾಲಯದ ಅಪರ ನ್ಯಾಯಾಧೀಶರಾದ ಕೆ.ವಿ. ಅರ್ಪಿತ, ಕೆ.ಆರ್.ಪೇಟೆ ಪಟ್ಟಣದ ಮಹಿಳಾ ಹೋರಾಟಗಾರ್ತಿ ಲತಾ ಹಾಗೂ ಜೈಹಿಂದ್ ನಾಗಣ್ಣ ಅವರ ಪುತ್ರ ಸಮಾಜ ಸೇವಕ ವಿಕ್ರಂ ಅವರು ವಯೋ ವೃದ್ಧರೊಂದಿಗೆ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡು, ವೃದ್ಧಾಶ್ರಮದ ಆಭರಣದಲ್ಲಿ ಹೂವು ಮತ್ತು ಹಣ್ಣಿನ ಸಸಿಗಳನ್ನು ನೆಟ್ಟು, ಒಬ್ಬಟ್ಟಿನ ಹೋಳಿಗೆ ಬಡಿಸಿ ಸಂಭ್ರಮಿಸಿದರು. ಪುರಸಭೆ ಸದಸ್ಯ ಕೆ.ಆರ್.ನೀಲಕಂಠ, ಮಾತೃಭೂಮಿಯ ವೃದ್ದಾಶ್ರಮದ ವ್ಯವಸ್ಥಾಪಕಿ ಸುಧಾ, ಪತ್ರಕರ್ತರಾದ ಸೈಯದ್ ಖಲೀಲ್, ಪದ್ಮಶ್ರೀ ಪುರಸ್ಕೃತ ರಾಜಣ್ಣ ಅವರ ಧರ್ಮಪತ್ನಿ ಭಾಗ್ಯಲಕ್ಷ್ಮಿ ಸೇರಿದಂತೆ ನೂರಾರು ಜನರು ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ. ಕೃಷ್ಣರಾಜಪೇಟೆ, ಮಂಡ್ಯ.

More Stories
ವಿದ್ಯಾರ್ಥಿಗಳ ಸಮಗ್ರವಾದ ವ್ಯಕ್ತಿತ್ವದ ವಿಕಸನಕ್ಕೆ ಗಣಿತ ಹಾಗೂ ವಿಜ್ಞಾನ ಶಿಕ್ಷಣವು ದಾರಿ ದೀಪವಾಗಿದೆ. ಮುಖ್ಯ ಶಿಕ್ಷಕಿ ನಾಗರತ್ನ.
ಸದೃಢ, ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಮಲ್ಲಿಕಾರ್ಜುನ
ಬಾಲಯೇಸು ದೇವಾಲಯದ ಜೀರ್ಣೋದ್ಧಾರಕ್ಕೆ ಧನ ಸಹಾಯ ಮಾಡಿದ ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್