ಪರ್ತಗಾಳಿ (ಗೋವಾ): ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಸಾರ್ಧ ಪಂಚಶತಮಾನೋತ್ಸವ ಸಂಭ್ರಮಾಚರಣೆ ಇಂದು ಸಂಪನ್ನಗೊಳ್ಳಲಿದೆ. ಕಳೆದ 10ದಿನಳಿಂದ ಮಠದ ಆಧ್ಯಾತ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ಈ ಮಹೋತ್ಸವವು ಭಕ್ತರ ಭಾವನೆಯ ಮಹಾ ಜಾತ್ರೆಯಾಗಿ ಪರಿಣಮಿಸಿದೆ. ನ.27ರಂದು ಧಾರ್ಮಿಕ ವಾತಾವರಣದಲ್ಲಿ ಉತ್ಸವಕ್ಕೆ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ ಚಾಲನೆ ನೀಡಿದ್ದರು. 1475ರಲ್ಲಿ ಸ್ಥಾಪಿತವಾದ ಪರ್ತಗಾಳಿ ಮಠವು ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯದ ಪ್ರಮುಖ ಆಧ್ಯಾತ್ಮಿಕ ಕೇಂದ್ರ. ಈ ಮಠದ ಇತಿಹಾಸ ಹಾಗೂ ಪರಂಪರೆಯನ್ನು ಸ್ಮರಿಸಲು 10 ದಿನಗಳ ಉತ್ಸವಕ್ಕೆ ಭಕ್ತರು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ನ.28ರಂದು ಪ್ರಧಾನಿ ನರೇಂದ್ರ ಮೋದಿ ಪ್ರಭು ಶ್ರೀರಾಮ ದೇವರ ಅತಿ ಎತ್ತರದ ಪ್ರತಿಮೆಯ ಅನಾವರಣ ಮಾಡಿದ್ದು, ಗೋಮಾಂತಕ ಪ್ರದೇಶದಲ್ಲಿ ದಕ್ಷಿಣ ಅಯೋಧ್ಯೆ. ನಿರ್ಮಾಣಮಾಡಿದೆ. ಹವನ-ಹೋಮ, ವಿಶೇಷ ಪೂಜೆ, 550 ರಾಮನಾಮ ಜಪ ಅಭಿಯಾನ ಯಜ್ಞ, ಸಪ್ತಾಹ ಭಜನೆ, ಸಾಂಸ್ಕೃತಿಕ ಕಲಾ ಕಾರ್ಯಕ್ರಮಗಳು ಇತ್ಯಾದಿ ನೆರವೇರಿಸಲ್ಪಟ್ಟಿವೆ.

ಮಠದ ಸೌಂದರ್ಯವರ್ಧನೆ ಮತ್ತು ಅಭಿವೃದ್ದಿ, ದಾಖಲೆ ಬರೆದ ಅಭಿಯಾನ
ಉತ್ಸವದ ಭಾಗವಾಗಿ ಮಠದಲ್ಲಿ ಹಲವು ಹೊಸ ಯೋಜನೆಗಳಿಗೂ ಚಾಲನೆ ದೊರೆತಿದೆ. 1000ಕ್ಕಿಂತ ಹೆಚ್ಚು ಭಕ್ತರಿಗಾಗಿ ವಸತಿ ಗೃಹ, ನವೀಕೃತ ಮಠ ಆವರಣ, ಶ್ರೀರಾಮಾಯಣ ಥೀಮ್ ಪಾರ್ಕ್, ಸಂಸ್ಕೃತ ಅಧ್ಯಯನ ಕೇಂದ್ರ, ಗ್ರಂಥಾಲಯ ಮತ್ತು ಧ್ಯಾನ ಕೇಂದ್ರ ಈ ಎಲ್ಲ ಯೋಜನೆಗಳು ಮಠದ ಸೇವಾ-ಶೈಕ್ಷಣಿಕ ಚಟುವಟಿಕೆಗಳಿಗೆ ಮುಂದಿನ ಪೀಳಿಗೆಯನ್ನು ಸಿದ್ಧಗೊಳಿಸಲಿವೆ. 26ರಂದು ಮಠಕ್ಕೆ ಆಗಮಿಸಿದ ರಥಯಾತ್ರೆ ಭಕ್ತರನ್ನು ಭಾವನಾತ್ಮಕವಾಗಿ ಆಕರ್ಷಿಸಿತು. 550 ಕೋಟಿ ರಾಮನಾಮ ಜಪ ಅಭಿಯಾನ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಮಠದ ಆಧ್ಯಾತ್ಮಿಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಶ್ರೀಗಳ ಸಂಕಲ್ಪದ ರಾಮನಾಮ ಜಪ ಅಬಿಯಾನ ವಿಶ್ವದಾಖಲೆ ಬರೆದು ವಿಶ್ವಮಟ್ಟದಲ್ಲಿ ಮಠವನ್ನು ಗುರುತಿಸುವಂತೆ ಮಾಡಿದೆ.

ಸಮಾಜಮುಖಿ ಸೇವೆಗಳಿಗೂ ವಿಶೇಷ ಪ್ರಾಮುಖ್ಯತೆ,
ಮಠವು ಮಹೋತ್ಸವದ ಸಂದರ್ಭದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನೂ ಹಮ್ಮಿಕೊಂಡಿತ್ತು. ವೈದ್ಯಕೀಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಗಿಡ ನೆಡುವ ಕಾರ್ಯಕ್ರಮ ಪ್ರತಿದಿನ ಹಗಲು ಇರಳು ನಡೆದ ಅನ್ನಸಂತರ್ಪಣೆ, ಎಷ್ಟೆ ಜನ ಬಂದರೂ, ನೂಕು ನುಗ್ಗಲೂ ಉಂಟಾದರೂ ಪ್ರೀತಿಯಿಂದ ಉಪಹಾರ ಸರಬರಾಜು ಮಾಡುವ ರಾಮಸೇವಕರ ಗುಣಗಾನ ಎಲ್ಲಡೆ ಕೇಳಿ ಬಂದಿದೆ. ಈ ಕಾರ್ಯಕ್ರಮಗಳ ಮೂಲಕ ಮಠವು ಸೇವಾ ಧರ್ಮ ಪರಮೋತ್ತರಃ ಎಂಬ ಮಂತ್ರವನ್ನು ನೆನಪಿಸಿದೆ. ಪರ್ತಗಾಳಿ ಮಠದ 550ನೇ ವರ್ಷದ ಸಂಭ್ರಮ ಧರ್ಮ-ಸಂಸ್ಕೃತಿ-ಸೇವೆ-ಇವರ ಸಮನ್ವಯದ ಮಹೋತ್ಸವವಾಗಿ ಮಾರ್ಪಟ್ಟಿದೆ. ಭಕ್ತರ ಭಕ್ತಿ, ಮಠದ ಪರಂಪರೆ, ಮತ್ತು ಭವ್ಯ ಕಾರ್ಯಕ್ರಮಗಳು ಮಠದ ಇತಿಹಾಸದಲ್ಲಿ ಈ ಉತ್ಸವವನ್ನು ಸುವರ್ಣಾಕ್ಷರದಲ್ಲಿ ಬರೆದಿಡುವಂತ ದಾಖಲೆ ನಿರ್ಮಾಣವಾಗಿದೆ.

More Stories
ಜಯ ಕರ್ನಾಟಕ ಸಂಘಟನೆಯಿಂದ ಕೆ.ಆರ್. ಪೇಟೆಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ,
ಕೇರಳ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಪರ್ತಗಾಳಿ ಮಠಕ್ಕೆ ಭೇಟಿ
ಬಿಹಾರದಿಂದ ಪರ್ತಗಾಳಿಗೆ, ನಾಯಕತ್ವದಿಂದ ಭಕ್ತಿಗೆ, ಸಾರ್ಧ ಪಂಚಶತಮಾನೋತ್ಸವಕ್ಕೆ ಮೈಥಿಲಿ ಠಾಕೂರ್