December 23, 2025

ಮಾತೃ ಪಿತೃ ವಂದನಾ ಕಾರ್ಯಕ್ರಮ


ಶ್ರೀ ಸತ್ಯಸಾಯಿ ಕರಿಕಾನ ಪರಮೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 11-12-2025 ಗುರುವಾರದಂದು ಪಾಲಕ ಪೋಷಕರ ಉಪಸ್ಥಿತಿಯಲ್ಲಿ ಮಾತೃ ಪಿತೃ ವಂದನಾ ಕಾರ್ಯಕ್ರಮ ಅತ್ಯಂತ ವಿಜ್ರಂಭಣೆಯಿಂದ ನಡೆಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವೇದಮೂರ್ತಿ ಶ್ರೀ ಶಶಿಧರ್ ಭಟ್ ಪ್ರಧಾನ ಅರ್ಚಕರು ಶ್ರೀ ಕರಿಕಾನಪರಮೇಶ್ವರಿ ದೇವಾಲಯ ನೀಲ್ಕೋಡ್ ಇವರು ಆಗಮಿಸಿದ್ದು ಮಾತೃ ಪಿತೃ ಪೂಜೆಯ ಕ್ರಿಯಾ ವಿಧಾನಗಳನ್ನು ಹೇಳುತ್ತಾ ಹತ್ತು ದೇವರನ್ನು ಪೂಜಿಸುವ ಮುನ್ನ ಹೆತ್ತ ತಾಯಿಯನ್ನು ಪೂಜಿಸು ಎಂಬಂತಹ ಆಶೀರ್ವಚನಗಳನ್ನು ನೀಡಿದರು.

ಇನ್ನೋರ್ವ ಅತಿಥಿಗಳಾಗಿ ಆಗಮಿಸಿದ  ಶೈಕ್ಷಣಿಕ ಮಾರ್ಗದರ್ಶಕರಾದ  ಎಸ್ ಜೆ ಕೈರನ್ನ ರವರು ಮಾತನಾಡಿ ಅಪ್ಪ ಅಮ್ಮನು ನೆಡಲಿ ಸಂಸ್ಕಾರ ಬೀಜ, ಗುರು ನೀರ ನೆರೆಯುತಿರೆ ಅರಳುವುದು ತೇಜ ಮಗುವಿನೊಳಗಣ ಮೊಗ್ಗು ಅರಳಿ ನಿಲ್ಲುವುದು ಗಾಳಿಗೂ ತನ್ನಲಿನ ಪರಿಮಳವ ಬೀರುವುದು ಎಂಬಂತಹ ಪ್ರೇರಣಾದಾಯಕ ನುಡಿಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ  ರಾಮದಾಸ ಜೆ ಆಚಾರಿ ಸರ್ ಅವರು ಮಾತನಾಡಿ ಒಳಿತಿ ನಡೆ ಕೆಟ್ಟದನು ದೂರವಿಡು ಉಳಿದ ಫಲವನ್ನು ದೇವರಿಗೆ ಬಿಟ್ಟುಬಿಡು ಎಂಬಂತಹ ಮೌಲ್ಯಯುತ ಮಾತುಗಳ ನ್ನಾಡಿದರು.

ಪಾಲಕರು ಕೂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಶಾಲೆಯ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಶೈಲಾ ಹೆಗಡೆಯವರು ಬಂದಿರುವಂತಹ ಸರ್ವರನ್ನು ಸ್ವಾಗತಿಸಿದರು. ಪಾಲಕ ಪೋಷಕರ ಸಮ್ಮುಖದಲ್ಲಿ ಅತಿಥಿ ಅಭ್ಯಾಗತರ ಉಪಸ್ಥಿತಿಯಲ್ಲಿ ಮಾತೃ ಪಿತೃ ವಂದನಾ ಕಾರ್ಯಕ್ರಮ ಅದ್ದೂರಿಯಾಗಿ ಸಂಪೂರ್ಣಗೊಂಡಿತು.

About The Author

error: Content is protected !!