December 23, 2025

ಹೆದ್ದಾರಿ ಕಾಮಗಾರಿ ಹಿನ್ನೆಲೆ: ರಂಗಿನಕಟ್ಟೆ ಅಶ್ವತ್ಥ ಕಟ್ಟೆ ತೆರವಿಗೆ ದಿನಾಂಕ ನಿಗದಿಡಿಸೆಂಬರ್ 23ರವರೆಗೆ ಪೂಜೆ ವಿಧಿಗಳಿಗೆ ಅವಕಾಶ

ಭಟ್ಕಳ:ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಭಟ್ಕಳ ತಾಲ್ಲೂಕಿನ ಸೂಸಗಡಿ ಹೋಬಳಿಯ ಸೂಸಗಡಿ ಗ್ರಾಮದ ರಂಗಿನಕಟ್ಟೆ ಬಳಿ ಇರುವ ಅಶ್ವತ್ಥ ಮರದ ಕಟ್ಟೆಯನ್ನು ತೆರವುಗೊಳಿಸಲು ತಾಲ್ಲೂಕು ಆಡಳಿತ ನಿರ್ಧರಿಸಿದೆ.

ಈ ಸಂಬAಧ ಉತ್ತರ ಕನ್ನಡ ಜಿಲ್ಲಾಧಿಕಾರಿಗಳ ಆದೇಶದಂತೆ, ಸರ್ವೆ ನಂ. 604 ರಲ್ಲಿನ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಜಮೀನಿನ ಮಾಲೀಕರು ಸ್ವಾಧೀನ ನೋಟೀಸ್‌ಗೆ ಸ್ಪಂದಿಸದ ಕಾರಣ, ಭಟ್ಕಳ ತಹಶೀಲ್ದಾರರಿಗೆ ಜಮೀನನ್ನು ಬಲವಂತವಾಗಿ ಸ್ವಾಧೀನ ಪಡೆಯುವಂತೆ ಸೂಚನೆ ನೀಡಲಾಗಿದೆ.

ಹೆದ್ದಾರಿ ಅಗಲೀಕರಣ ಕಾಮಗಾರಿಗಾಗಿ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದು, ರಂಗಿನಕಟ್ಟೆಯಲ್ಲಿರುವ ಅಶ್ವತ್ಥ ಕಟ್ಟೆ ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಅಶ್ವತ್ಥ ಕಟ್ಟೆಗೆ ಸಂಬAಧಿಸಿದ ಪೂಜೆ, ಪ್ರಾರ್ಥನೆ ಹಾಗೂ ಇತರೆ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಡಿಸೆಂಬರ್ 23, 2025ರವರೆಗೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕರು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ಪೂಜೆ ಕಾರ್ಯಕ್ರಮಗಳನ್ನು ನಡೆಸಿಕೊಳ್ಳಬಹುದು. ಡಿಸೆಂಬರ್ 24, 2025ರಂದು ಜಮೀನನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಹಸ್ತಾಂತರಿಸಿ, ನಿಯಮಾನುಸಾರ ಅಶ್ವತ್ಥ ಕಟ್ಟೆ ತೆರವು ಕಾರ್ಯ ಕೈಗೊಳ್ಳಲಾಗುತ್ತದೆ. ಡಿಸೆಂಬರ್ 23 ನಂತರ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

error: Content is protected !!