

ಸಿದ್ದಾಪುರ ; ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ನಾಣಿಕಟ್ಟಾ ಪ್ರೌಢಶಾಲಾ ಮಕ್ಕಳಿಗೆ ದಿನಾಂಕ 4-8-2025 ಸೋಮವಾರ ಶ್ರೀ ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಇದರ ಅಧ್ಯಕ್ಷ ರಾದ ಉದ್ಯಮಿ ಶ್ರೀ ಉಪೇಂದ್ರ ಪೈ ಅವರು ನೋಟ್ ಬುಕ್ ವಿತರಿಸಿದರು.. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಣಿಕಟ್ಟಾ ಪ್ರೌಢಶಾಲೆಯ ಕ್ರೀಯಾಶೀಲ ಅಧ್ಯಕ್ಷರಾದ ಶ್ರೀ ಎಮ್ ಡಿ ಹೆಗಡೆ ಬುಳ್ಳಿ ತ್ಯಾಗಲಿ ವಹಿಸಿದ್ದರು.


ಸಭಾ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿ ಉದ್ಯಮಿಗಳಾದ ಶ್ರೀ ಉಪೇಂದ್ರ ಪೈ ಸಿರಸಿ ಅವರು ಮಾತನಾಡಿ ಮಕ್ಕಳ ಶಿಕ್ಷಣಕ್ಕೆ ನಮ್ಮ ಟ್ರಸ್ಟ್ ನಿಂದ ಹತ್ತು ಹಲವು ಸೌಲಭ್ಯಗಳನ್ನು ಮಾಡುತ್ತಾ ಬಂದಿದ್ದೇವೆ,ಪ್ರತಿಯೋಬ್ಬ ಮಕ್ಕಳು ಶಿಕ್ಷಣವನ್ನು ಪಡೆಯಬೇಕು, ನಮ್ಮ ಜಿಲ್ಲೆಯ ಅಭಿವೃದ್ಧಿ ಬಹಳ ಆಗಬೇಕಿದೆ, ಹಲವು ಸೌಲಭ್ಯಗಳಿಂದ ನಮ್ಮ ಘಟ್ಟದ ಮೇಲಿನ ತಾಲೂಕುಗಳು ಮುಖ್ಯವಾಗಿ ಸಿರಸಿ ಸಿದ್ದಾಪುರ ಭಾಗದಲ್ಲಿ ವಂಚಿತವಾಗಿದೆ, ಇನ್ನೂ ಹಲವು ಸೌಲಭ್ಯಗಳು ಅವಶ್ಯವಾಗಿ ಬೇಕಾಗಿದೆ, ಅವುಗಳ ಬಗ್ಗೆ ನಾವು ಸದಾ ಹತ್ತಾರು ವರ್ಷಗಳಿಂದ ಹೋರಾಡುತ್ತೀದ್ದೇವೆ, ಮುಖ್ಯವಾಗಿ ಶಿಕ್ಷಕಣವೇ ದೇವರು ಎಂದು ಸ್ಪುಟವಾಗಿ ನುಡಿದರು,
ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸಿದ್ಧಿವಿನಾಯಕ ಯಕ್ಷಬಳಗ ನಾಣಿಕಟ್ಡಾ ಇದರ ಮುಖ್ಯಸ್ಥರಾದ ಕ್ರೀಯಾಶೀಲ ಕೃಷಿಕ ಶ್ರೀ ಎಂ.ಎA.ಹೆಗಡೆ ಹಂಗಾರಖAಡ, ತ್ಯಾಗಲಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀ ಗಣಪತಿ ಅಣ್ಣಪ್ಪ ಹೆಗಡೆ ತ್ಯಾಗಲಿ, ತ್ಯಾಗಲಿ ಸೋಸೈಟಿಯ ನಿರ್ದೇಶಕರಾದ ಸಾಮಜಿಕ ಕಾರ್ಯಕರ್ತರಾದ ಶ್ರೀ ನಾಗರಾಜ ರಾಮ ನಾಯ್ಕ ಹಂಗಾರಖAಡ, ಸಾಮಾಜಿಕ ದುರೀಣರಾದ ಶ್ರೀ ಉಪೇಂದ್ರ ಪೈ ಸೇವಾ ಟ್ರಸ್ಟ್ ಸಿರಸಿ ಇದರ ಸಿದ್ದಾಪುರ ತಾಲೂಕಾ ಭಾಗದ ಮುಖ್ಯಸ್ಥರುಗಳಾದ, ಯಕ್ಷಬಳಗದ ಪ್ರಧಾನ ಕಾರ್ಯದರ್ಶಿ ಶ್ರೀ ರಮೇಶ್ ತಿಮ್ಮಾ ನಾಯ್ಕ ಹಂಗಾರಖAಡ,ಉಪೇAದ್ರ ಪೈ ಸೇವಾ ಟ್ರಸ್ಟ್ ನಾಣಿಕಟ್ಟಾ ಭಾಗದ ಪ್ರಮುಖರಾದ, ಸಾಮಾಜಿಕ ಹೋರಾಟಗಾರರಾದ ಶ್ರೀ ರಾಮಕೃಷ್ಣ ಮಾ ಭಟ್ಟ ಶೇಲೂರು,ಮತ್ತು ಪ್ರೌಢಶಾಲೆಯ ಹಿರಿಯ ಸಹಾಯಕ ಶಿಕ್ಷಕರು ಶ್ರೀಮತಿ ರೀನಾ ಎನ್ ನಾಯಕ,ಅವರು,ಶ್ರೀ ಆದರ್ಶ ನಾಯ್ಕ ಅಂಬಳ್ಳಿ, ಶ್ರೀ ನಟರಾಜ ಎಂ ಹೆಗಡೆ,ಪ್ರೌಡಶಾಲೆ ಶಿಕ್ಷಕರು,ಶಿಕ್ಷಕಿಯರು ಉಪಸ್ಥಿತರಿದ್ದರು..
ಈ ಶುಭ ಸಮಾರಂಭದಲ್ಲಿ ಉದ್ಯಮಿ, ಶಿಕ್ಷಣಪ್ರೇಮಿ,ಕಲಾ ಪ್ರೇಮಿಗಳಾದ ಶ್ರೀ ಉಪೇಂದ್ರ ಪೈ ಅವರಿಗೆ ಶ್ರೀ ಸಿದ್ಧಿವಿನಾಯಕ ಯಕ್ಷಬಳಗ ನಾಣಿಕಟ್ಟಾ, ಮತ್ತು ಶಿಕ್ಷಣ ಪ್ರೇಮಿಗಳ ವತಿಯಿಂದ ವೇದಿಕೆಯ ಗಣ್ಯರಿಂದ “ಗೌರವ ಸನ್ಮಾನ” ಮಾಡಲಾಯಿತು. ಸೇರಿದ ಎಲ್ಲರಿಗೂ ಮಕ್ಕಳಿಗೂ ಸಹ ಸಿಹಿ ಹಂಚಲಾಯಿತು..
ತ್ಯಾಗಲಿಯ ಕಿರಿಯ ಪ್ರಾಥಮಿಕ ಶಾಲೆ ವನಶ್ರೀ ನಗರ ತ್ಯಾಗಲಿ ಶಾಲೆಗೆ ಶ್ರೀ ಉಪೇಂದ್ರ ಪೈ ಸಿರಸಿ ಭೇಟಿ ನೀಡಿ ಅಲ್ಲಯ ಪುಟ್ಟ ಮಕ್ಕಳಿಗೆ ನೋಟ್ ಬುಕ್ ಗಳನ್ನು ವಿತರಿಸಿ ಶಿಕ್ಷಣದ ಬಗ್ಗೆ ಆಸಕ್ತಿ, ಒಲವು ಬರಲಿ ಎಂದು ಪ್ರೋತ್ಸಾಹಿಸಿದರು……
ಈ ಸಂದರ್ಭದಲ್ಲಿ ಶಾಲೆಯ ಮಕ್ಕಳ ಪಾಲಕರು, ಅಧ್ಯಕ್ಷ ರು, ಉಪಾಧ್ಯಕ್ಷ ರು, ಮುಖ್ಯ ಶಿಕ್ಷಕರು, ಅಂಗನವಾಡಿ ಕೇಂದ್ರದ ಮೇಲ್ವಿಚಾರಕರು, ಸಹಾಯಕರು, ಪಾಲಕ -ಪೋಷಕರು ಉಪಸ್ಥಿತರಿದ್ದರು.. …
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ