December 22, 2025

ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ


ದಿನಾಂಕ 20-12-2025 ಶನಿವಾರದಂದು ಎಸ್ ಎಸ್ ಎಸ್ ಕೆ ಪಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಮ್ಮೇಳನದ ಉದ್ಘಾಟಕರಾಗಿ ಆಗಮಿಸಿದ ಶ್ರೀ ಎಸ್ ರವಿ ಬೇಳೂರ್ಕರ್ ನ್ಯಾಯವಾದಿಗಳು ಕಾರವಾರ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಕ್ಕಳಲ್ಲಿ ಸಚ್ಚಾರಿತ್ರ್ಯ ನಿರ್ಮಾಣಕ್ಕೆ ಮೌಲ್ಯ ಶಿಕ್ಷಣ ಅತ್ಯಂತ ಅಗತ್ಯ ಎನ್ನುವಂತಹ ವಿಷಯದ ಅಡಿಯಲ್ಲಿ ತಮ್ಮ ನುಡಿಗಳನ್ನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ರಾಮಕೃಷ್ಣ ಟಿ. ಹೆಗಡೆ ನಿವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರವರು ಮಾತನಾಡಿ ಹಳಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು ಎಂಬಂತೆ ಹಿರಿಯರ ಅನುಭವದ ನುಡಿಗಳೇ ನಮಗೆ ಮುಂದಿನ ದಾರಿದೀಪ ಎನ್ನುವಂತ ಪ್ರೇರಣಾದಾಯಕ ಮಾತುಗಳನ್ನಾಡಿದರು.

ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ರಾಮದಾಸ್ ಜೆ ಆಚಾರಿ ಜಿಲ್ಲಾಧ್ಯಕ್ಷರು ಶ್ರೀ ಸತ್ಯಸಾಯಿ ವಿದ್ಯಾಸಂಸ್ಥೆಗಳು ಅರೇ ಅಂಗಡಿ ರವರು ಭರವಸೆಯ ನುಡಿಗಳನ್ನಾಡಿದರು. ಶಾಲೆಯ ಮುಖ್ಯೋಪಾಧ್ಯಾಯರಾದಂತಹ ಶ್ರೀಮತಿ ಶೈಲ ಹೆಗಡೆಯವರು ಶಾಲಾ ವರದಿಯನ್ನು ವಾಚಿಸಿದರು. ಸಹ ಶಿಕ್ಷಕಿ ಆದಂತ ಗಾಯತ್ರಿ ಹೆಗಡೆಯವರು ಸ್ವಾಗತಿಸಿದರು.

ಸಹಶಿಕ್ಷಕಿ ದೀಪ್ತಿ ಮಿರಾಂಡ ರವರು ವಂದರ್ನಾರ್ಪಣೆಯನ್ನು ನೆರವೇರಿಸಿದರು. ಅತ್ಯುತ್ತಮವಾದಂತಹ ಸಭಾ ಕಾರ್ಯಕ್ರಮದ ಮುಕ್ತಾಯದ ನಂತರ ವಿದ್ಯಾರ್ಥಿಗಳಿಂದ ಅತ್ಯಮೋಘ ವಾದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸರ್ವರ ಸಹಾಯ ಸಹಕಾರದೊಂದಿಗೆ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

About The Author

error: Content is protected !!