ಭಟ್ಕಳ: ತಾಲ್ಲೂಕಿನ
ಮೂಡಭಟ್ಕಳದಲ್ಲಿರುವ ಮುಕ್ತಿದಾಮ ಹಿಂದು ರುದ್ರಭೂಮಿಯನ್ನು ಮೂಡಭಟ್ಕಳದ ಕ್ರಿಯೇಟಿವ್ ಬಾಯ್ಸ್ ಯುವಕರು ಸ್ವಯಂಪ್ರೇರಿತವಾಗಿ ಶುಚಿಗೊಳಿಸಿದರು.
ರುದ್ರಭೂಮಿಯಲ್ಲಿ ದೀರ್ಘಕಾಲದಿಂದ ಜಮಾಯಿಸಿದ್ದ ಪ್ಲಾಸ್ಟಿಕ್ ತ್ಯಾಜ್ಯ, ಕಸಕಡ್ಡಿ ಹಾಗೂ ಒಣಗಿದ ಎಲೆಗಳನ್ನು ತೆರವುಗೊಳಿಸಿ ಸ್ಥಳವನ್ನು ಸ್ವಚ್ಛ ಹಾಗೂ ಸುವ್ಯವಸ್ಥಿತಗೊಳಿಸಲಾಯಿತು. ಸಾರ್ವಜನಿಕ ಉಪಯೋಗದ ಸ್ಥಳಗಳನ್ನು ಸ್ವಚ್ಛವಾಗಿ ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂಬ ಸಂದೇಶವನ್ನು ಯುವಕರು ಈ ಕಾರ್ಯದ ಮೂಲಕ ಸಮಾಜಕ್ಕೆ ನೀಡಿದ್ದಾರೆ.
ಯುವಕರ ಈ ಸೇವಾಭಾವದ ಸಮಾಜಮುಖಿ ಕಾರ್ಯಕ್ಕೆ ಸ್ಥಳೀಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದರು. ಇಂತಹ ಸ್ವಯಂಸೇವಾ ಮತ್ತು ಪರಿಸರಪರ ಕಾರ್ಯಗಳು ಮುಂದುವರಿಯಬೇಕೆಂದು ಸಾರ್ವಜನಿಕರು ಆಶಿಸಿದ್ದಾರೆ.

More Stories
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ
ನಿಚ್ಚಲಮಕ್ಕಿ ಸಭಾಭವನದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ
ಭಟ್ಕಳ: ಪಲ್ಸ್ ಪೋಲಿಯೊ ಅಭಿಯಾನಕ್ಕೆ ಸಚಿವ ಮಂಕಾಳ ವೈದ್ಯ ಚಾಲನೆ