December 22, 2025

ಸದೃಢ, ಸಶಕ್ತ ರಾಷ್ಟ್ರದ ನಿರ್ಮಾಣಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಮಲ್ಲಿಕಾರ್ಜುನ

ಕೃಷ್ಣರಾಜಪೇಟೆ : ಸಶಕ್ತ, ಸದೃಢ ರಾಷ್ಟ್ರದ ನಿರ್ಮಾಣಕ್ಕೆ ತಾಂತ್ರಿಕತೆ ಹಾಗೂ ವೃತ್ತಿ ಕೌಶಲ್ಯದ ಮೂಲಕ ಕೊಡುಗೆ ನೀಡುತ್ತಿರುವ ವಿಶ್ವಕರ್ಮ ಸಮಾಜದ ಸೇವೆಯು ಅಪಾರವಾಗಿದೆ ಎಂದು ಸಮಾಜ ಸೇವಕ ಮಲ್ಲಿಕಾರ್ಜುನ ಹೇಳಿದರು.

ಅವರು ಕೃಷ್ಣರಾಜಪೇಟೆ ಪಟ್ಟಣದ ಎಂ.ಕೆ.ಬೊಮ್ಮೇಗೌಡ ಸಹಕಾರ ಭವನದಲ್ಲಿ ವಿಶ್ವಕರ್ಮ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ, ಸಮಾಜದ ಸಾಧಕರನ್ನು ಸನ್ಮಾನಿಸಿ, ಗೌರವಿಸಿ ಮಾತನಾಡಿದರು. ವಿಶ್ವಕರ್ಮ ಸಮಾಜವು ತಮ್ಮ ಪಂಚ ಕಸುಬುಗಳ ಮೂಲಕ ರೈತಾಪಿ ವರ್ಗದ ಜನರಿಗೆ ಬೇಕಾಗುವ ಕೃಷಿ ಪರಿಕರಗಳು, ಮನೆಯ ಕಿಟಕಿ ಬಾಗಿಲುಗಳು ಸೇರಿದಂತೆ ಹೆಣ್ಣು ಮಕ್ಕಳು ಧರಿಸುವ ಆಭರಣಗಳು ಹಾಗೂ ನಾವು ಪೂಜಿಸುವ ದೇವರ ಮೂರ್ತಿಗಳನ್ನು ತಮ್ಮ ವೃತ್ತಿ ಕೌಶಲ್ಯದ ಮೂಲಕ ತಯಾರಿಸಿಕೊಟ್ಟು ರಾಷ್ಟ್ರದ ಮುನ್ನಡೆಗೆ ತಮ್ಮ ಅಪಾರ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ ಸಮಾಜದ ಬಂಧುಗಳು ತಮ್ಮ ವೃತ್ತಿ ಕೌಶಲ್ಯದ ಜೊತೆಗೆ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯನ್ನು ಕೊಡಿಸುವ ಮೂಲಕ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಪಡೆದುಕೊಂಡು ಸಾಧನೆ ಮಾಡುವಂತೆ ಬೆನ್ನು ತಟ್ಟಿ ಪ್ರೋತ್ಸಾಹಿಸಬೇಕು. ವಿದ್ಯೆಯ ಜ್ಞಾನದ ಬೆಳಕಿನ ಶಕ್ತಿಯು ನಮ್ಮಿಂದ ಯಾರೂ ಕೂಡ ಕದಿಯಲಾಗದ ಆಸ್ತಿಯಾಗಿರುವುದರಿಂದ ನಮ್ಮ ಮಕ್ಕಳು ಕೇವಲ ಕೆಲಸಗಾರರಾಗಿ ತಮ್ಮ ಜೀವಿತವನ್ನು ಕಳೆಯದೇ ಶಿಕ್ಷಣದ ಮೂಲಕ ಸಮಾಜದಲ್ಲಿನ ಉನ್ನತವಾದ ಸ್ಥಾನಗಳನ್ನು ಪಡೆದುಕೊಂಡು ಸಾಧನೆ ಮಾಡುವಂತೆ ಪ್ರೋತ್ಸಾಹಿಸಬೇಕು ಎಂದರು.

ಶಾಸಕ ಎಚ್ ಟಿ ಮಂಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿಶ್ವಕರ್ಮ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಆಯ್ಕೆಯಾದ ಪ್ರೆಸ್ ಕುಮಾರಸ್ವಾಮಿ ಹಾಗೂ ಸಂಘದ ಸಿಇಒ ರೂಪೇಶಾಚಾರ್ ಸೇರಿದಂತೆ ಸಂಘದ ಆಡಳಿತ ಮಂಡಳಿಯ ಸದಸ್ಯರಿಗೆ ಪ್ರಮಾಣ ಪತ್ರಗಳನ್ನು ನೀಡಿ ಸನ್ಮಾನಿಸಿ ಗೌರವಿಸಿದರು.

ರಾಯಚೂರಿನ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಯಂತರರಾದ ಗುರುರಾಜ್, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್, ವಿಶ್ವಕರ್ಮ ಸಮಾಜದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಸುದರ್ಶನ್ ವಿಶ್ವಕರ್ಮ ವಿವಿದೋದ್ದೇಶ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಉದ್ಯಮಿ ರಾಜಶೇಖರ್ ಪ್ರೌಢಶಾಲಾ ಶಿಕ್ಷಕರಾದ ಸುರೇಶ್, ಉದ್ಯಮಿ ವಾಸುದೇವ್, ಪುರಸಭೆ ಮಾಜಿ ಸದಸ್ಯ ಕೆ.ಆರ್.ಹೇಮಂತ್ ಕುಮಾರ್, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಪುಟ್ಟರಾಜು, ಪಾಂಡವಪುರದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಹರೀಶ್ ವಿಶ್ವಕರ್ಮ, ಮಲ್ಲಿಕಾರ್ಜುನ ಚಾರಿಟಬಲ್ ಟ್ರಸ್ಟ್ ನ ಟ್ರಸ್ಟಿ ಗಂಜಿಗೆರೆ ಮಹೇಶ್, ಮಂಡ್ಯ ಜಿಲ್ಲಾ ಬಿಜೆಪಿ ಓಬಿಸಿ ಮೋರ್ಚಾ ಅಧ್ಯಕ್ಷ ನರಸಿಂಹಚಾರ್, ಶಿಕ್ಷಣ ತಜ್ಞ ಸೂರ್ಯನಾರಾಯಣ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮೋದೂರು ಪುರುಷೋತ್ತಮ, ಮಹಿಳಾ ಹೋರಾಟಗಾರ್ತಿ ಅನುಸೂಯಮ್ಮ ನಾಗಾಚಾರ್, ಗ್ಯಾರೆಂಟಿ ಕಾರ್ಯಕ್ರಮಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಎ.ಬಿ. ಕುಮಾರ್ ಸೇರಿದಂತೆ ಸಮಾಜದ ಗಣ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ ಮಂಡ್ಯ.

About The Author

error: Content is protected !!