

ಹೊನ್ನಾವರ : ಪಟ್ಟಣದ ಬಾಂದೆಹಳ್ಳದಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ವತಿಯಿಂದ ರಕ್ಷಾಬಂಧನ, ಧಾರ್ಮಿಕ ಪ್ರವಚನ ಹಾಗೂ ತಾಲೂಕಿನ ಪತ್ರಕರ್ತರಿಗೆ ಸನ್ಮಾನ ಕಾರ್ಯಕ್ರಮ ಗುರುವಾರದಂದು ನಡೆಯಿತು.

ಹುಬ್ಬಳ್ಳಿಯ ಈಶ್ವರಿ ವಿಶ್ವವಿದ್ಯಾಲಯದ ರಾಜಯೋಗಿ ಬ್ರಹ್ಮಕುಮಾರಿ ನಿರ್ಮಲಾಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಈಶ್ವರಿ ವಿಶ್ವವಿದ್ಯಾಲಯ ಈ ಮನುಕುಲದ ಉದ್ದಾರಕ್ಕಾಗಿ ಮನಸ್ಸಿನಲ್ಲಿ, ಮನೆಯಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತಿದೆ. ಈ ದೇಹ ನಶ್ವರ, ಆತ್ಮ ಮಾತ್ರ ಪರಮಾತ್ಮನದಾಗಿದೆ. ನಾವು ಸದಾಕಾಲ ಸಂತೋಷವಾಗಿರಬೇಕಾದರೇ ನಾವು ಪರಮಾತ್ಮನನ್ನು ನೆನಿಸಿಕೊಳ್ಳಬೇಕು ಎಂದರು.

ಹಿರಿಯ ಪತ್ರಕರ್ತರಾದ ಜಿ. ಯು ಭಟ್ ಮಾತನಾಡಿ, ಆಧ್ಯಾತ್ಮಿಕತೆಗಾಗಿ ತಮ್ಮ ಜೀವನವನ್ನು ಮುಡುಪಿಟ್ಟಿದ್ದಾರೆ. ಸಾಂಸಾರಿಕ ಬಂಧನಕ್ಕೆ ಒಳಗಾಗದೇ ಸಮಾಜಕ್ಕೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುವ ಬ್ರಹ್ಮಕುಮಾರಿ ಮಾತೆಯರ ಸೇವೆ ಅಭಿನಂದನಾರ್ಹವಾಗಿದೆ. ಈಶ್ವರಿ ವಿಶ್ವವಿದ್ಯಾಲಯದ ಸಹೋದರಿಯರು, ಮಾತೆಯರು ರಕ್ಷಾಬಂಧನ ದಿನದಲ್ಲಿ ಎಲ್ಲ ಪತ್ರಕರ್ತರನ್ನು ಕರೆದು ಸನ್ಮಾನಿಸಿರುವುದಕ್ಕೆ ಅಭಿನಂದಿಸಿದರು.






ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಮಾತೆಯರು ,ಸಹೋದರಿಯರು ಪತ್ರಕರ್ತರಿಗೆ ರಾಖಿಯನ್ನು ಕಟ್ಟಿ ತಾಲೂಕಿನ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಿದರು. ಡಾ. ಮಂಜುಳಾ ಗುರುರಾಜ್, ತಾರಾ ಭಟ್, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಉಷಾ ಸಂಘಟನೆಯ ಪ್ರಮುಖರು ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ