March 2, 2026

ಭಟ್ಕಳ ತಾಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ

ಭಟ್ಕಳ ತಾಲೂಕು ಮಡಿವಾಳರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಶಿರಾಲಿಯ ಶ್ರೀ ಹಾದಿ ಮಾಸ್ತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾಗಿರುವ ಶ್ರೀ ರಮೇಶ್ ಮಡಿವಾಳರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂಧರ್ಭದಲ್ಲಿ ಕರ್ನಾಟಕ ಯೂನಿವರ್ಸಿಟಿ ಧಾರವಾಡದ 2025 ನೇ ಸಾಲಿನ ಬಿಎಸ್ಸಿ ಪರೀಕ್ಷೆಯಲ್ಲಿ ವಿಶ್ವವಿದ್ಯಾಲಯಕ್ಕೆ 6ನೇ ರ್ಯಾಂಕ್ ಪಡೆದಿರುವ ಕುಮಾರಿ ಸಿಂಚನಾ ತಿಮ್ಮಪ್ಪ ಮಡಿವಾಳ ಹಾಗೂ ಕರ್ನಾಟಕ ಯೂನಿವರ್ಸಿಟಿ ಧಾರವಾಡದ ಕಬ್ಬಡ್ಡಿ ತಂಡಕ್ಕೆ ಆಯ್ಕೆ ಆಗಿ ಯೂನಿವರ್ಸಿಟಿ ಬ್ಲೂ ಆಗಿರುವ ಪವಿತ್ರ ರಘುರಾಮ ಮಡಿವಾಳ ಮತ್ತು ಕರ್ನಾಟಕ ಎಕ್ಸಾಮಿನೇಶಾನ್ ಬೋರ್ಡ್ ಅವರು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿರುವ ನಾಗರಾಜ್ ಗಣೇಶ ಶಿರಾಲಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಸಂಘದ ಮಾರ್ಗದರ್ಶಕರಾಗಿರುವ ಆಳ್ವೆಕೋಡಿ ದುರ್ಗಾ ಪರಮೇಶ್ವರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕರಾಗಿರುವ ಶ್ರೀ ಕೆ. ಬಿ. ಮಡಿವಾಳ ಅವರು ಅತ್ಯಂತ ಚಿಕ್ಕ ಸಮಾಜವಾಗಿರುವ ಮಡಿವಾಳ ಸಮಾಜದಲ್ಲಿ ಸಾಧನ ಮಾಡಿರುವ ಅನೇಕ ಪ್ರತಿಭಾವಂತರು ಎಲೆ ಮರೆಯ ಕಾಯಿ ಅಂತೇ ಇದ್ದು ಅವರನ್ನು ಈ ಸಂಧರ್ಭದಲ್ಲಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಸಮಾಜ ಬಂದವರನ್ನು ಒಗ್ಗೂಡಿಸುವ ಕಾರ್ಯ ಆಗಬೇಕಿದೆಂದು ಅನಿಸಿಕೆ ವ್ಯಕ್ತ ಪಡಿಸಿದ್ದರು. ಇನ್ನೋರ್ವ ಸಂಘದ ಮಾರ್ಗದರ್ಶಕರಾಗಿರುವ ಶ್ರೀವಲಿ ಪ್ರೌಡ ಶಾಲೆ ಚಿತ್ರಪುರದ ಮುಖ್ಯಾಧ್ಯಾಪಕರಾದ ಶ್ರೀಮತಿ ಮಮತಾ ಮಡಿವಾಳರವರು ಮಾತನಾಡುತ್ತಾ ನಮ್ಮ ಸಮಾಜದ ಪ್ರತಿಭೆಗಳು ಬೆಳಕಿಗೆ ಬರುತ್ತಿರುವುದು ಸಂತಸದ ವಿಷಯ. ಶೈಕ್ಷಣಿನಿಕವಾಗಿ ಅಭಿವೃದ್ಧಿ ಹೊಂದಿದ್ದಲ್ಲಿ ಎಲ್ಲಾ ಸಮಾಜದವರು ನಮ್ಮನ್ನು ಗುರುತಿಸುವಂತಾಗುತ್ತದೆ. ಆದ್ದರಿಂದ ಉನ್ನತ ಶಿಕ್ಷಣ ಎಲ್ಲರ ಗುರಿ ಆಗಲಿ ಎಂದು ಹೇಳಿದರು.

ಈ ಸಂಧರ್ಭದಲ್ಲಿ ಸಂಘದ ಗೌರವ ಅಧ್ಯಕ್ಷ ರಾಗಿರುವ ಶ್ರೀ ವೆಂಕಟೇಶ್ ಮಡಿವಾಳ ಶಿರಾಲಿ,ಉಪಾಧ್ಯಕ್ಷಕಾರಾಗಿರುವ ಶ್ರೀ ವಿಶ್ವನಾಥ ಮಡಿವಾಳ, ಕಾರ್ಯದರ್ಶಿ ಶ್ರೀ ನಿತ್ಯಾನಂದ ತೀರ್ಥಹಳ್ಳಿ, ಖಜಾಂಚಿ ಶ್ರೀ ರಾಜೇಶ ಮಡಿವಾಳ ಹಾಗೂ ಇತರೆ ಪದಾಧಿಕಾರಿಗಳು ಮತ್ತು ಸಮಾಜ ಬಾಂದವರು ಉಪಸ್ತಿತರಿದ್ದರು. ಸಂಘದ ಆರ್ಥಿಕ ಸಲಹೆಗಾರರಾಗಿರುವ ಶ್ರೀ ಕೃಷ್ಣಾನಂದ ಮಡಿವಾಳರವರು ಎಲ್ಲರನ್ನೂ ವಂದಿಸಿದರು. ಶಿಕ್ಷಕ ರಾಘವೇಂದ್ರ ಮಡಿವಾಳ ರವರು ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು.

About The Author

error: Content is protected !!