August 30, 2025

ಚಾತುರ್ಮಾಸ್ಯ ವ್ರತಚಾರಣೆ -ವರಮಹಾಲಕ್ಷ್ಮಿ ಪೂಜೆ

ಕುಮಟಾ: ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್‌ರ ಚಾತುರ್ಮಾಸ್ಯ ವ್ರತಾಚರಣೆಯ 30ನೇ ದಿನದ ಕಾರ್ಯಕ್ರಮದಲ್ಲಿ ಕುಮಟಾ ತಾಲೂಕಿನ ಹಿರೇಗುತ್ತಿ, ತೊರ್ಕೆ ಗ್ರಾಪಂ ಕೂಟದಿಂದ ಸಲ್ಲಿಸಲಾದ ಗುರು ಸೇವೆಯನ್ನು ಸ್ವೀಕರಿಸಿ ಪ್ರವಚನ ನೀಡಿದ ಶ್ರೀಗಳು, ವರ ಮಹಾಲಕ್ಷಿö್ಮÃ ವೃತದ ನಿಮಿತ್ತ ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯು ಗೃಹಿಣಿಯರಿಗಾಗಿ ವರ ಮಹಾಲಕ್ಷಿö್ಮÃ ವ್ರತಾಚರಣೆಯನ್ನು ಅರ್ಚಕರ ಮುಖೇನ ಕೈಗೊಳ್ಳಲಾಗಿತ್ತು. 160ಕ್ಕೂ ಹೆಚ್ಚು ಮಾತೆಯರು ಈ ವೃತಾಚರಣೆಯಲ್ಲಿ ಪಾಲ್ಗೊಂಡು ತಾಯಿ ವರ ಮಹಾಲಕ್ಷಿö್ಮÃ ಯಲ್ಲಿ ಪ್ರಾರ್ಥನೆ ಸಲ್ಲಿಸಿ, ವ್ರತಾಚರಣೆಯ ವಿಧಿವಿಧಾನವನ್ನು ನೆರವೇರಿಸಿ, ಪೂಜಿಸಿದ್ದಾರೆ. ತಾಯಂದಿರುವ ಸಂಕಲ್ಪ ಮಾಡಿಕೊಂಡ ಮನೋಕಾಮನೆಗಳನ್ನು ಜಗನ್ಮಾತೆಯಾದ ಆ ತಾಯಿ ಖಂಡಿತ ನೆರವೇರಿಸುತ್ತಾಳೆ. ವರ ಮಹಾಲಕ್ಷಿö್ಮÃ ವ್ರತಾಚರಣೆ ಕೈಗೊಳ್ಳುವುದರಿಂದ ಭಕ್ತರ ಇಷ್ಠಾರ್ಥ ನೆರವೇರಿ ಶಾಂತಿ, ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಮಹಾಶಿವ ಸ್ವತಃ ಪಾರ್ವತಿ ದೇವಿಯಲ್ಲಿ ಹೇಳಿದ್ದಾನೆ. ಹಾಗಾಗಿ ಮನುಷ್ಯ ಕೈಗೊಳ್ಳುವ ಪೂಜೆ, ಪುನಸ್ಕಾರ, ಭಜನೆ, ಸತ್ಸಂಗ, ವ್ರತಾಚರಣೆಗಳು ಬರ‍್ಮುಖವಾದ ನಮ್ಮ ಮನಸು ಅರ‍್ಮುಖವಾಗಿಸುತ್ತದೆ. ಇದರಿಂದ ಭಗವಂತನಲ್ಲಿ ಶ್ರದ್ಧೆ ಮೂಡಿ, ಭಕ್ತಿ ಪ್ರಜ್ವಲಿಸುತ್ತದೆ. ಇಂಥ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾಯಕ ಚಾತುರ್ಮಾಸ್ಯ ಕಾರ್ಯಕ್ರಮ ಮಾಡುತ್ತಿದೆ. ಇನ್ನು ಹೊನ್ನಾವರದ ವಕೀಲರಾದ ಕೆ ಆರ್ ನಾಯ್ಕರು ವಿಷ್ಣು ಸಹಸ್ರ ನಾಮಾವಳಿ ಪುಸ್ತಕವನ್ನು ಮುದ್ರಿಸಿ, ಭಕ್ತರಿಗೆ ವಿತರಿಸುವ ಮೂಲಕ ಶ್ರೀಮನ್ ನಾರಾಯಣನ ಸ್ಲೋಕ ಪಠಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಭಕ್ತರು ವಿಷ್ಣು ಸಹಸ್ರ ನಾಮಾವಳಿಯನ್ನು ಪಠಿಸುವ ಮೂಲಕವೂ ತಮ್ಮ ಇಷ್ಠಾರ್ಥವನ್ನು ಸಿದ್ಧಿಸಿಕೊಳ್ಳಬಹುದು ಎಂದು ಶ್ರೀಗಳು ನುಡಿದರು.

ವರ ಮಹಾಲಕ್ಷಿö್ಮÃ ಹಬ್ಬದ ನಿಮಿತ್ತ ಚಾತುರ್ಮಾಸ್ಯ ವೃತಾಚರಣೆ ಸಮಿತಿಯು ಗೃಹಿಣಿಯರಿಗಾಗಿ ಆಯೋಜಿಸಿದ್ದ ವರ ಮಹಾಲಕ್ಷಿö್ಮÃ ವ್ರತಾಚರಣೆಯಲ್ಲಿ 160ಕ್ಕೂ ಅಧಿಕ ಗೃಹಿಣಿಯರು ಪಾಲ್ಗೊಂಡು ಮಹಾಲಕ್ಷಿö್ಮÃಯನ್ನು ಕಲಸದಲ್ಲಿ ಪ್ರತಿಷ್ಠಾಪಿಸಿ, ಅರ್ಚಕರ ಮುಖೇನ ಸಾಮೂಹಿಕವಾಗಿ ಪೂಜೆ ಸಲ್ಲಿಸಿ, ಧನ್ಯತೆ ಮರೆದರು. ಚಾತುರ್ಮಾಸ್ಯ ವ್ರತಾಚರಣೆ ಸಮಿತಿಯ ಈ ಪುಣ್ಯದ ಕಾರ್ಯಕ್ಕೆ ಮಹಿಳೆಯರು ಕೃತಜ್ಞತೆ ಸಲ್ಲಿಸಿದರು. ಶ್ರೀಗಳು ಈ ವ್ರತಾಚರಣೆಯ ಪೂಜೆಯನ್ನು ವೀಕ್ಷಿಸಿ, ಖುಷಿಯಿಂದ ಮುತೈದೆಯರಿಗೆ ಹರಸುವ ಮೂಲಕ ನಿಮ್ಮ ಮನೋಕಾಮನೆಗಳು ವರ ಮಹಾಲಕ್ಷಿö್ಮÃ ಈಡೇರಿಸಲಿ ಎಂದು ಆಶೀರ್ವದಿಸಿದರು.
ಅಲ್ಲದೇ ಹೊನ್ನಾವರ ವಕೀಲರಾದ ಕೆ ಆರ್ ನಾಯ್ಕರು ನೀಡಿದ 1500ಕ್ಕೂ ಹೆಚ್ಚು ವಿಷ್ಣು ಸಹಸ್ರನಾಮ ಸ್ತೋತ್ರಮ್ ಹಾಗೂ ನಾಮಾವಳಿ ಪುಸ್ತಕವನ್ನು ಭಕ್ತಾದಿಗಳಿಗೆ ಗುರುಗಳ ಸಮ್ಮುಖದಲ್ಲಿ ವಿತರಿಸಲಾಯಿತು ಚಾತುರ್ಮಾಸ್ಯ ವ್ರತಚಾರಣೆಯ 30ನೇ ದಿನದ ಕಾರ್ಯಕ್ರಮದಲ್ಲಿ ಹಿರೇಗುತ್ತಿ ಮತ್ತು ತೊರ್ಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರೇಗುತ್ತಿ,ಮೊರಾಬಾ, ಬಳಲೇ, ಮಾದನಗೇರಿ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು.


ಐ. ಜಿ. ನಾಯ್ಕ್ ಶಿಕ್ಷಕರು ಹಿರೇಗುತ್ತಿ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ ಹನೆಹಳ್ಳಿ, ಪ್ರೀತಮ್ ಮತ್ತು ಮಣಿಕಂಠ ಹಿರೆಗುತ್ತಿ ಬ್ರಹ್ಮಜಟಕ ಸಂಘದ ಸದಸ್ಯರು ಹಾಗೂ ಜಯಂತ್ ಗಣಪಯ್ಯ ನಾಯ್ಕ್ ಬೆಟ್ಕುಳಿ- ಆತ್ಮಾನಂದ ಸ್ವಾಮೀಜಿ ಪ್ರತಿಮೆಯ ಕೊಡುಗೆದಾರರು ಇವರು ಆಗಮಿಸಿದ್ದರು. ಚಂದ್ರಶೇಖರ್ ಎಸ್ ನಾಯ್ಕ್ ಹೆರವಟ್ಟಾ, ಅಧ್ಯಕ್ಷರು ಹಾಗೂ ಸಿಬ್ಬಂದಿ ವರ್ಗ ವ್ಯವಸಾಯ ಸೇವಾ ಸಹಕಾರಿ ಸಂಘ ಹನೆಹಳ್ಳಿ ಇವರು ಗುರು ಸೇವೆ ಸಲ್ಲಿಸಿದರು. ಹಿರೇಗುತ್ತಿ ಗ್ರಾಮ ಪಂಚಾಯತ ವಾಪ್ತಿಯ ಗಂಗಾಧರ್ ಯೇಸು ನಾಯ್ಕ್ ಹಿರೇಗುತ್ತಿ ಮತ್ತು ಶ್ರೀಕಾಂತ ಮಾರಿ ನಾಯ್ಕ್ ಮೊರಬಾ ಇವರು ಸಿಹಿ ವಿತರಿಸಿದರು.

ಮಧ್ಯಾಹ್ನ ನಡೆದ ಪ್ರಸಾದ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ, ಧನ್ಯತೆ ಮರೆದರು. ಯಶವಂತ ನಾಯ್ಕರು ಕಾರ್ಯಕ್ರಮದ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಚಾತುರ್ಮಾಸ್ಯ ವ್ರತಾಚರಣೆ ಸಮಿತಿ ಅಧ್ಯಕ್ಷರಾದ ಎಚ್ ಆರ್ ನಾಯ್ಕ ಕೋನಳ್ಳಿ, ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕರು, ಎರಡು ಸಮಿತಿಗಳ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು. ಪ್ರಮುಖರಾದ ಸೂರಜ್ ನಾಯ್ಕ ಸೋನಿ, ರತ್ನಾಕರ ನಾಯ್ಕ, ಗಜು ನಾಯ್ಕ ಅಳ್ವೆಕೋಡಿ, ಸುರೇಶ ನಾಯ್ಕ, ಪ್ರಮೋದ ನಾಯ್ಕ, ಇತರರು ಇದ್ದರು.

About The Author