August 30, 2025

ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ

ಬೈಂದೂರು : ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ಇದರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಶನಿವಾರ ಉಪ್ಪುಂದ ಪರಿಚಯ ದೇವಕಿ ಜಿ. ಆರ್ ಸಭಾಂಗಣದಲ್ಲಿ ನಡೆಯಿತು.

ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ಇದರ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಅಧ್ಯಕ್ಷತೆ ವಹಿಸಿ, ಮಾತನಾಡಿ, ಸಂಘವು 83.19 ಲಕ್ಷ ವ್ಯವಹಾರ ನಡೆಸಿದ್ದು 26.74 ಲಕ್ಷ ಲಾಭಗಳಿಸಿದ್ದು ಸಂಘದ ಸದಸ್ಯರಿಗೆ ಶೇ.10.05% ಡಿವಿಡೆಂಡ್ ಘೋಷಣೆ ಮಾಡಲಾಗಿದೆ.ಜನರಿಗೆ ಉತ್ತಮ ಆರ್ಥಿಕ ಸೌಲಭ್ಯಗಳನ್ನು ಒದಗಿಸಲು ನಿಟ್ಟಿನಲ್ಲಿ ಆರಂಭಿಸಿದ ಸಂಸ್ಥೆಗೆ ಜನರ ಉತ್ತಮ ಸಹಕಾರದಿಂದಾಗಿ ವರ್ಷದಿಂದ ವರ್ಷಕ್ಕೆ ಉತ್ತಮ ಪ್ರಗತಿ ಸಾಧಿಸಿದೆ. ಇದಕ್ಕೆ ಸಿಬಂದಿಗಳ ಪರಿಶ್ರಮ ಶ್ಲಾಘನೀಯವಾಗಿದ್ದು ಮುಂದಿನ ದಿನಗಳಲ್ಲಿ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸುವುದು ಹಾಗೂ ಶಾಖೆಗಳು ಸ್ವಂತ ಕಟ್ಟಡವನ್ನು ಹೊಂದುವAತೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದರು.

ಸೊಸೈಟಿಯ ಎ ತರಗತಿಯ ಸದಸ್ಯರ ಮಕ್ಕಳಿಗೆ ಎಸ್. ಎಸ್. ಎಲ್. ಸಿ. ಯಲ್ಲಿ 95% ಹಾಗೂ ದ್ವಿತೀಯ ಪಿಯುಸಿ ಯಲ್ಲಿ 95% ಅಂಕ ಗಳಿಸಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ನಿರ್ದೇಶಕರಾದ ರಾಘವೇಂದ್ರ ಪೂಜಾರಿ ನಾರoಬಳ್ಳಿ, ದೇವನ್ ಕೆ ಪೂಜಾರಿ, ಮಾಲತಿ ಪೂಜಾರಿ, ಪಾರ್ವತಿ ಪೂಜಾರಿ, ಮಾಚಯ್ಯ ಪೂಜಾರಿ, ಗಿರೀಶ್ ಹೊಳ್ಳ, ರಾಮ ಗಾಣಿಗ, ಗೋವಿಂದ ಎನ್ ಪೂಜಾರಿ, ಲಾರೆನ್ಸ್ ಫೆರ್ನಾಂಡಿಸ್, ಮೂಕಾಂಬು ಪೂಜಾರಿ, ಮಂಜುನಾಥ ರಾಮ ನಾಯ್ಕ್, ಪದ್ಮಾ ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ (ನಿ.) ಉಪ್ಪುಂದ ಉಪಾಧ್ಯಕ್ಷ ಜಯರಾಮ ಶೆಟ್ಟಿ ಬಿಜೂರು ಸ್ವಾಗತಿಸಿದರು. ಶಾಖೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುಧಾಕರ ಪೂಜಾರಿ ವಾರ್ಷಿಕ ಲೆಕ್ಕ ಪತ್ರ ವಾಚಿಸಿದರು. ಬೈಂದೂರು ಶಾಖಾ ವ್ಯವಸ್ಥಾಪಕ ನಾಗರಾಜ್ ಯಡ್ತರೆ ಕಾರ್ಯಕ್ರಮ ನಿರೂಪಿಸಿದರು. ತ್ರಾಸಿ ಶಾಖಾ ವ್ಯವಸ್ಥಾಪಕ ಪ್ರವೀಣ್ ಆಚಾರ್ ತಗ್ಗರ್ಸೆ ವಂದಿಸಿದರು. ಸಿದ್ದಾಪುರ ಶಾಖಾ ವ್ಯವಸ್ಥಾಪಕ ಅಂಬರೀಶ್ ಪೂಜಾರಿ ಸಹಕರಿಸಿದರು.

ವರದಿ : ಎಚ್. ಸುಶಾಂತ್ ಆಚಾರ್ ಬೈಂದೂರು

About The Author