
ಹೊನ್ನಾವರ : ಪಟ್ಟಣದ ಶರಾವತಿ ವೃತ್ತದ ಬಳಿ ತಾಲೂಕಿನ ವಿವಿಧಡೆಯಿಂದ ಆಗಮಿಸಿದ ಆಶಾ ಕಾರ್ಯಕರ್ತೆಯರು ಘೋಷಣೆ ಕೂಗುವ ಮೂಲಕ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ ಕಛೇರಿಯವರೆಗೆ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣೆಗೆ ಮೂಲಕ ಆಗಮಿಸಿ ಮನವಿ ಸಲ್ಲಿಸಿದರು.
ಈ ಹಿಂದೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಜನವರಿಯಲ್ಲಿ ನಡೆದ ಪ್ರತಿಭಟನೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಪರಿಶೀಲಿಸಿ ಭರವಸೆ ನೀಡಿದ್ದರು. ಏಪ್ರಿಲ್ ೨೦೨೫ರಿಂದ ಮಾಸಿಕ ಕನಿಷ್ಠ ೧೦ ಸಾವಿರ ಗೌರವಧನ ನೀಡುವ ಅವರ ಮಾತು ಈಡೇರಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.
ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ಹೆಚ್ಚಿಸಿದಂತೆ ಆಶಾ ಕಾರ್ಯಕರ್ತೆಯರಿಗೂ ೧೦೦೦ರೂ ಹೆಚ್ಚಳ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಇದು ಇನ್ನೂ ಜಾರಿಯಾಗಿಲ್ಲ’ ಎಂದು ದೂರಿದರು. `ಆಶಾ ಕಾರ್ಯಕರ್ತೆಯರು ಗ್ರಾಮೀಣ ಹಾಗೂ ನಗರ ಕೊಳಚೆ ಪ್ರದೇಶಗಳಲ್ಲಿ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಕೆಲಸಕ್ಕೆ ತಕ್ಕ ವೇತನ ಸಿಗುತ್ತಿಲ್ಲ. ಕೊರೊನಾ ಸಮಯದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರಿಗೆ ಸರಕಾರದಿಂದ ನಿಗದಿತ ಪ್ರೋತ್ಸಾಹಧನ ಸಿಗದ ಪರಿಣಾಮ ಅವರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರು ದುಡಿದ ಹಣ ಸೂಕ್ತ ರೀತಿಯಲ್ಲಿ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಪ್ರತಿ ಕಾರ್ಯಕರ್ತೆಗೆ ೫,೦೦೦ರೂ ಮತ್ತು ಕೇಂದ್ರದಿAದ ರೂ.೨,೦೦೦ ನೀಡುವ ಪ್ರೋತ್ಸಾಹಧನ ಬರುತ್ತಿದೆ. ಆದರೆ ಕಳೆದ ಬಜೆಟ್‌ನಲ್ಲಿ ೧,೦೦೦ರೂ ಹೆಚ್ಚಳ ಘೋಷಣೆಯಾಗಿದ್ದರೂ, ಅದು ಕೆಲವೇ ಸದಸ್ಯರಿಗೆ ಮಾತ್ರ ಅನ್ವಯವಾಗಿದೆ. ಹೆರಿಗೆ, ಗರ್ಭಿಣಿಯರ ಆರೈಕೆ, ಲಸಿಕೆ ಸೇವೆಗಳಿಗೂ ಪ್ರೋತ್ಸಾಹಧನ ಸಿಗುತ್ತಿಲ್ಲ’ ಎಂದು ಸಮಸ್ಯೆಗಳ ಬಗ್ಗೆ ಹೇಳಿದರು.
ಕೆಲಸದ ಮೌಲ್ಯಮಾಪನದ ಹೆಸರಿನಲ್ಲಿ ಆಶಾಗಳ ಜನಸಂಖ್ಯೆ ಮಿತಿಯನ್ನು ಹೆಚ್ಚಿಸುವ ಅವೈಜ್ಞಾನಿಕ ನಿರ್ಧಾರವನ್ನು ಕೈಬಿಡಬೇಕು. ಸುಮಾರು ೨೦೦೦ ಆಶಾ ಸುಗಮಕಾರರನ್ನು ಯಾವುದೇ ಕಾರಣವಿಲ್ಲದೆ ಕೆಲಸದಿಂದ ತೆಗೆದುಹಾಕಿರುವ ಆದೇಶವನ್ನು ಹಿಂಪಡೆಯಬೇಕು. ನಿವೃತ್ತಿ ಹೊಂದಿದ ೬೦ ವರ್ಷ ಮೇಲ್ಪಟ್ಟ ಆಶಾ ಕಾರ್ಯಕರ್ತೆಯರಿಗೆ ಪರಿಹಾರ ನೀಡಬೇಕು. ನಗರ ಪ್ರದೇಶಗಳಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ೨೦೦೦ ಹೆಚ್ಚುವರಿ ಗೌರವಧನ ನೀಡುವಂತೆ ಮನವಿಯಲ್ಲಿ ಉಲ್ಲೆಖಿಸಲಾಗಿದೆ.
ತಹಶೀಲ್ದಾರ ಪ್ರವೀಣ ಕರಾಂಡೆ ಮನವಿ ಸ್ವೀಕರಿಸಿದರು.
ಮಹಾಲಕ್ಷ್ಮೀ ನಾಯ್ಕ ಪ್ರಭಾಮಣಿ ಹಳದೀಪುರ, ಜಯಲಕ್ಷ್ಮಿ ಕೊಡಿಯಾ, ಜಯಂತಿ ಮಂಕಿ, ನಿರ್ಮಲಾ ನಾಯ್ಕ ಬಳ್ಕೂರು, ರುಫಿನಾ ಹೊನ್ನಾವರ, ಮಂಜುಳಾ ಮೇಸ್ತ ಹೊಸಾಡ, ಜಯಲಕ್ಷ್ಮಿ ನಾಯ್ಕ ಕಡತೋಕಾ, ಕಮಲಾಕ್ಷಿ ಗೇರುಸೊಪ್ಪಾ, ಕವಿತಾ ಸಂಶಿ, ವಿದ್ಯಾ ಹೆಗಡೆ, ಮತ್ತಿತರರು ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ