August 30, 2025

ಕೆ.ಆರ್.ಪೇಟೆ ತಾಲೂಕಿನ ಭೂವರಹನಾಥ ಕ್ಷೇತ್ರದಲ್ಲಿ ನಡೆದ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮ

ರಾಜ್ಯದ ಮಾಜಿ ಸಚಿವ, ಶಾಸಕ ಜಿ.ಟಿ.ದೇವೇಗೌಡ ದಂಪತಿಗಳು ಭಾಗಿ. ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜೆ. ಹರಿದು ಬಂದ ಭಕ್ತ ಸಾಗರ.

ಕೆ.ಆರ್.ಪೇಟೆ : ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ, ಭೂ ವೈಕುಂಠವೆAದೇ ಪ್ರಖ್ಯಾತವಾಗಿರುವ ಕಲ್ಲಹಳ್ಳಿಯ ಶ್ರೀಲಕ್ಷ್ಮಿ ಸಮೇತ ಭೂವರಹನಾಥ ಸ್ವಾಮಿ ಸುಕ್ಷೇತ್ರವು ತಿರುಮಲ ತಿರುಪತಿಯ ಮಾದರಿಯಲ್ಲಿ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ರಾಜ್ಯದ ಮಾಜಿ ಸಚಿವರಾದ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.

ರೇವತಿ ನಕ್ಷತ್ರದ ಶುಭ ದಿನವಾದ ಇಂದು ತಮ್ಮ ಧರ್ಮಪತ್ನಿ ಲಲಿತಾ ಅವರೊಂದಿಗೆ ಭೂವರಹನಾಥ ಕ್ಷೇತ್ರಕ್ಕೆ ಆಗಮಿಸಿದ್ದ ಜಿ ಟಿ ದೇವೇಗೌಡ ಅವರು ವಿಶ್ವದಲ್ಲಿಯೇ ಅಪರೂಪದಾಗಿರುವ ೧೭ ಅಡಿ ಎತ್ತರದ ಸಾಲಿಗ್ರಾಮ ಶ್ರೀ ಕೃಷ್ಣ ಶಿಲೆಯ ಭೂವರಹನಾಥ ಸ್ವಾಮಿಯ ಅಭಿಷೇಕ, ಪುಷ್ಪಾಭಿಷೇಕ ಹಾಗೂ ಪಟ್ಟಾಭಿಷೇಕ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಪರೂಪದ ದೃಶ್ಯ ಕಾವ್ಯವನ್ನು ಕಣ್ತುಂಬಿಕೊAಡು ಸ್ವಾಮಿಯ ಕೃಪೆಗೆ ಪಾತ್ರರಾದರು.

ಬೆಳಗ್ಗೆ ೧೦ ಗಂಟೆಗೆ ಆರಂಭವಾದ ಅಭಿಷೇಕ ಕಾರ್ಯಕ್ರಮದಲ್ಲಿ ೧೦೦೦ ಲೀಟರ್ ಹಾಲು ೫೦೦ ಲೀಟರ್ ಎಳನೀರು ೫೦೦ ಲೀಟರ್ ಕಬ್ಬಿನ ಹಾಲು , ಜೇನುತುಪ್ಪ ಹಸುವಿನ ತುಪ್ಪ, ಸುಗಂಧ ದ್ರವ್ಯಗಳು, ಅರಿಶಿನ, ಚಂದನ ಹಾಗೂ ಪವಿತ್ರ ಗಂಗಾಜಲದಿAದ ಸ್ವಾಮಿಯ ೧೭ ಅಡಿ ಎತ್ತರದ ಮೂರ್ತಿಗೆ ಅಭಿಷೇಕ ಮಾಡಿ ಮಲ್ಲಿಗೆ, ಜಾಜಿ ಸಂಪಿಗೆ, ಸೇವಂತಿಗೆ, ಕನಕಾಂಬರ, ಕಮಲ, ಪವಿತ್ರ ಪತ್ರೆಗಳು, ಧವನ, ತುಳಸಿ ಸೇರಿದಂತೆ ೫೮ ಬಗೆಯ ವಿವಿಧ ಅಪರೂಪದ ಪುಷ್ಪಗಳಿಂದ ಪುಷ್ಪಭಿಷೇಕ ನಡೆಸಿ ಪಟ್ಟಾಭಿಷೇಕ ಮಾಡಿ ಸಂಭ್ರಮಿಸಲಾಯಿತು. ರೇವತಿ ನಕ್ಷತ್ರದ ಶುಭದಿನದ ಅಂಗವಾಗಿ ನಡೆದ ಅಭಿಷೇಕ ಕಾರ್ಯಕ್ರಮದಲ್ಲಿ ರಾಜ್ಯದ ಮಾಜಿ ಸಚಿವರಾದ ಜಿ.ಟಿ. ದೇವೇಗೌಡ ಅವರು ತಮ್ಮ ಧರ್ಮಪತ್ನಿ ಯೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೆ ವಿಧಾನ ಪರಿಷತ್ ಸದಸ್ಯ ಜವರಾಯಿಗೌಡ ಅವರು ತಮ್ಮ ಧರ್ಮಪತ್ನಿಯೊಂದಿಗೆ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಬೇಡಿ ಬಂದ ಭಕ್ತರ ಕೋರಿಕೆಗಳು ಹಾಗೂ ಅಭಿಷ್ಟೆಗಳನ್ನು ಈಡೇರಿಸಿ ಹರಸಿ , ಆಶೀರ್ವದಿಸುತ್ತಿರುವ ಭೂದೇವಿ ಸಮೇತ ಶ್ರೀಲಕ್ಷ್ಮೀ ವರಹನಾಥ ಸ್ವಾಮಿಯು ಭೂ ವ್ಯಾಜ್ಯಗಳ ಪರಿಹಾರಕನಾಗಿದ್ದು ಸ್ವಂತ ಸೂರನ್ನು ಹೊಂದಬೇಕೆAಬ ಕನಸು ಹೊತ್ತು ಸುಕ್ಷೇತ್ರಕ್ಕೆ ಆಗಮಿಸಿ , ಹರಕೆ ಹೊರುವ ಭಕ್ತರ ಕೋರಿಕೆಗಳನ್ನು ಈಡೇರಿಸುತ್ತಿರುವುದರಿಂದ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭೂವರಹನಾಥ ಕ್ಷೇತ್ರವು ತಿರುಮಲ ತಿರುಪತಿಯ ಮಾದರಿಯಲ್ಲಿ ಮೂರು ಪ್ರಕಾರಗಳ ಭವ್ಯವಾದ ಹೊಯ್ಸಳ ಶಿಲ್ಪಕಲಾ ವೈಭವದ ದೇವಾಲಯ ನಿರ್ಮಾಣವಾಗುತ್ತಿದ್ದು ೧೮೬ ಅಡಿ ಎತ್ತರದ ಬೃಹತ್ ರಾಜಗೋಪುರದ ಜೊತೆಗೆ ತಾಯಿ ಮಹಾಲಕ್ಷ್ಮಿ ಅಮ್ಮನವರ ದೇವಾಲಯವನ್ನು ಕೂಡ ಹೊಯ್ಸಳ ವಾಸ್ತುಶಿಲ್ಪದ ಮಾದರಿಯಲ್ಲಿಯೇ ನಿರ್ಮಿಸಲು ಪರಕಾಲ ಸ್ವಾಮಿಗಳು ಸಂಕಲ್ಪ ಮಾಡಿ ಇನ್ನು ಮೂರು ವರ್ಷಗಳಲ್ಲಿ ಭವ್ಯವಾದ ದೇವಾಲಯವನ್ನು ಲೋಕಾರ್ಪಣೆಗೊಳಿಸಲು ಹಗಲು-ರಾತ್ರಿ ಎನ್ನದೆ ದಿನದ ೨೪ ಗಂಟೆಗಳ ಕಾಲವೂ ದೇವಾಲಯದ ಕೆತ್ತನೆ ಕಾರ್ಯವನ್ನು ರಾಜಸ್ಥಾನ ಹಾಗೂ ತಮಿಳುನಾಡಿನಿಂದ ಆಗಮಿಸಿರುವ ಐವತ್ತಕ್ಕೂ ಹೆಚ್ಚಿನ ಶಿಲ್ಪಿಗಳು ದೇವಾಲಯ ವ್ಯವಸ್ಥಾಪನ ಸಮಿತಿಯ ಸಂಚಾಲಕ ಡಾ. ಶ್ರೀನಿವಾಸ ರಾಘವನ್ ಅವರ ಮಾರ್ಗದರ್ಶನದಲ್ಲಿ ಕೆತ್ತನೆ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ದುಡಿಯುತ್ತಿದ್ದಾರೆ. ಶ್ರೀ ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕಂಡು ನನಗೆ ತುಂಬಾ ಸಂತೋಷವಾಗಿದೆ. ಬೆಳಗಿನಿಂದ ರಾತ್ರಿಯವರೆಗೆ ದೇವಾಲಯಕ್ಕೆ ಆಗಮಿಸುವ ಭಕ್ತಾದಿಗಳಿಗೆ ಉಚಿತ ಅನ್ನಪ್ರಸಾದವನ್ನು ನೀಡುತ್ತಿರುವ ದೇವಾಲಯ ವ್ಯವಸ್ಥಾಪನ ಸಮಿತಿಯು ದೇಶದಲ್ಲಿಯೇ ಮಾದರಿಯಾದ ಅಪರೂಪದ ದೇವಾಲಯವನ್ನು ಇನ್ನು ಮೂರು ವರ್ಷಗಳಲ್ಲಿ ಸಂಪೂರ್ಣಗೊಳಿಸಲು ಸಂಕಲ್ಪ ಮಾಡಿರುವುದು ಅದ್ಭುತವಾದ ವಿಚಾರವಾಗಿದೆ ಎಂದು ಮಾಜಿ ಸಚಿವ ಜಿ.ಟಿ.ದೇವೇಗೌಡ ಹೇಳಿದರು.

ರೇವತಿ ನಕ್ಷತ್ರದ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೧೦,೦೦೦ಕ್ಕೂ ಹೆಚ್ಚಿನ ಭಕ್ತಾದಿಗಳಿಗೆ ಸಿಹಿಪೊಂಗಲ್, ಪುಳಿಯೋಗರೆ, ಉಪ್ಪಿಟ್ಟು, ಮೊಸರನ್ನ ಹಾಗೂ ಖಾರ ಪೊಂಗಲ್ ಪ್ರಸಾದವನ್ನು ವಿತರಿಸಲಾಯಿತು.

ತಹಸಿಲ್ದಾರ್ ಡಾ.ಅಶೋಕ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಡಾ.ಮನುಕುಮಾರ್ ದಂಪತಿಗಳು, ಗ್ರಾಮಾಂತರ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಆನಂದೇಗೌಡ ದಂಪತಿಗಳು, ಉಸಿರು’ ಕನ್ನಡ ಚಲನಚಿತ್ರ ನಿರ್ಮಾಪಕರಾದ ಲಕ್ಷ್ಮೀ ಹರೀಶ್ ದಂಪತಿಗಳು, ರಾಜ್ಯದ ಮಾಜಿ ಸಚಿವರಾದ ಡಾ. ನಾರಾಯಣಗೌಡ ದಂಪತಿಗಳು ಇಂದಿನ ರೇವತಿ ನಕ್ಷತ್ರದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ , ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ನಡೆಸಿದರು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ, ಮಂಡ್ಯ.

About The Author