November 19, 2025

ಕಾಂಗ್ರೆಸ್ ಶಾಸಕರನ್ನು ಬಿಜೆಪಿಗೆ ಸೆಳೆಯಲು ಇ,ಡಿ ದಾಳಿ-ಮೀನುಗಾರಿಕಾ ಸಚಿವ ಮಂಕಾಳು ವೈದ್ಯ

ಕಾರವಾರ: ಕಾಂಗ್ರೆಸ್ ಶಾಸಕರು ಸಂಸದರ ಮನೆ ಮೇಲೆ ಇಡಿ ದಾಳಿ ಸಹಜ,ಬಿಜೆಪಿಗೆ ಹೊದ್ರೆ ವಾಷಿಂಗ್ ಮಷಿನ್ ರೀತಿ ಕ್ಲೀನ್ ಆಗ್ತಾರೆ,ಬಿಜೆಪಿಗೆ ಸೆಳೆಯಲು ಇಡಿ ಅಸ್ತ್ರ ದೇಶದಲ್ಲಿ ಬಳಸುತ್ತಿದ್ದಾರೆ ಎಂದು ಮೀನುಗಾರಿಕಾ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಕಿಡಿಕಾರಿದ್ದಾರೆ.

ಇಂದು ಕಾರವಾರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆಯ ಮೇಲೆ ಇಡಿ ದಾಳಿ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಜಿಲ್ಲೆಯಲ್ಲಿ ಬಿಜೆಪಿ ಶಾಸಕರು ಕಡಿಮೆ ಇದ್ದಿದಕ್ಕೆ ಬಿಜೆಪಿಗೆ ಸೆಳೆಯಲು ಪ್ರಯತ್ನ ನಡಿತಾ ಇರಬಹುದು. ಹೀಗಾಗಿ ಇಡಿ ದಾಳಿ ಮಾಡಿದೆ ಎಂದರು.

ಇನ್ನು ಸತೀಶ್ ಸೈಲ್ ಮೊಬೈಲ್ ಸ್ವಿಚ್ ಆಫ್ ಮಾಡಿ ಎಲ್ಲೂ ಹೊಗಿಲ್ಲ, ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸತೀಶ್ ಸೈಲ್ ಗೆ ಬೇರೆ ರೀತಿಯ ಆರೋಗ್ಯದ ಸಮಸ್ಯೆ ಇದೆ,ಅವರ ಆರೋಗ್ಯದ ಬಗ್ಗೆ ಜಾಸ್ತಿ ವಿವರವಾಗಿ ಹೇಳಲ್ಲ,ದೆಹಲಿ ಮತ್ತು ಹೈದ್ರಾಬಾದ್ ಆಸ್ಪತ್ರೆಯಲ್ಲಿ ಮಾತ್ರ ಚಿಕಿತ್ಸೆಗೆ ವ್ಯವಸ್ಥೆ ಇದೆ ಇ,ಡಿ ದಾಳಿ ಆಗುವ ಮೊದಲೇ ಸೈಲ್ ದೆಹಲಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ,ಸತೀಶ್ ಸೈಲ್ ಸ್ವಿಚ್ ಆಫ್ ಮಾಡಿ ಎಲ್ಲೂ ಹೊಗಿಲ್ಲ,ಇಡಿ ದಾಳಿಯನ್ನು ಸತೀಶ್ ಸೈಲ್ ಸಮರ್ಥ ವಾಗಿ ಎದುರಿಸುತ್ತಾರೆ.ಸತೀಶ್ ಸೈಲ್ ಗೆ ಅವರದ್ದೇ ಆದ ಆರ್ಥಿಕ ಮೂಲಗಳಿವೆ, ಶಾಸಕರಾಗುವ ಮೊದಲೆ 150 ಕೋಟಿ ಇನಕಮ್ ಟ್ಯಾಕ್ಸ್ ಕಟ್ಟಿದ್ದಾರೆ ಮತ್ತೆ ಚುನಾವಣೆಯಲ್ಲಿ ಗೆಲ್ತಾರೆ ಅಂತ ಗೊತ್ತಾಗಿದೆ ಹಾಗಾಗಿ ಈ ರೀತಿ ಮಾಡುತ್ತಿದ್ದಾರೆ ಎಂದರು.

About The Author

error: Content is protected !!