August 30, 2025

ಮಹಿಳೆಯರು ಸದಾ ಜಾಗೃತರಾಗಿರಿ – ಶರಾವತಿ ಹೆಗಡೆ

ಹೊನ್ನಾವರ : ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಆಗದಂತೆ ರಕ್ಷಣೆ ಒದಗಿಸುವುದಕ್ಕೆ ಮತ್ತು ಲೈಂಗಿಕ ಕಿರುಕುಳವನ್ನು ತಡೆಯುವುದಕ್ಕೆ ಹಾಗೂ ಲೈಂಗಿಕ ಕಿರುಕುಳದ ದೂರುಗಳನ್ನು ಬಗೆಹರಿಸುವುದಕ್ಕೆ ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ಲೈಂಗಿಕ ಕಿರುಕುಳ ವಿರೋಧ ಸಮಿತಿ’ಇದ್ದು ಮಹಿಳೆಯರು ಮತ್ತು ವಿದ್ಯಾರ್ಥಿಗಳು ಇದರ ಅರಿವು ಪಡೆದುಕೊಳ್ಳಬೇಕು ಎಂದು ವಕೀಲರಾದ ಶರಾವತಿ ಹೆಗಡೆ ಹೇಳಿದರು.

ಅವರು ಎಸ್.ಡಿ.ಎಂ. ಕಾಲೇಜಿನ ಲೈಂಗಿಕ ಕಿರುಕುಳ ವಿರೋಧ ಸಮಿತಿ ಹಾಗೂ ವಿದ್ಯಾರ್ಥಿನಿಯರ ಸಲಹಾ ಸಮಿತಿ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲೈಂಗಿಕ ಸ್ವರೂಪದ ಇತರ ಯಾವುದೇ ಅಸಹ್ಯಕರ ದೈಹಿಕ ವರ್ತನೆ, ಮೌಖಿಕ ವರ್ತನೆ ಅಥವಾ ಹಾವಭಾವದ ವರ್ತನೆಯನ್ನು ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗುತ್ತದೆ. ಇಂತಹ ಕಿರುಕುಳದ ಬಗ್ಗೆ ಮಹಿಳೆಯರು ಸೂಕ್ತ ತಿಳುವಳಿಕೆ ಪಡೆದು ಅನ್ಯಾಯವಾದಾಗ ಅದನ್ನು ಕಾನೂನಿನ ನೆರವು ಪಡೆದು ಪರಿಹರಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಮಿತಿಯ ಸಂಚಾಲಕರಾದ ಡಾ. ಸುವರ್ಣ ಗಾಡ ಅವರು ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಐ.ಕ್ಯೂ.ಎ.ಸಿ. ಕೋ-ಆರ್ಡಿನೇಟರ್. ಡಾ. ಸುರೇಶ್ ವಂದನಾರ್ಪಣೆ ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ. ಎಲ್. ಹೆಬ್ಬಾರ ಕಾರ್ಯಕ್ರಮದ ಅಧ್ಯಕ್ಷತೆ ವಹಸಿದ್ದರು. ಪ್ರೊ. ಕೆ. ಆರ್. ಶ್ರೀಲತಾ ಮತ್ತು ಪಲ್ಲವಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

About The Author