
ಹೊನ್ನಾವರ; ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿರಂತರವಾಗಿ ಅಪಪ್ರಚಾರದ ಜತೆ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವ ಹಿನ್ನಲೆಯಲ್ಲಿ ಅ.20 ರಂದು ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಹಮ್ಮಿಕೊಂಡ ” ಜನಾಗ್ರಹ ಧರ್ಮಸಭೆಯ ” ಪ್ರಚಾರಾರ್ಥವಾಗಿ ಗ್ರಾಮ ಮಟ್ಟದಲ್ಲಿ ಸಂಚರಿಸುವ ಧರ್ಮರಥಕ್ಕೆ ಪಟ್ಟಣದ ದಂಡಿನದುರ್ಗಾ ದೇವಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.

ಇದೆ ವೇಳೆ ಸಾಮಾಜಿಕ ಕಾರ್ಯಕರ್ತರಾದ ವಿಶ್ವನಾಥ ನಾಯಕ ಮಾತನಾಡಿ ಧರ್ಮಸ್ಥಳದಲ್ಲಿ ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ತ್ರೇತಾಯುಗದಲ್ಲಿ ರಾಕ್ಷಸರ ಅಟ್ಟಹಾಸ ನೋಡುತ್ತಿದ್ದರು. ಅಂದು ದೇವ- ದಾನವರ ನಡುವೆ ಯುದ್ದ ಸಂಭವಿಸುತ್ತಿತ್ತು. ಇಂದಿಗೂ ದಾನವರು ಯಾರು ಸತ್ತಿಲ್ಲ, ಅವರೆಲ್ಲರು ಒಂದಾಗಿ ಧರ್ಮಸ್ಥಳ ಹಾಗೂ ವಿರೇಂದ್ರ ಹೆಗ್ಗಡೆಯವರ ಹೆಸರು ಕೆಡಿಸಲು ಮುಂದಾಗುತ್ತಿದ್ದಾರೆ. ಧರ್ಮಸ್ಥಳದಲ್ಲಿ ನಡೆಯುವ ಅಪಪ್ರಚಾರವನ್ನು ಸಮಸ್ತ ಹಿಂದು ಸಮಾಜ ಖಂಡಿಸುತ್ತೇವೆ. ನಮ್ಮ ಧಾರ್ಮಿಕ ಭಾವನೆಗೆ ದಕ್ಕೆಯಾಗಿ ಸಹನೆಯ ಕಟ್ಟೆ ಸ್ಪೊಟಗೊಳ್ಳುವ ಸಾಧ್ಯತೆ ಇದೆ. ದಕ್ಷಿಣದ ಕಾಶಿ ಎಂದು ಹಿರಿಮೆ ಹೊಂದಿರುವ ಸ್ಥಳದ ಮೇಲೆ ನಿರಂತರವಾಗಿ ನಡೆಯುತ್ತಿರುವ ಅವಹೇಳನವನ್ನು ಖಂಡಿಸಲು, ಇದೆ 20 ರಂದು ಮುಂಜಾನೆ 10 ಗಂಟೆಗೆ ಪಟ್ಟಣದ ನಾಮಧಾರಿ ಸಭಾಭವನದಲ್ಲಿ ಧರ್ಮಸಭೆ ಆಯೋಜಿಸಲಾಗಿದೆ. ಮುಖ್ಯ ವಕ್ತಾರರಾಗಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಆಗಮಿಸುತ್ತಿದ್ದು, ಸಭೆಯ ನಂತರ ತಹಶೀಲ್ದಾರ ಕಛೇರಿಯವರೆಗೆ ಪ್ರತಿಭಟನಾ ಮೆರವಣೆಗೆ ಮೂಲಕ ತೆರಳಿ ಮನವಿ ಸಲ್ಲಿಸುವ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮದ ಜಾಗೃತಿಗಾಗಿ ತಾಲೂಕಿನ ಎಲ್ಲಾ ಗ್ರಾಮಗಳಿಗೂ ಧರ್ಮರಥ ಸಂಚರಿಸಲಿದ್ದು, ಇಂದು ಚಾಲನೆ ನೀಡಲಾಗಿದೆ. ಎರಡು ದಿನಗಳ ಕಾಲ ತಾಲೂಕಿನಲ್ಲಿ ಸಂಚಾರ ನಡೆಸಲಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಪ.ಪಂ.ಅಧ್ಯಕ್ಷ ವಿಜಯ ಕಾಮತ್, ಉಪಾಧ್ಯಕ್ಷ ಸುರೇಶ ಹೊನ್ಬಾವರ, ಸದಸ್ಯ ಶಿವರಾಜ ಮೇಸ್ತ, ಮೇಧಾ ನಾಯ್ಕ, ಬಿಜೆಪಿ ಮಂಡಲಧ್ಯಕ್ಷ ಮಂಜುನಾಥ ನಾಯ್ಕ, ವಿವಿಧ ಸಂಘಟನೆಯ ಪ್ರಮುಖರಾದ ರಾಜು ಭಂಡಾರಿ, ಸಂಜು ಶೇಟ್, ಶ್ರೀಕಾಂತ ನಾಯ್ಕ, ಗಣಪತಿ ನಾಯ್ಕ ಬಿಟಿ, ಯೊಗೀಶ ಮೇಸ್ತ, ಹರಿಶ್ಚಂದ್ರ ನಾಯ್ಕ, ಧರ್ಮಸ್ಥಳ ಯೋಜನೆಯ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ