August 30, 2025

ನಾಡಿನ ಹಿರಿಯ ಸಾಹಿತಿ ಶಾಂತಿ ನಾಯಕ ನಿಧನ, ಆರ್.ವಿ.ದೇಶಪಾಂಡೆ ಶೋಕ

ಹೊನ್ನಾವರ :ಉತ್ತರಕನ್ನಡದ ಹಿರಿಯ ಸಾಹಿತಿ,ಜನಪದತಜ್ಞೆ,ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿಅಧ್ಯಕ್ಷೆ ಹಾಗೂ ಜನಪದ ಸಸ್ಯಕ್ಕೆ ನೀರೂಣಿಸುವ ಮೂಲಕ ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಶ್ರೀಮತಿ ಶಾಂತಿ ನಾಯಕಅವರಅಗಲಿಕೆಯ ಸುದ್ದಿ ತಿಳಿದು ತೀವ್ರದುಃಖವಾಯಿತುಎಂದುಕರ್ನಾಟಕ ಸರಕಾರದ ಆಡಳಿತ ಸುಧಾರಣಾಆಯೋಗದಅಧ್ಯಕ್ಷ, ಮಾಜಿ ಸಚಿವಆರ್.ವಿ.ದೇಶಪಾಂಡೆಯವರು ಶ್ರೀಮತಿ ಶಾಂತಿ ನಾಯಕಅವರ ಪತಿ,ಖ್ಯಾತಜನಪದ ಸಾಹಿತಿಡಾ.ಎನ್.ಆರ್. ನಾಯಕಅವರಿಗೆ ಬರೆದ ಶೋಕ ಸಂದೇಶ ಪತ್ರದಲ್ಲಿ ದುಃಖಿಸಿದ್ದಾರೆ.

ಶ್ರೀಮತಿ ಶಾಂತಿ ನಾಯಕಸಾಹಿತ್ಯ,ಕವಿತೆ, ಲೇಖನ ಹಾಗೂ ಸಾಕ್ಷರತಾ ಆಂದೋಲನದ ಧ್ವನಿಯಾಗಿದ್ದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಮತ್ತು ಜಾನಪದ ವೈಭವವನ್ನು ನಾಡಿನಾದ್ಯಂತ ವ್ಯಾಪಿಸುವಂತೆ ಮಾಡಿ ಮಾದರಿಯಾಗಿದ್ದಾರೆ.ಇದಲ್ಲದೇ ಹಲವಾರು ಕೃತಿಗಳನ್ನು ರಚಿಸುವ ಮೂಲಕ ಸಾರಸ್ವತ ಲೋಕಕ್ಕೆ ಅಪಾರಕೊಡುಗೆ ನೀಡಿದ್ದರು.ಮನೆಯಲ್ಲಿ ಜನಪದ ಸಸ್ಯವನ್ನು ಬೆಳೆಸಿರುವ ಅವರು ಜೋಯಿಡಾದಲ್ಲಿ ಜನಪದ ವಿದ್ಯಾಲಯ ಕೇಂದ್ರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿರಿಮೆ ಅವರದ್ದು ಎಂದಿದ್ದಾರೆ. ಇಂಥಹ ಮಹಾನ್ ಚಿಂತಕರ, ನಿಷ್ಕಲ್ಮಷ ಹೃದಯದ,ಜನಪದಕವಿಯ ಅಗಲಿಕೆ ನಾಡಿಗೂ ಹಾಗೂ ನುಡಿಗೂ ತುಂಬಲಾರದ ನಷ್ಟವಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ತಮಗೆ ಮತ್ತು ತಮ್ಮ ಕುಟುಂಬ ವರ್ಗದವರಿಗೆ ದುಃಖ ಬರಿಸುವ ಶಕ್ತಿ ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಶ್ರೀ ಆರ್.ವಿ.ದೇಶಪಾಂಡೆಯವರು ಡಾ.ಎನ್.ಆರ್.ನಾಯಕ ಅವರಿಗೆ ಬರೆದ ಶೋಕ ಸಂದೇಶ ಪತ್ರದಲ್ಲಿ ಹೇಳಿದ್ದಾರೆ.

About The Author