November 19, 2025

ಕಾರ್ಗಿಲ್ ವಿಜಯ ದಿನದ ನಿಮಿತ್ತ ಭಾರತೀಯ ಸೈನಿಕರನ್ನು ಸನ್ಮಾನಿಸಿದ ಮುರ್ಡೇಶ್ವರ ಲಯನ್ಸ್ ಕ್ಲಬ್

ಭಟ್ಕಳ : ಮುರ್ಡೇಶ್ವರ ಲಯನ್ಸ್ ಕ್ಲಬ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂಕೂಡ ಕಾರ್ಗಿಲ್ ವಿಜಯದಿನದ ನೆನಪಿಗಾಗಿ ಭಾರತೀಯ ಸೇನೆಯಲ್ಲಿ ಪ್ರಸ್ತುತ ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಯೋಧರಾದ ಸುಬ್ರಹ್ಮಣ್ಯ ಗೋಯ್ದ ನಾಯ್ಕ ಹಾಗೂ ಭಾರತೀಯ ಸೇನೆಯಲ್ಲಿ 24ವರ್ಷ ಸೇವೆ ಸಲ್ಲಿಸಿ ಸುಬೇದಾರರಾಗಿ ನಿವೃತ್ತರಾಗಿರುವ ಕೇಶವನಾಯ್ಕರವರನ್ನು ಗೌರವಿಸಿ ಸನ್ಮಾನಿಸಲಾಯಿತು. ಇದೇ ವೇಳೆ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರನ್ನು ಸ್ಮರಿಸಿಕೊಳ್ಳುತ್ತಾ ಮೊಂಬತ್ತಿ ಹಚ್ಚುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಕಿರಣ ಕಾಯ್ಕಿಣಿ ಹಾಗೂ ಕಾರ್ಯದರ್ಶಿಗಳಾದ ನಾಗೇಶ ಮಡಿವಾಳರವರು ಕಾರ್ಗಿಲ್ ವಿಜಯಕ್ಕೆ ಕಾರಣೀಕರ್ತರಾದ ಸೈನಿಕರ ತ್ಯಾಗದ ಕುರಿತು ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಸೈನಿಕರು ಸೇನೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊAಡರು. ಈ ಮುರ್ಡೇಶ್ವರ ಲಯನ್ಸ್ ಕ್ಲಬ್ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

About The Author

error: Content is protected !!