August 30, 2025

ಸಾರ್ವಜನಿಕ ಅರ್ಜಿ ವಿಲೇವಾರಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹೊನ್ನಾವರ

ಹೊನ್ನಾವರ: ಭೂಮಿ ಯೋಜನೆಯಡಿ ಜುಲೈ-2025 ರ ತಿಂಗಳಿನಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಗಳನ್ನು ನಿಗಧಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿದ ಹೊನ್ನಾವರ ತಾಲೂಕು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದೆ. 6.9 ಸಿಗ್ರಾ ಮೌಲ್ಯವನ್ನು ಪಡೆದಿರುವುದರಿಂದ ವಿಲೇವಾರಿ ಸೂಚ್ಯಾಂಕವು (Disposal Index) 5.771 ಆಗಿದೆ.

ತಾಲೂಕ ದಂಡಾಧಿಕಾರಿ ಪ್ರವೀಣ ಕರಾಂಡೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದ ಮೇರೆಗೆ ತಮ್ಮ ಸಿಬ್ಬಂದಿಗಳ ಮೂಲಕ ಈ ಸಾಧನೆಯನ್ನು ಮಾಡುವಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ತಹಶೀಲ್ದಾರರಾಗಿ ಆಗಮಿಸಿದ ಬಳಿಕ ಹಲವು ಬದಲಾವಣೆಗಳನ್ನು ತಂದಿದ್ದು, ಜನತೆಗೆ ತ್ವರಿತವಾಗಿ ಸರ್ಕಾರದಿಂದ ಸಿಗುವ ಸೌಲಭ್ಯ ವಿತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರ ಈ ಸಾಧನೆಗೆ ಜಿಲ್ಲಾಧಿಕಾರಿಗಳು ಹಾಗೂ ರಾಜ್ಯದ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ತಾಲ್ಲೂಕಿನ ಈ ಕಾರ್ಯಸಾಧನೆಗೆ ತಮ್ಮ ಹಾಗೂ ತಮ್ಮ ತಾಲ್ಲೂಕು ಕಛೇರಿಯ ಅಧಿಕಾರಿ/ಸಿಬ್ಬಂದಿಗಳ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ. ಆದ್ದರಿಂದ ಭೂಮಿ ಉಸ್ತುವಾರಿ ಕೋಶದ ಪರವಾಗಿ ತಮಗೆ ಹಾಗೂ ತಮ್ಮ ತಂಡಕ್ಕೆ ಜಿಲ್ಲಾಡಳಿತದಿಂದ ವಿಶೇಷ ಪ್ರಶಂಸೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿಯೂ ಸಹ ತಮ್ಮಿಂದ ಇದೇ ರೀತಿಯ ಸಹಕಾರ ಹಾಗೂ ಕಾರ್ಯಕ್ಷಮತೆ ಇರಲಿ ಎಂದು ಶುಭ ಹಾರೈಸಿದ್ದಾರೆ. ಈ ಸಾಧನೆಯ ಮೂಲಕ ಹೊನ್ನಾವರ ತಾಲೂಕು ರಾಜ್ಯಮಟ್ಟದಲ್ಲಿ ಸೇವೆಯ ಮೂಲಕ ಗುರುತಿಸಿಕೊಳ್ಳುವಂತಾಗಿರುವುದು ತಾಲೂಕಿನ ಜನತೆಗೂ ಹೆಮ್ಮೆ ಎನಿಸುತ್ತಿದೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author