August 30, 2025

ಉದ್ಯಮಿ ಯಶೋಧರ ನಾಯ್ಕ ನಿಧನ

ಹೊನ್ನಾವರ : ತಾಲೂಕಿನ ಮಾಳ್ಕೋಡ ಮೂಲದ ಇವರು ಕುಮಟಾ ತಾಲೂಕಿನ ವಾಲಗಳ್ಳಿಯಲ್ಲಿ ವಾಸಿಸುತ್ತಿದ್ದರು. ತಮ್ಮ 69ನೇ ವಯಸ್ಸಿನಲ್ಲಿ ನಿಧನರಾದರು. ಅನಾರೊಗ್ಯ ಕಾರಣದಿಂದ ಚಿಕಿತ್ಸೆಗೆ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾದರು.

ಮೈಸೂರಿನಲ್ಲಿ ರಾಜಮನೆತನತವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಲ್ಲಿಂದಲೆ ಸಾರಿಗೆ  ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿ "ಉದ್ಯೋಗ ರತ್ನ"ಪ್ರಶಸ್ತಿ ಪಡೆದಿದ್ದರು.  ಇವರು ಎರಡು ದಶಕಗಳ ಕಾಲ ಹೊನ್ನಾವರ, ಕುಮಟಾ, ಭಟ್ಕಳ ತಾಲೂಕಿಗೆ ತಮ್ಮ ಟ್ರಸ್ಟ್ ಮುಖಾಂತರ ಹಲವು ಸೇವೆ ನೀಡುವ ಮೂಖ ಜನಮನ್ನಣೆ ಪಡೆದಿದ್ದರು. ರಾಜಕೀಯ ಕ್ಷೇತ್ರಕ್ಕೆ ಧುಮುಕಿ ಜೆಡಿಎಸ್ ಸಮಾಜವಾದಿ, ಕಾಂಗ್ರೇಸ್, ಬಿಜೆಪಿ ಪಕ್ಷದ ಮೂಲಕ ಗುರುತಿಸಿಕೊಂಡಿದ್ದರು. ಭಟ್ಕಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ನಡೆಸಿ ಸೋತ ಬಳಿಕ, ಕುಮಟಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದ ಇವರಿಗೆ ಟಿಕೆಟ್ ದೊರೆಯದ ಕಾರಣ ಮತ್ತೆ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದರು. ಪತ್ನಿ, ಒರ್ವ ಪುತ್ರ, ಒರ್ವ ಪುತ್ರಿ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author