August 30, 2025

ಭಟ್ಕಳ: ಮಾರುಕೇರಿ ಗ್ರಾಮದಲ್ಲಿ ಮಹಿಳೆ ಬಾವಿಗೆ ಬಿದ್ದು ಸಾವು

ಭಟ್ಕಳ: ತಾಲ್ಲೂಕಿನ ಮಾರುಕೇರಿ ಗ್ರಾಮದಲ್ಲಿ ಬೆಳಗಿನ ಜಾವ ನಡೆದ ದುರಂತದಲ್ಲಿ ಮಹಿಳೆ ಓರ್ವ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ಶ್ರೀಮತಿ ಸದಾಶಿವ ಹೆಬ್ಬಾರ 55 ವರ್ಷ ಎಂದು ಗುರುತಿಸಲಾಗಿದೆ.

ದೇವರ ಪೂಜೆಗೆಂದು ಹೂ ಕೀಳಲು ತೆರಳಿದಾಗ ಮನೆಯ ಸಮೀಪದ ರಾಮಯ್ಯ ನಾಗಪ್ಪ ಗೊಂಡ ಇವರ ಅಡಿಕೆ ತೋಟದ ನೆಲಬಾವಿಯಲ್ಲಿ ಆಕಸ್ಮಾತಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬAಧ ಮೃತೆಯ ಪತಿ ಸದಾಶಿವ ಹೆಬ್ಬಾರ ಅವರು ಭಟ್ಕಳ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

About The Author