November 19, 2025

ಡಿ.ದೇವರಾಜ ಅರಸುರವರ 110 ನೇ ಜನ್ಮದಿನಾಚರಣೆ

ಹೊನ್ನಾವರ: ದಿವಂಗತ ಡಿ. ದೇವರಾಜ ಅರಸು ವಿಚಾರ ವೇದಿಕೆ ವತಿಯಿಂದ ಡಿ.ದೇವರಾಜ ಅರಸುರವರ 110 ನೇ ಜನ್ಮದಿನಾಚರಣೆ ಹಾಗೂ ಅರಸು ವಿಚಾರ ವೇದಿಕೆಯ 27 ನೇ ವರ್ಷಾಚರಣೆ ಪ್ರಯುಕ್ತ ತಾಲೂಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಸಮಾರಂಭವು ಜರುಗಿತು.

ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಶಶಿಕಲಾ ನಾಯ್ಕ, ಡಾ.ಕೃಷ್ಣಾಜಿ, ಡಾ.ರಮೇಶ ಗೌಡ, ನಿವೃತ್ತ ತಹಶೀಲ್ದಾರ್ ವಿ.ಆರ್ ಗೌಡ, ನಿವೃತ್ತ ಶಿಕ್ಷಕ ಎನ್.ಕೆ ನಾಯ್ಕ, ಡಿ.ದೇವರಾಜ ಅರಸು ವಿಚಾರ ವೇದಿಕೆಯ ಸದಸ್ಯರಾದ ದೀಪಕ ಎಸ್.ಲೋಬೋ ಕೊಡಾಣಿ, ಸೀತಾರಾಮ ನಾಯ್ಕ, ಎಂ.ಡಿ.ಗೌಡ ಆರೊಳ್ಳಿ, ಕೇಶವ ನಾಯ್ಕ ಮಾಗೋಡ, ನಾರಾಯಣ ಮುಕ್ರಿ ಕಡತೋಕಾ, ಎಮ್. ಜಿ. ನಾಯ್ಕ ನಗರೆ, ಚಂದ್ರಹಾಸ ನಾಯ್ಕ, ರಮೇಶ ಮರಾಠಿ ಮತ್ತಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!