August 30, 2025

ಭಟ್ಕಳದಲ್ಲಿ ಅಂಜುಮನ್ ಗರ್ಲ್ಸ್ ಹೈಸ್ಕೂಲ್‌ಗೆ ಅತಿ ಆಧುನಿಕ ವಿಜ್ಞಾನ ಪ್ರಯೋಗಾಲಯ

ಭಟ್ಕಳ: ಭಟ್ಕಳದ ಪ್ರತಿಷ್ಠಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಗರ್ಲ್ಸ್ ಹೈಸ್ಕೂಲ್, ಬಸ್ತಿ ರೋಡ್‌ನಲ್ಲಿ ವಿದ್ಯಾರ್ಥಿನಿಯರಲ್ಲಿ ಪ್ರಾಯೋಗಿಕ ಕಲಿಕೆಯ ಅನುಭವವನ್ನು ಉತ್ತೇಜಿಸುವ ಉದ್ದೇಶದಿಂದ ಆಧುನಿಕ ಸೌಕರ್ಯಗಳನ್ನು ಒಳಗೊಂಡ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.

ಈ ಪ್ರಯೋಗಾಲಯವನ್ನು ಸಂಸ್ಥೆಯ ಆಡಳಿತ ಮಂಡಳಿ ಕಾರ್ಯಕಾರಿ ಸಮಿತಿ ಸದಸ್ಯ ಬುರ್ಹಾನ್ ಕೊಕಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಇಸ್ಲಾಖ್ ಶಾಬಂದ್ರಿ, ವಿಜ್ಞಾನ ವಿಷಯಗಳ ಆಳವಾದ ತಿಳುವಳಿಕೆಗೆ ಇದು ವಿದ್ಯಾರ್ಥಿನಿಯರಿಗೆ ನೆರವಾಗಲಿದೆ. ಸಾಧ್ಯವಾದಷ್ಟು ಬೇಗ ಲ್ಯಾಬ್ ಕಾರ್ಯರೂಪಕ್ಕೆ ಬರಲು ಎಲ್ಲರ ಸಹಕಾರ ದೊರೆಯಿತು ಎಂದು ಹೇಳಿದರು.

ಪ್ರಯೋಗಾಲಯಕ್ಕೆ ದೇಣಿಗೆ ನೀಡಿದ ಸಮೀರ್ ಕೊಕಾರಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಪ್ರಯೋಗಗಳೇ ವಿಜ್ಞಾನದ ಅಸ್ತಿವಾರ. ಈ ಲ್ಯಾಬ್‌ನಲ್ಲಿ ಕಲಿಯುವ ಪಾಠಗಳು ನಿಮ್ಮ ಭವಿಷ್ಯಕ್ಕೆ ದೃಢವಾದ ನೆಲೆಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಅಂಜುಮನ್ ಸ್ಕೂಲ್ ಬೋರ್ಡ್ ಕಾರ್ಯದರ್ಶಿ ಸಾದುಲ್ಲಾ ರುಕ್ಷುದ್ದೀನ್, ದುಬೈ ಜಮಾಅತ್ ಪ್ರಧಾನ ಕಾರ್ಯದರ್ಶಿ ಜೈಲಾನಿ ಮೊಹತೆಶಮ್, ತಂಝೀಮ್ ಮಾಜಿ ಅಧ್ಯಕ್ಷ ಎಸ್.ಎಂ. ಪರ್ವೇಝ್, ಎಸ್.ಜೆ. ಸೈಯ್ಯದ್ ಹಾಕಿಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

About The Author