November 19, 2025

ಟ್ಯಾಕ್ಸಿ ಚಾಲಕರಿಗೆ ಅನಗತ್ಯ ದಂಡ- ಆಕ್ರೋಶ

ಭಟ್ಕಳ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಪೊಲೀಸರು ಟ್ಯಾಕ್ಸಿ ಚಾಲಕರಿಗೆ ಅನಾವಶ್ಯಕ ದಂಡ ವಿಧಿಸುತ್ತಿರುವ ಕುರಿತು ಟ್ಯಾಕ್ಸಿ ಯುನಿಯನ್ ಪ್ರತಿನಿಧಿಗಳು ಡಿವೈಎಸ್‌ಪಿ ಮಹೇಶ್ ಕೆ. ಅವರನ್ನು ಭೇಟಿ ಮಾಡಿದರು.

ಟ್ಯಾಕ್ಸಿ ಯುನಿಯನ್ ಅಧ್ಯಕ್ಷ ಗಣೇಶ್ ದೇವಾಡಿಗ ಮಾತನಾಡಿ ಫ್ರೀ ಬಸ್ ಯೋಜನೆ ಜಾರಿಗೆ ಬಂದ ನಂತರ ನಮ್ಮ ವ್ಯವಹಾರವೇ ಕುಂಠಿತಗೊAಡಿದೆ. ನಾವು ಸ್ಥಳೀಯ ಟ್ಯಾಕ್ಸಿ ಚಾಲಕರು, ಜೀವನ ಸಾಗಿಸಲು ಈ ಉದ್ಯೋಗದ ಮೇಲೆಯೇ ಅವಲಂಬಿತರಾಗಿದ್ದೇವೆ. ಆದರೆ ಶಿರಾಲಿ ಚೆಕ್‌ಪೋಸ್ಟ್, ಸರ್ಪನ ಕಟ್ಟೆ, ಸಾಗರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪೊಲೀಸರು ಯುನಿಫಾರ್ಮ್ ಧರಿಸಿಲ್ಲ, ಪ್ಯಾಂಟ್ ಹಾಕಿಲ್ಲ, ಸೀಟ್ ಹೆಚ್ಚಾಗಿದೆ ಎಂಬ ನೆಪಗಳಲ್ಲಿ ದಂಡ ವಿಧಿಸುತ್ತಿದ್ದಾರೆ. ದಂಡ ಕಟ್ಟದಿದ್ದರೆ ಡ್ರೈವಿಂಗ್ ಲೈಸೆನ್ಸ್ ವಶಪಡಿಸಿಕೊಳ್ಳುತ್ತಿದ್ದಾರೆ. ಇದರಿಂದ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದರು.

ನಂತರ ಡಿವೈಎಸ್‌ಪಿ ಮಹೇಶ್ ಕೆ. ಪ್ರತಿಕ್ರಿಯಿಸಿ ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು. ಯುನಿಫಾರ್ಮ್ ಅಥವಾ ಇತರ ನೆಪಗಳಲ್ಲಿ ಅನಗತ್ಯವಾಗಿ ದಂಡ ವಿಧಿಸದಂತೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ,ಪುರಸಭೆ ಸದಸ್ಯ ಇಮ್ ಶಾದ್ ಮುಕ್ತ ಸಿರ್,ಟ್ಯಾಕ್ಸಿ ಯುನಿಯನ್ ಪ್ರಧಾನ ಕಾರ್ಯದರ್ಶಿ ಜಗದೀಶ್ ನಾಯ್ಕ,ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸುರೇಶ್ ನಾಯ್ಕ,ಸೇರಿದಂತೆ ಸುಧಾಕರ್ ನಾಯ್ಕ,ಭಾಸ್ಕರ ಮೊಗೇರ್ ಮತ್ತು ಯುನಿಯನ್ ಪದಾಧಿಕಾರಿಗಳು ಹಾಗೂ ಹಿರಿಯ ಚಾಲಕರು ಹಾಜರಿದ್ದರು.

About The Author

error: Content is protected !!