August 30, 2025

ಹಿಂದು ಮುಕ್ರಿ ಸಮಾಜದ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ

ಕುಮಟಾ: ಅನಾಧಿಕಾಲದ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಹಾಗೂ ಅಲ್ಲಿನ ಧರ್ಮಗುರುಗಳಾದ ಪರಮಪೂಜ್ಯ ಡಾ|| ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ನಡೆಸುತ್ತಿರುವ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ತಾಲೂಕಿನ ಹಿಂದು ಮುಕ್ರಿ ಸಮಾಜದ ವತಿಯಿಂದ ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

 ರಾಜ್ಯದ ಪುಣ್ಯ ಕ್ಷೇತ್ರ ಹಾಗೂ ಪೂರ್ವಜರ ಕಾಲದಿಂದಲೂ ನಾವು ನಂಬಿಕೊAಡು ಬಂದಿರುವ ನಮ್ಮ ಧಾರ್ಮಿಕ ಕ್ಷೇತ್ರವಾದ ಶ್ರೀ ಮಂಜುನಾಥ ಸ್ವಾಮಿಯ, ಹಾಗೂ ಪರಮಪೂಜ್ಯ ಡಾ|| ವೀರೇಂದ್ರ ಹೆಗ್ಗಡೆ ಯವರ ಬಗ್ಗೆ ಕೆಲ ಸುದ್ದಿ ಮಾಧ್ಯಮ, ಯುಟ್ಯೂಬ್ ಚಾನಲ್‌ಗಳಲ್ಲಿ ಅಪಪ್ರಚಾರ ಮಾಡುತ್ತ ಧಾರ್ಮಿಕ ಕ್ಷೇತ್ರದ ಹೆಸರನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಸಮಾಜ ದಲ್ಲಿ ಆ ಕ್ಷೇತ್ರದ ಬಗ್ಗೆ ಇರುವ ಗೌರವ ಕಡಿಮೆ ಮಾಡುವ ಕೆಲಸ ನಡಿಯುತ್ತಿದೆ. ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯೂ ಇಲ್ಲಸಲ್ಲದ ಆರೋಪ ಮಾಡುತ್ತಾ, ಇವರ ಬಗ್ಗೆ ತೇಜೋವಧೆ ಮಾಡುತ್ತಾ ಇರುವುದು ನಮ್ಮ ಸಮಾಜಕ್ಕೆ ಹಾಗೂ ಎಲ್ಲ ಸಮಾಜಕ್ಕೂ ನೋವನ್ನು ಹಾಗೂ ಬೇಸರವನ್ನುಂಟು ಮಾಡಿದೆ. ನಾವು ಮಾಧ್ಯಮ ದಲ್ಲಿ ನೋಡಿ ತಿಳಿದ ಹಾಗೆ ಇದು ಸೌಜನ್ಯ ಹಾಗೂ ಇತರ ವ್ಯಕ್ತಿ ಗಳು ಧರ್ಮಸ್ಥಳ ದಲ್ಲಿ ಸಾವು ಆಗಿರುವ ಬಗ್ಗೆ ತನಿಖೆ ನಡೆಯುತ್ತಾ ಇದೆ ಅನ್ನೋ ವಿಚಾರಕ್ಕೆ ತನಿಖೆ ಆಗಲಿ, ಹಾಗೂ ಸೌಜನ್ಯ ಸಾವಿನ ಬಗ್ಗೆ, ನ್ಯಾಯ ಸಿಗಲಿ. ಅದಕ್ಕೆ ನಮ್ಮ ವಿರೋಧ ಇಲ್ಲಾ. ಆದರೆ ಎಸ್ ಐ ಟಿ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾದಿಕಾರಗಳ ಕುರಿತು ಈ ರೀತಿ ಅಪಪ್ರಚಾರ ಮಾಡುವುದು ಇಲ್ಲಸಲ್ಲದ ಆರೋಪ ಮಾಡುವುದು, ಕೋಟ್ಯಂತರ ಭಕ್ತರ ಭಾವನೆಗಳ ಜೊತೆಗೆ ಆಟ ಆಡುತ್ತಾ ಇರುವಂತಿದೆ. ಆದ್ದರಿಂದ ನಾವು ಉತ್ತರ ಕನ್ನಡ ಜಿಲ್ಲೆಯ ಮುಕ್ತಿ ಸಮಾಜದವರು ಒಕ್ಕೂರಲಿನಿಂದ ಆಗ್ರಹಿಸುದೆನೆಂದರೆ, ಅಪಪ್ರಚಾರ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಸರಕಾರ ಮಧ್ಯ ಪ್ರವೇಶ ಮಾಡಿ ತನಿಖೆ ನ್ಯಾಯಯುತವಾಗುವ ಹಾಗೆ ಮಾಡಬೇಕು. ಜೊತೆಗೆ ಅಪಪ್ರಚಾರ ಮಾಡುತ್ತಿರುವವರ ಮೇಲೆ ಕಠಿಣ ಕಾನೂನು ಕ್ರಮ ತೆಗೆದು ಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

   ಈ ಸಂದರ್ಭದಲ್ಲಿ ಗಣೇಶ ಅಡಿಗುಂಡಿ, ರಾಘವೇಂದ್ರ ನೀರ್ನಹಳ್ಳಿ ಮುಕ್ರಿ ಸಮಾಜದ ರಾಜ್ಯ ಅಧ್ಯಕ್ಷರು, ಸಮಾಜದ ಪ್ರಮುಖರಾದ ಗೋವಿಂದ ಮುಕ್ರಿ ಬಾಲಚಂದ್ರ ಮುಕ್ರಿ, ಸತೀಶ್ ಕೆ  ಹೆಗಡೆ, ಎಂ.ಡಿ.ಮುಕ್ರಿ, ರಾಮ ಮುಕ್ರಿ ಹೆಗಡೆ, ನಾಗಪ್ಪ ಮುಕ್ರಿ ಧರ್ಮಸ್ಥಳ ಸಂಘದ ಮಹಿಳಾ ಪ್ರತಿನಿಧಿಗಳು,ಧರ್ಮಸ್ಥಳದ ಭಕ್ತರು ಹಾಜರಿದ್ದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author