ಹೊನ್ನಾವರ; ತಾಲೂಕ ಆಡಳಿತ, ಪಟ್ಟಣ ಪಂಚಾಯತ, ಪೋಲಿಸ್ ಇಲಾಖೆಯಿಂದ ಸಾರ್ವಜನಿಕ ಗಣೇಶೋತ್ಸವದ ನಿಮಿತ್ತ ಶಾಂತಿಪಾಲನಾ ಸಭೆ ತಾಲೂಕಿನ ಆಡಳಿತಸೌಧದಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಅಧ್ಯಕ್ಷತೆಯಲ್ಲಿ ಜರುಗಿತು.
ತಾಲೂಕಿನ ವಿವಿಧಡೆಯಿಂದ ಆಗಮಿಸಿದ ಸಮಿತಿ ಸದಸ್ಯರು ಹಬ್ಬದ ಸಮಯ ಕುಂದು-ಕೊರತೆಗಳಾದ ವಿದ್ಯುತ್ ಸಮಸ್ಯೆ, ಪಟ್ಟಣದ ರಸ್ತೆ, ಬೀದಿದೀಪ ಹಾಗೂ ಗಣಪತಿ ವಿಸರ್ಜನೆ ಮಾಡುವಾಗ ಇರುವ ಸಮಸ್ಯೆ ಬಗ್ಗೆ ಮಾಹಿತಿ ನೀಡಿ ಈ ಭಾರಿ ಸಮಸ್ಯೆ ಆಗದಂತೆ ನೋಡಿಕೊಳ್ಳುವಂತೆ ಕೇಳಿಕೊಂಡರು. ಇದಕ್ಕೆ ಆಯಾ ಇಲಾಖೆಯ ಅಧಿಕಾರಿಗಳು ಉತ್ತರಿಸಿ ಈ ಬಾರಿ ಕೈಗೊಂಡ ಕ್ರಮದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಮಹೇಶ ಕುಮಾರ,ಪ.ಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು, ತಾ.ಪಂ. ಕಿರಣಕುಮಾರ್ ಹೆಸ್ಕಾಂ ಇಲಾಖೆಯ ಆರ್.ಪಿ.ಭಟ್, ಅಗ್ನಿಶಾಮಕ, ಪೊಲೀಸ್ ಕಂದಾಯ, ಪ.ಪಂ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ತಾಲೂಕಿನ ಗಣೇಶೋತ್ಸವ ಸಮಿತಿಯವರು ಹಾಜರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”