

ಹೊನ್ನಾವರ : ಕಳೆದ ವಾರ ಸುರಿದ ಹೊನ್ನಾವರದಲ್ಲಿ ಭಾರೀ ಮಳೆ ಮತ್ತು ಗಾಳಿಯಿಂದ ಪಟ್ಟಣದ ಉದ್ಯಮ ನಗರದಲ್ಲಿರುವ ಮೀನುಗಾರ ಭಗವಾನ ಮೇಸ್ತ ಇವರ ಮನೆ ಸಂಪೂರ್ಣವಾಗಿ ನೆಲಸಮವಾಗಿದ್ದು ದಿಕ್ಕು ತೋಚದಂತಾಗಿದ್ದರು. ಮನೆ ಕುಸಿತದ ಸಂದರ್ಭದಲ್ಲಿ ಭಗವಾನ ಅವರು ತಮ್ಮ ಉದ್ಯೋಗಕ್ಕೆ ತೆರಳಿದ್ದರು. ವಯಸ್ಸಾದ ತಾಯಿ ಮಾತ್ರ ಮನೆಯಲ್ಲಿದ್ದರು. ಮನೆ ಕುಸಿತದಿಂದ ಭಗವಾನ ಅವರ ತಾಯಿಗೆ ಪೆಟ್ಟಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. ಈ ವಿಷಯ ಮಾಜಿ ಶಾಸಕಿ ಶಾರದಾ ಶೆಟ್ಟಿಯವರಿಗೆ ಸ್ಥಳಿಯರು ಗಮನಕ್ಕೆ ತಂದಾಗ ಸಚಿವರ ಕಾರ್ಯಕ್ರಮದ ನಿಮಿತ್ತ ಆಗಮಿಸಿದಾಗ ಸ್ಥಳಕ್ಕೆ ಭೇಟಿ ನೀಡಿ ಭಗವಾನ ಮೇಸ್ತ ಮತ್ತು ಅವರ ತಾಯಿಗೆ ಸಾಂತ್ವಾನ ಹೇಳಿ,ಯಾವುದೇ ಕಾರಣಕ್ಕೂ ದೃತಿಗೆಡದಂತೆ ಧೈರ್ಯ ತುಂಬಿದರು. ವೈಯಕ್ತಿಕವಾಗಿ ಹತ್ತು ಸಾವಿರ ರೂಪಾಯಿಯನ್ನು ಭಗವಾನ ಮೇಸ್ತ ಅವರ ತಾಯಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ. ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯದ ಬಗ್ಗೆ ಸ್ಥಳಿಯ ಅಧಿಕಾರಿಗಳೊಂದಿಗೆ ಚರ್ಚಿಸುವ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅವರೊಂದಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀನುಗಾರ ವಿಭಾಗದ ಅಧ್ಯಕ್ಷರಾದ ಮಂಜುನಾಥ ಸುಣಗಾರ, ರಾಜ್ಯ ಮೀನುಗಾರ ವಿಭಾಗದ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ, ಕಾರ್ಯದರ್ಶಿ ಅಭಿಷೇಕ್ ತಾಂಡೆಲ್, ಜಿಲ್ಲಾ ಮೀನುಗಾರ ವಿಭಾಗದ ಅಧ್ಯಕ್ಷ ಪ್ರಕಾಶ ಜೈವಂತ,ಕಾAಗ್ರೆಸ್ ಮುಖಂಡ ರವಿಕುಮಾರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ್ ಎನ್.ತೆಂಗೇರಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೇಶವ ಮೇಸ್ತ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ರಾಘು ಮೇಸ್ತ, ಬೆಳ್ಕೊಂಡ ಸೊಸೈಟಿಯ ಅಧ್ಯಕ್ಷ ಉಮೇಶ ಮೇಸ್ತ, ನಿರ್ದೆಶಕ ರವಿ ಮೊಗೇರ, ಪ.ಪಂ.ಸದಸ್ಯ ಸುರೇಶ ಮೇಸ್ತ, ಕಾಂಗ್ರೆಸ್ ಪಕ್ಷದ ಮುಖಂಡರಾದ ಗಜು ನಾಯ್ಕ, ಶ್ರೀರಾಮ್ ಜಾದುಗಾರ ಮತ್ತಿತರರು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ