

ಹೊನ್ನಾವರ : ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರಕಾರ ಮೀನುಗಾರರ ಅಬ್ಯುದಯಕ್ಕಾಗಿ ಪರಿಶ್ರಮಿಸುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೀನುಗಾರ ವಿಭಾಗದ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಮೀನುಗಾರರಿಗೆ ಇರುವ ಸೌಲಭ್ಯದ ಕುರಿತು ಮಾಹಿತಿ ನೀಡಿದರು.


ಪಟ್ಟಣದ ಖಾಸಗಿ ಹೊಟೇಲನಲ್ಲಿ ಮೀನುಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಯಾಂತ್ರಿಕ ಬೋಟ್‌ಗಳಿಗೆ ಅಧಿಕಾರಕ್ಕೆ ಬಂದ ತಕ್ಷಣ 300ಲೀಟರ್ ಡೀಸೆಲಗೆ ಬದಲಾಗಿ 500 ಲೀಟರ್ ನೀಡುತ್ತಿದೆ. ಮೀನುಗಾರ ಮಹಿಳೆಯರ ಆರ್ಥಿಕ ಸಬಲಿಕರಣಕ್ಕಾಗಿ 50,000 ರೂಪಾಯಿಯಿಂದ 3ಲಕ್ಷ ರೂಪಾಯಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿರುವುದು ಕಾಂಗ್ರೆಸ್ ಪಕ್ಷದ ಸಾಧನೆ ಎಂದರು. ಅಷ್ಟೇ ಅಲ್ಲದೇ ಮೀನುಗಾರರು ಮೀನುಗಾರಿಕೆಗೆ ತೆರಳಿದ ಸಂದರ್ಭದಲ್ಲಿ ದುರ್ಘಟನೆಯಿಂದ ಮೃತ ಪಟ್ಟರೇ, ಅಂತಹ ಕುಟುಂಬಗಳಿಗೆ ತಕ್ಷಣ 10ಲಕ್ಷ ರೂಪಾಯಿ ಪರಿಹಾರ ನೀಡುತ್ತಿರುವುದು ಕಾಂಗ್ರೆಸ್ ಪಕ್ಷ ಮೀನುಗಾರರ ಪರವಾಗಿರುವುದಕ್ಕೆ ಸಾಕ್ಷಿಯಾಗಿದೆ. ಕಾಸರಕೋಡಿನಲ್ಲಿ ಕೇಂದ್ರ ಸರಕಾರ ನಿರ್ಮಿಸಲು ಹೊರಟಿರುವ ಖಾಸಗಿ ವಾಣಿಜ್ಯ ಬಂದರಿನ ಕುರಿತಂತೆ ಮಾತನಾಡಿ ಸ್ಥಳೀಯ ಎಲ್ಲಾ ಮೀನುಗಾರ ಸಂಘಟನೆಗಳು ಒಗ್ಗಟ್ಟಾಗಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ನೀಡಲು ಬಯಸಿದರೇ, ತಾವು ಮುಂದಾಗಿ ಮೀನುಗಾರರ ಜೊತೆಯಲ್ಲಿದ್ದು ಸಮಯ ನಿಗದಿ ಪಡಿಸುವ ಬರವಸೆ ನೀಡಿದರು.
ರಾಷ್ಟ್ರೀಯ ಮೀನುಗಾರ ಸಂಘಟನೆಯ ಪ್ರಮುಖರಾದ ಚಂದ್ರಕಾAತ ಕೊಚರೇಕರ್ ಮಾತನಾಡಿ ಕರಾವಳಿಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕಾರವಾರ, ಬೇಲೆಕೇರಿ, ಮಂಗಳೂರು ಬಂದರುಗಳು ಮುಂದಿನ ನೂರಾರು ವರ್ಷಗಳ ಕಾಲ ರಾಜ್ಯದ ಅಗತ್ಯಗಳನ್ನು ಪೂರೈಸುವ ಸಾಮರ್ಥೈವನ್ನು ಹೊಂದಿದ್ದರು ಕೂಡಾ, ಸರಕಾರ ಕೇವಲ ಅಭಿವೃದ್ಧಿಯ ಹೆಸರಿನಲ್ಲಿ ಕರಾವಳಿಯ ಕಾಸರಕೋಡ ಮತ್ತು ಇತರ ಭಾಗಗಳಲ್ಲಿ ವಾಣಿಜ್ಯ ಬಂದರುಗಳನ್ನು ನಿರ್ಮಾಣ ಮಾಡಲು ಹೊರಟಿರುವುದು ಅತ್ಯಂತ ಅಪಾಯಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಲಕ್ಷಾಂತರ ಮೀನುಗಾರರು ತಮ್ಮ ಬದುಕನ್ನು ಕಳೆದುಕೊಳ್ಳುವ ದಿನಗಳು ಬಂದಲ್ಲಿ ಆಶ್ಚರ್ಯವಿಲ್ಲಾ ಎಂದು ಆತಂಕ ವ್ಯಕ್ತಪಡಿಸಿದರು.
ಮೀನುಗಾರ ಮುಖಂಡರಾದ ರಾಜು ತಾಂಡೆಲ್ ಮಾತನಾಡಿ ಕಾಸರಕೋಡಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಖಾಸಗಿ ವಾಣಿಜ್ಯ ಬಂದರಿನಿAದ ಅನೇಕ ಸ್ಥಳೀಯ ಮೀನುಗಾರರು ತಮ್ಮ ಮನೆ, ಭೂಮಿಗಳನ್ನು ಕಳೆದು ಕೊಳ್ಳುತ್ತಿದ್ದು, ಅಂತವರ ಪರ ನಿಂತು ಹೋರಾಟ ನಡೆಸಿದರೇ ಸರಕಾರ ವಿನಾ ಕಾರಣ ನಮ್ಮ ಮೇಲೆ ಕೇಸ್ ದಾಖಲಿಸಿ ಜೈಲಿಗೆ ಕಳಿಸುತ್ತಿರುವುದು ಘನಘೋರ ಅನ್ಯಾಯ ಎಂದು ತಮ್ಮ ಅಳಲು ತೊಡಿಕೊಂಡರು. ರಾಜ್ಯಾಧ್ಯಕ್ಷರಾದ ತಾವು ಮಹಿಳೆಯರು ಮತ್ತು ಅಮಾಯಕರ ಮೇಲೆ ಪೊಲೀಸರು ಹಾಕಿರುವ ಮೊಕದ್ದಮ್ಮೆಯನ್ನು ಹಿಂಪಡೆಯಲು ಸರಕಾರದ ಮೇಲೆ ಒತ್ತಡ ತರುವಂತೆ ಒತ್ತಾಯಿಸಿದರು.
ಇನ್ನೊರ್ವ ಮೀನುಗಾರ ಸಂಘಟನೆಯ ಪ್ರಮುಖರಾದ ರಾಜೇಶ ತಾಂಡೆಲ್ ಮಾತನಾಡಿ ಕಾಸರಕೋಡ ವಾಣಿಜ್ಯ ಬಂದರಿನಿAದ ಅನೇಕ ಬಡ ಕುಟುಂಬಗಳು ತಮ್ಮ ಸಾಂಪ್ರದಾಯಿಕ ಮೀನುಗಾರಿಕೆಯಿಂದ ವಂಚಿತರಾಗುತ್ತಿದ್ದು ಅಂತಹ ಕುಟುಂಬಗಳಿಗೆ ಸರಕಾರ ರಕ್ಷಣೆ ನೀಡಲು ಮುಂದಾಗುವAತೆ ಆಗ್ರಹಿಸಿದರು.
ಕೆ.ಪಿ.ಸಿ.ಸಿ.ಮೀನುಗಾರ ವಿಭಾಗದ ಜಂಟಿ ಕಾರ್ಯದರ್ಶಿ ಅಭಿಷೇಕ್ ತಾಂಡೆಲ್ ಮಾತನಾಡಿ ನಮ್ಮ ಮೀನುಗಾರ ಸಮುದಾಯಕ್ಕೆ ನ್ಯಾಯವಾಗಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ. ಇದಕ್ಕೆ ಕಾರಣ ನಾವು ಕೇವಲ ಮೀನುಗಾರಿಕೆಗೆ ನಂಬಿಕೊAಡು ಜೀವನ ಸಾಗಿಸುತ್ತಾ, ನಮ್ಮ ಮಕ್ಕಳಿಗೆ ಶಿಕ್ಷಣ ನೀಡಲು ಮರೆತಿದ್ದೇವೆ ಎಂದು ವಿಷಾದ ವ್ಯಕ್ತ ಪಡಿಸಿದರು. ಸರಕಾರವು ಮೀನುಗಾರ ಮಕ್ಕಳಿಗೆ ಶಿಕ್ಷಣಕ್ಕಾಗಿ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡರು.
ಕೆ.ಪಿ.ಸಿ.ಸಿ ಮೀನುಗಾರ ವಿಭಾಗದ ಜಿಲ್ಲಾ ಅಧ್ಯಕ್ಷರ ಪ್ರಕಾಶ ಜೈವಂತ್ ಮಾತನಾಡಿ, ನಮ್ಮ ರಾಜ್ಯಾಧ್ಯಕ್ಷರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ, ಮೀನುಗಾರರ ಸಮಸ್ಯೆಗಳ ಪಟ್ಟಿ ಮಾಡಿ, ಅವರ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಚರ್ಚಿಸುತ್ತಿರುವ ಅವರ ಕಾರ್ಯ ಶ್ಲಾಘನೀಯ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ಉಗ್ರಾಣಕರ, ಕುಮಟಾ ಪುರಸಭೆಯ ಮಾಜಿ ಸದಸ್ಯೆ, ಮೀನುಗಾರ ಮುಖಂಡರಾದ ಶ್ರೀಮತಿ ಅನಿತಾ ಮಾಫಾರಿ ಮಾತನಾಡಿದರು. ಬೆಳ್ಕೊಂಡ ಮೀನುಗಾರಿಕಾ ಸೊಸೈಟಿಯ ನಿರ್ದೆಶಕರಾದ ರವಿ ಮೊಗೇರ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಕೇಶವ ಮೇಸ್ತ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮೇಸ್ತ, ಮಂಜುನಾಥ ಖಾರ್ವಿ ಇತರರು ಇದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್.ತೆಂಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ.ಪಂ.ಸದಸ್ಯ ಸುರೇಶ ಮೇಸ್ತ ವಂದಿಸಿದರು. ಕಾರ್ಯಕ್ರಮದ ನಂತರ ರಾಜ್ಯಾಧ್ಯಕ್ಷ ಮಂಜುನಾಥ ಸುಣಗಾರ ಪಟ್ಟಣದ ಉದಯಮ ನಗರ, ಸುಣ್ಣದ ಗುಡ್ಡಾ, ಬೆಳಕೊಂಡ ಸೊಸ್ಯಟಿಗಳಿಗೆ ತೆರಳಿ ಮೀನುಗಾರರ ಸಮಸ್ಯೆಯನ್ನು ಆಲಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ