November 19, 2025

ಕಾಮಕೋಡ ದೇವರಕಾಡಿನಲ್ಲಿ ವನಮಹೋತ್ಸವ .

ಹೊನ್ನಾವರ: ಕಾಮಕೋಡ ದುರ್ಗಮ್ಮ ದೇವಸ್ಥಾನ,ಅರಣ್ಯ ಇಲಾಖೆ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಸಹಯೋಗದಲ್ಲಿ ‘ವನಮಹೋತ್ಸವ’ ಕಾರ್ಯಕ್ರಮ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿ ಆ.25ರಂದು ಮಧ್ಯಾಹ್ನ 3.30ಕ್ಕೆ ನಡೆಯಲಿದೆ.

ಕರ್ನಾಟಕ ಹೈಕೋರ್ಟ್ ನ ಹಿರಿಯ ನ್ಯಾಯವಾದಿ ವಿಘ್ನೇಶ್ವರ ಶಾಸ್ತಿç,ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ, ಕಾಮಕೋಡ ದೇವಸ್ಥಾನ ಸಮಿತಿಯ ಅಧ್ಯಕ್ಷ ನೀಲಕಂಠ ನಾಯ್ಕ,ಉಪಾಧ್ಯಕ್ಷ ಗಂಗಾಧರ ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ’ ಎಂದು ಉಪ ವಲಯ ಅರಣ್ಯಾಧಿಕಾರಿ ವಿಶಾಲ್ ಡಿ. ಹಾಗೂ ಕಾಮಕೋಡ ಪರಿಸರ ಕೂಟದ ಅಧ್ಯಕ್ಷ ಡಾ.ಎಂ.ಜಿ.ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

error: Content is protected !!