ಹೊನ್ನಾವರ : ಕರ್ನಾಟಕ ರಾಜ್ಯಏಡ್ಸ್ ಪ್ರಿವೆನ್ಸ್ನ್ ಸೊಸೈಟಿ ಬೆಂಗಳೂರು, ಸ್ಪರ್ಷ ಸಂಸ್ಥೆ ಕುಮಟಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ, ಜಿಲ್ಲಾ ಶೈಕ್ಷಣಿಕ ವಿಭಾಗ ಕಾರವಾರ,ಶಿರಸಿ, ಜಿಲ್ಲಾ ಏಡ್ಸ್ ನಿಯತ್ರಣ ವಿಭಾಗ, ಇವುಗಳ ಸಂಯುಕ್ತಾಶ್ರಯದಲ್ಲಿ ಜೈಹಿಂದ್ ಹೈಸ್ಕೂಲ ಅಂಕೋಲಾದಲ್ಲಿ ಹೈಸ್ಕೂಲ ಮತ್ತು ಪಿಯು ಪ್ರಥಮ ಕಾಲೇಜುಗಳಿಗೆ ಜಿಲ್ಲಾ ಮಟ್ಟದರಸಪ್ರಶ್ನೆ ಸ್ಪರ್ಧಾಕಾರ್ಯ ಕ್ರಮ ಜರುಗಿತು. ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಜಿಲ್ಲಾ ಏಡ್ಸ್ ಎಂ& ಇ ಆಫೀಸರ್ ಶ್ರೀಕಾಂತ ಹೀರೆಮಠ ಮಾತನಾಡುತ್ತ ಹದಿಹರೆಯದಲ್ಲಿ ಹೆಚ್.ಐ.ವಿ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ನೈತಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ನಮ್ಮ ಐ.ಸಿ.ಟಿ.ಸಿವಿಭಾಗದ ಆಪ್ತ ಸಮಾಲೋಚಕರು ಹದಿಹರೆಯದವರಿಗೆ ಆರೋಗ್ಯ ಶಿಕ್ಷಣ ನೀಡಲು ಈಗಾಗಲೇ ತರಭೇತಿ ನೀಡಲಾಗಿದ್ದುಪ್ರತಿ ಹೈಸ್ಕೂಲ ಮತ್ತು ಪದವಿಪೂರ್ವ ಕಾಲೇಜಿನವರು ಆಪ್ತ ಸಮಾಲೋಚಕರನ್ನು ಸಂಪರ್ಕಿಸಿ ಮಕ್ಕಳಿಗೆ ಆರೋಗ್ಯ ಕುರಿತು ತರಭೇತಿನೀಡಬಹುದಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾರವಾರದ ಸೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಪಾದರ್ ಸ್ಟ್ಯಾನಿ ಪಿಂಟೊ, ಮಾತನಾಡಿ ಹದಿಹರೆಯದಲ್ಲಿ ಮೂಡುವ ಕೂತುಹಲವನ್ನು ಪ್ರಯೋಗಾತ್ಮಕಾಗಿ ನೋಡಲು ನೈತಿಕತೆಯನ್ನು ಮೀರಿದ ದಾರಿ ಹಿಡಿಯಬಾರದು. ಹೆಚ್.ಐ.ವಿ ಬಗ್ಗೆ ಇಂತಹ ಕಾರ್ಯಕ್ರಮಗಳಿಂದ ಹೆಚ್ಚಿನ ಮಾಹಿತಿ ಪಡೆಯಲು ಮಕ್ಕಳಿಗೆ ಅನೂಕೂಲವಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈಹಿಂದ ಹೈಸ್ಕೂಲ ಮುಖ್ಯಾಧ್ಯಾಪಕರಾದ ಪ್ರಭಾಕರ ಭಂಟ ವಹಿಸಿದರು. ವೇದಿಕೆಯಲ್ಲಿ ಜಿಲ್ಲಾ ಮೇಲ್ವಿಚಕರಾದ ನೀಲೇಶ ನಾಯ್ಕ, ಅಂಕೋಲಾ ಐ.ಸಿ.ಟಿ.ಸಿ ವಿಭಾಗದ ಆಪ್ತಸಮಾಲೋಚಕರಾದ ಶ್ರೀಮತಿ ರಾಜೇಶ್ವರಿ ಕೀರ್ಲೋಸ್ಕರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳ ವಿದ್ಯಾರ್ಥಿಗಳು ಭಾಗವಹಿಸಿದರು. ಜಿಲ್ಲಾ ಲೆಕ್ಕಾಧಿಕಾರಿಗಳಾದ ವಿನೋಧ ಹೊನ್ನಾವರ, ಐ.ಸಿ.ಟಿ.ಸಿಕುಮಟಾದ ಆಪ್ತ ಸಮಾಲೋಚಕರಾದ ಪ್ರದೀಪ್ ನಾಯ್ಕ, ಕಾರ್ಯಕ್ರಮದಲ್ಲಿ ಹಾಜರಿದ್ದು ಸಹಕರಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಹೊನ್ನಾವರ ಎಸ್.ಡಿ.ಎಂ ಪಿ.ಯು. ಕಾಲೇಜಿನ ವಿಧ್ಯಾರ್ಥಿಳಾದ ಕುಮಾರಿ ಧನ್ಯಾ ಗಣಪತಿ ಭಟ್, ಕುಮಾರಿ ರಕ್ಷಿತಾ ರಮೇಶ ನಾಯ್ಕ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಮಟಾದ ಸಿ.ವಿ.ಎಸ್.ಕೆ ಪ್ರೌಢಶಾಲೆಯವಿಧ್ಯಾರ್ಥಿಗಳಾದ ಕುಮಾರಿ ಸವಿತಾ ಸಾರಂಗ, ಕುಮಾರಿ ಸಹನಾ ಹೆಗಡೆ, ದ್ವೀತಿಯ ಸ್ಥಾನವನ್ನು, ಮೂರನೆಯ ಸ್ಥಾನವನ್ನು ಕಡತೋಕಾದ ಜನತಾ ವಿದ್ಯಾಲಯದ ಪದವಿಪೂರ್ವ ಕಾಲೇಜಿನ ಕುಮಾರಿ ವಿನುತಾ ಪರಮೇಶ್ವರ ಗೌಡ ಮತ್ತು ಕುಮಾರಿ ಸೌಮ್ಯ ನಾರಾಯಣ ಮುಕ್ರಿಪಡೆದು ಕೊಂಡಿದ್ದಾರೆ.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”