August 29, 2025

ಪಂಪ್ಡ್ ಸ್ಟೋರೇಜ್ ಯೋಜನೆನ್ನು ತಕ್ಷಣವೇ ಹಿಂಪಡೆಯಬೇಕೆ0ದು ಸರ್ವಾನುಮತದಿಂದ ಖಂಡನೆ..

ಹೊನ್ನಾವರ: ಶರಾವತಿ ಕೊಳ್ಳದ ಅಪೂರ್ವ ನಿತ್ಯಹರಿದ್ವರ್ಣ ಅರಣ್ಯ, ಜೀವವೈವಿಧ್ಯ, ಸ್ಥಳೀಯ ಜನಜೀವನ, ಆರ್ಥಿಕ ಹಾಗೂ ಪರಿಸರ ಶಾಶ್ವತತೆಯನ್ನು ಹಾಳುಮಾಡುವಂತಹ ಅವೈಜ್ಞಾನಿಕ, ವಿನಾಶಕಾರಿ ಪಂಪ್ಡ್ ಸ್ಟೋರೇಜ್ ಯೋಜನೆನ್ನು ತಕ್ಷಣವೇ ಹಿಂಪಡೆಯಬೇಕೆAದು ತಾಲೂಕಿನ ಗೇರುಸೊಪ್ಪಾ ಶ್ರೀ ವೀರಾಂಜನೇಯ ಸಭಾಭವನದಲ್ಲಿ ರವಿವಾರ ನಡೆದ ಬೃಹತ್ ಸಾರ್ವಜನಿಕ ಸಭೆಯು ಸರ್ವಾನುಮತದಿಂದ ಖಂಡಿಸಿದೆ.

   ಶ್ರೀ ವಿಶ್ವವೀರಾಂಜನೇಯ ಮಂಹಾಸAಸ್ಥಾನದ ಧರ್ಮದರ್ಶಿಗಳಾದ  ಶ್ರೀ ಮಾರುತಿ ಗುರೂಜಿಯವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಾವು ಜಾಣ ಕುರುಡರು, ಜಾಣ ಕಿವುಡರು ಆಗಬಾರದು. ಇಂದು ಆರೋಗ್ಯಕರ ಚಿಂತನೆ ಆಗಬೇಕು ಎನ್ನುವ ದೃಷ್ಟಿಯಿಂದ ಸಭೆ ನಡೆಸಲಾಗಿದೆ. ಇಂದು ಕೈಗೊಂಡ ಖಂಡನಾ ನಿರ್ಣಯ ಪಂಚಾಯತದಿAದ ಪ್ರಧಾನಮಂತ್ರಿಯವರೆಗೂ  ತಲುಪಬೇಕಿದೆ ಎಂದರು. ಒಂದೊಮ್ಮೆ ಯೋಜನೆಗಾಗಿ ಜೆಸಿಬಿ ಮೂಲಕ ಮಣ್ಣು ಅಗೆಯಲು ಮುಂದಾದರೆ ನಾನು ಜೆಸಿಬಿ ಎದುರು ಮಲಗುತ್ತೇನೆ. ನನ್ನನ್ನು ಮುಗಿಸಿ ಮುಂದೆಹೋಗಲಿ. ಮುಂದಿನ ತಿಂಗಳು ಕೆಪಿಸಿಯಿಂದ ನಡೆಸಲಿರುವ ಸಭೆಯನ್ನು ಸಹ ವಿರೋಧಿಸುತ್ತೇನೆ ಎಂದು ಸವಾಲೆಸೆದರು. ಈಗಾಗಲೇ ನನಗೆ ಬೆದರಿಕೆ ಕರೆಗಳು ಬಂದಿದೆ. ಇಂದು ಕೇವಲ ಸಭೆ ಅಷ್ಟೇ, ಮುಂದೆ ಶರಾವತಿ ಎಡಬಲದ ಭಕ್ತಾದಿಗಳೊಡಗೂಡಿ, ಸಾಧು, ಸಂತರ ಸಮಿತಿಯೊಡಗೂಡಿ ಬ್ರಹತ್ ಹೋರಾಟ ನಡೆಸುತ್ತೇನೆ. ಇದು ಕೇಣಿ ವಾಣಿಜ್ಯ ಬಂದರು, ಅಪ್ಪಿಕೋ ಚಳುವಳಿ, ಉಪ್ಪಿನ ಚಳುವಳಿ ಮಾದರಿಯಲ್ಲಿಯೇ ಆಗಲಿದೆ ಎಂದರು.

 ಜಿಪಂ ಮಾಜಿ ಸದಸ್ಯ ಪಿ.ಎಸ್.ಭಟ್ ಉಪ್ಪೋಣಿ ಮಾತನಾಡಿ, ಯೋಜನೆಯಿಂದ  ನಾವು ಮುಂದಿನ ದಿನಗಳಲ್ಲಿ ದಿನ ಬಳಕೆಗೆ ಉಪ್ಪು ನೀರನ್ನು ಬಳಸಬೇಕಾಗುವ ಪರಿಸ್ಥಿತಿ ಬರುತ್ತದೆ. ಈ ಯೋಜನೆಯಲ್ಲಿ ಷಡ್ಯಂತ್ರ ಇದೆ ಎಂದರು. ಕೆಪಿಸಿಎಲ್ ನ ಕಾರ್ಯನಿರ್ವಾಹಕ ಅಭಿಯಂತರರಾದ  ವಿಜಯ್ ಯೋಜನೆ ಕುರಿತು ವಿವರಿಸಿ,  ಈ ಯೋಜನೆಯಲ್ಲಿ ಶರಾವತಿ ನದಿ ಯಾವ ರೀತಿ ಬಳಕೆ ಆಗಲಿದೆ ಎನ್ನುವುದನ್ನು ಸಭೆಯಲ್ಲಿ ತಿಳಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ಯೋಜನೆಯಿಂದ ವಿದ್ಯುತ್ ಉತ್ಪಾದನೆ ಆದ ನಂತರ ಅದರ ಹಂಚಿಕೆ ಹೇಗೆ ಮಾಡಲಾಗುತ್ತದೆ. ಆಗ ಮತ್ತೇ ಅರಣ್ಯ ನಾಶ ಆಗುವುದಿಲ್ಲವೇ? ಈ ಬಗ್ಗೆ ಕೆಪಿಸಿ ಉತ್ತರ ನೀಡಲಿ. .ವಿದ್ಯುತ್ ಉತ್ಪಾದಿಸಲು ಅನೇಕ ಮಾರ್ಗಗಳಿವೆ, ಅದನ್ನು ಬಳಸಲಿ. ಯೋಜನೆ ವಿರುದ್ದದ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದರು.

ಪರಿಸರ ವಿಜ್ಞಾನಿ ಡಾ.ಟಿ.ವಿ ರಾಮಚಂದ್ರ ಮಾತನಾಡಿ, ಇದು ಪರಿಸರ ಸೂಕ್ಷ್ಮ ಪ್ರದೇಶ, ಇಲ್ಲಿ ಯಾವುದೇ ಯೋಜನೆ ಜಾರಿ ಮಾಡಲು ಸಾಧ್ಯವಿಲ್ಲ. ಇಂದು ಸಮಾಜ, ವಿಜ್ಞಾನ, ಸಂಸ್ಕ್ರತಿ ಒಂದೂಗೂಡಿದೆ. ಅಧಿಕಾರಿಗಳ ಕುತಂತ್ರದಿAದ ಇಂತಹ ಯೋಜನೆ ತರಲು ಮುಂದಾಗಿದ್ದಾರೆ. ಇದಕ್ಕೆ ನಾವೆಲ್ಲಾ ವಿರೋಧಿಸಬೇಕು ಎಂದರು. ಡಾ.ಪ್ರಕಾಶ್ ಮೇಸ್ತ ಮಾತನಾಡಿ, ಪಂಚಭೂತಗಳಲ್ಲಿ ಒಂದಾದ ಜಲಮೂಲವನ್ನು ನಾವು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಅವೈಜ್ಞಾನಿಕ ಯೋಜನೆಗಳು ಮುಂದಿನ ದಿನಗಳಲ್ಲಿ ಮಾರಕವಾಗಲಿದೆ ಎಂದರು.

ಅಖಿಲೇಶ್ ಚಿಪ್ಲಿ ಮಾತನಾಡಿ, ಇಲ್ಲಿನ ಜೀವವೈವಿಧ್ಯತೆಯ ಬಗ್ಗೆ ಅಧ್ಯಯನ ಮಾಡದೇ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾರೆ. ತಂತ್ರಜ್ಞಾನ ಎಷ್ಟೊಂದು ಮುಂದುವರೆದಿದೆ, ಆದರೆ ಇನ್ನು ಈ ಭೂಗತ ಯೋಜನೆಯ ಮೂಲಕ ವಿದ್ಯುತ್ ಉತ್ಪಾದಿಸಲು ಮುಂದಾಗುತ್ತಿದ್ದಾರೆ ಎಂದರು. ಡಾ.ಗಿರೀಶ್ ಜನ್ನೆ, ಡಾ.ಎನ್.ಎಂ.ಗುರುಪ್ರಸಾದ್, ಡಾ.ಸವಿನಯ ಮಾಲ್ವೆ, ಡಾ.ಸಚೇತ್ ಹೆಗಡೆ, ಕಾರ್ತಿಕ್ ಸಾಲೇಹಿತ್ತಲ್ ,ಸಂದೀಪ್ ಹೆಗಡೆ, ಪ್ರೋ.ಬಿ.ಎಮ್.ಕುಮಾರಸ್ವಾಮಿ, ಎಂ.ಡಿ.ಸುಭಾಷ್ ಚಂದ್ರನ್ , ಡಾ.ಶ್ರೀಪತಿ, ಶಂಕರ್ ಶರ್ಮಾ, , ಮಂಜುನಾಥ ನಾಯ್ಡು, ಕೇಶವ್ ಕೂರ್ಸೆ ಪರಿಸರ ತಜ್ಞರು, ವಿಜ್ಞಾನಿಗಳು, ಸಸ್ಯಶಾಸ್ತ್ರಜ್ಞರು, ಸಂಶೋಧಕರು ತಮ್ಮ ವಿಷಯವನ್ನು ಮಂಡಿಸಿದರು.

ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author