
ಹೊನ್ನಾವರ; ಅಖಿಲ ಭಾರತ ಕಲಾವಿದ್ಯಾರ್ಥಿಗಳಿಗೆ 21 ದಿನಗಳ ಪರಿಚಯಾತ್ಮಕ ಯಕ್ಷಗಾನ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಶ್ರೀಮಯ ಯಕ್ಷಗಾನ ಕಲಾಕೇಂದ್ರ ಕೆರೆಮನೆ – ಗುಣವಂತೆಯಲ್ಲಿ ಸಂಪನ್ನಗೊAಡಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸದ್ದ ಸೇಂಟ್ ಮಿಲಾಗ್ರೀಸ್ ಸೌಹಾರ್ದ ಕೋ-ಆಫ್ ರೇಟಿವ್ ಸೊಸೈಟಿ ಅಧ್ಯಕ್ಷರಾದ ಜಾರ್ಜ್ ಫರ್ನಾಂಡೀಸ್, ಮಾತನಾಡಿ ಕೆರೆಮನೆ ಮೇಳ ಯಕ್ಷಾಗಾನಕ್ಕೆ ನೀಡುತ್ತಿರುವ ಸೇವೆಯನ್ನು ಮತ್ತು ಕೆರಮನೆ ಕಲಾವಿದರ ಕಲಾ ಶ್ರೇಷ್ಠತೆಯನ್ನು ಸ್ಮರಿಸಿದರು. ತಮ್ಮ ಬಾಲ್ಯ ಜೀವನದಲ್ಲಿ ಯಕ್ಷಗಾನ ನೋಡಿದ ಅನುಭವ ಹಂಚಿಕೊಳ್ಳುತ್ತಾ, ಹಿರಿಯರು ಯಕ್ಷಗಾನ ನೋಡಲು ತಮ್ಮ ಜೊತೆಗೆ ಕಿರಿಯರ ಮತ್ತು ಯುವಕರನ್ನು ಕರೆ ತರುವಂತೆ ಸಲಹೆ ನೀಡಿದರು.

ಉಪನ್ಯಾಸಕ ನಾಗರಾಜ ಹೆಗಡೆ ಅಪಗಾಲ ಮಾತನಾಡಿ ಸಾಂಸ್ಕೃತಿಕ ವಿನಿಮಯ ಮತ್ತು ಸಂಸ್ಕೃತಿಗಳ ವಿನಿಮಯದಿಂದ ಮಾತ್ರವೇ ಜಾಗತೀಕರಣ ಯಶಸ್ವಿಯಾಗಲು ಸಾಧ್ಯ. ಕೆರಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಯಶ್ವಸಿಯಾಗಿ ಆಯೋಜಿಸುತ್ತಿರುವ, ಕೆರೆಮನೆ ಮೇಳದ ನಾಲ್ಕು ತಲೆಮಾರು ಯಕ್ಷಗಾನ ಸೇವೆಯಲ್ಲಿ ಇಂದು ನಿರತವಾಗಿರುವುದು ಸಂತಸದ ಸಂಗತಿ. ಭಾರತದ ಕಲೆಗಳಿಗೆ ಒಂದು ಅಂತರ್-ಸAಬAಧವಿದೆ. ಈ ರೀತಿಯ ತರಬೇತಿ ಸಾಂಸ್ಕೃತಿಕ ವಿನಿಮಯಕ್ಕೆ ಮತ್ತು ಕಲೆಯ ಸಂಬAಧ ಇನ್ನೂ ಗಟ್ಟಿಯಾಗಲು ಕಾರಣವಾಗಲಿದೆ ಎಂದರು.
ಬಾಲಚಂದ್ರ ಗೌಡ ಮುಗಳಿ ಮಾತನಾಡಿ ಯಕ್ಷಗಾನ ಕಲೆಯ ಬೆಳವಣಿಗೆ ಕೆರೆಮನೆ ಮೇಳ ವಿಶೇಷ ಕೊಡುಗೆ ನೀಡಿದೆ ಎಂದರು. ದೇಶದ ವಿವಿಧ ಕಡೆಗಳಿಂದ ಆಗಮಿಸಿದ ಅಖಿಲ ಭಾರತ ಕಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು. ಆನಂತರ ಅಖಿಲ ಭಾರತ ಕಲಾ ವಿದ್ಯಾರ್ಥಿಗಳು ಕಾರ್ಯಾಗಾರದ ತಮ್ಮ ಅನುಭವವನ್ನು ಸಭೆಯಲ್ಲಿ ಇಲ್ಲಿನ ಪರಿಸರ ,ಕಲೆ ಸಂಸ್ಕೃತಿ ಗಳನ್ನ ಮೆಚ್ಚಿ ಅನಿಸಿಕೆ ಹಂಚಿಕೊAಡರು. ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ಸ್ವಾಗತಿಸಿ ವಂದಿಸಿದರು. ಮಹೇಶ ಹೆಗಡೆ, ಮಾಳ್ಕೋಡ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ನಂತರ ಕಾರ್ಯಾಗಾರದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಪೂರ್ವರಂಗ, ಪ್ರಯಾಣ , ತೆರೆ ಒಡ್ಡೋಲಗ ಪ್ರದರ್ಶನ ಸೇರಿದ ಜನರ ಮನಸೂರೆಗೊಂಡಿತು. ವಿದ್ಯಾರ್ಥಿಗಳಿಗೆ ಮಂಡಳಿ ಕಾರ್ಯಾಗಾರದ ಪ್ರಮಾಣಪತ್ರ, ಯಕ್ಷಗಾನದ ಶಾಲು , ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು .
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ