ಭಟ್ಕಳ: ತಾಲೂಕಿನ ಜಾಲಿ ಕ್ರಾಸ್ ಬಳಿ ಭೀಕರ ಬೆಂಕಿ ಅವಘಡ ಸಂಭವಿಸಿ, ಇಪ್ತಿಕಾರ್ ಮೋಹಿದೀನ್ ಮಾಲೀಕತ್ವದ ತಾಸಿನ್ ಫ್ರೂಟ್ಸ್ & ವೆಜಿಟೇಬಲ್ಸ್ ಹೋಲ್‌ಸೇಲ್ ಅಂಗಡಿ ಭಸ್ಮವಾದ ಘಟನೆ ಆತಂಕ ಮೂಡಿಸಿದೆ. ಅಂಗಡಿಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆAಬ ಶಂಕೆ ವ್ಯಕ್ತವಾಗಿದೆ. ಕೆಲವೇ ನಿಮಿಷಗಳಲ್ಲಿ ಅಂಗಡಿ ಕೆನ್ನಾಲಿಗೆಯ ಕಾವಲು ಸಿಕ್ಕಿ ಲಕ್ಷಾಂತರ ಮೌಲ್ಯದ ಹಣ್ಣು ತರಕಾರಿ ಹಾಗೂ ಇತರ ಸಾಮಗ್ರಿಗಳು ಸುಟ್ಟುಹೋದವು.
ಘಟನಾ ಸ್ಥಳಕ್ಕೆ ಧಾವಿಸಿದ ಭಟ್ಕಳ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಹರಸಾಹಸ ಪಟ್ಟರೂ ತೀವ್ರತೆಗೆ ತಲೆಬಾಗಬೇಕಾಯಿತು. ಬಳಿಕ ಹೊನ್ನಾವರ ಮತ್ತು ಬೈಂದೂರು ಅಗ್ನಿಶಾಮಕ ವಾಹನಗಳು ಸಹ ಸ್ಥಳಕ್ಕೆ ಧಾವಿಸಿ, ಸಂಯುಕ್ತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ತಕ್ಷಣ ಸ್ಥಳಕ್ಕೆ ತಹಶೀಲ್ದಾರ ನಾಗೇಂದ್ರ ಕೋಳಶೆಟ್ಟಿ ಹಾಗೂ ಹೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಅವಘಡದಿಂದ ಅಂಗಡಿ ಮಾಲಿಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದ್ದು, ವ್ಯಾಪಾರ ವಲಯದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ