August 29, 2025

‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’

ಹೊನ್ನಾವರ : ತಾಲೂಕಿನ ಹರಡಸೆಯಲ್ಲಿ ಆಚರಿಸಿದ ಸಾರ್ವಜನಿಕ ಗಣೇಶೋತ್ಸವದಲ್ಲಿ, ‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’ ಎಲ್ಲರ ಗಮನ ಸೆಳೆಯಿತು. ಹೊನ್ನಾವರ ಹರಡಸೆಯ ಗಣೇಶೋತ್ಸವದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಯುವಕ ಸಂಘದವರು ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿಯು, ಅಯ್ಯಪ್ಪ ಸ್ವಾಮಿ ರೂಪದಲ್ಲಿ ಕಂಗೊಳಿಸುತಿದ್ದನು. ಹಿರಿಯ ಕಲಾವಿದ ಚಿಕ್ಕನಕೋಡು ಮಾಬ್ಲಾ ಆಚಾರಿ ಈ ಗಣೇಶನ ಮೂರ್ತಿ ನಿರ್ಮಿಸಿದ್ದರು. ಶಬರಿಮಲೆ ಅಯ್ಯಪ್ಪ ಸ್ವಾಮಿಯ ದೇವಸ್ಥಾನವನ್ನು ಹೋಲುವ ಸುಂದರ ಮಂಟಪವನ್ನು ಗುಂಡಬಾಳದ ರಮೇಶ್ ಆಚಾರ್ಯ ನಿರ್ಮಿಸಿದ್ದರು.

 ಈ ವರ್ಷದಲ್ಲಿ   ವಿಶೇಷ ಎಂಬAತೆ  ಹೈಸ್ಕೂಲ್ ವಿದ್ಯಾರ್ಥಿ  ಹಾಗೂ ಸ್ಥಳೀಯ ಪ್ರತಿಭೆ  ಕುಮಾರ್ ನಂದನ್ ನಾಯ್ಕ್  ನಿರ್ಮಿಸಿದ    'ಆಪರೇಷನ್ ಸಿಂಧೂರ್'  ಥೀಮ್ ಎಲ್ಲರ  ಮೆಚ್ಚುಗೆಗೆ  ಸಾಕ್ಷಿಯಾಯಿತು.  ಈ  ಥೀಮ್ ನಲ್ಲಿ ಕಾಣಿಸುವ  ಆರ್ಮಿ ಟ್ರಕ್  ಮತ್ತು  ಪ್ರಧಾನಿ ಮೋದಿಯವರನ್ನು  ಮಣ್ಣಿನಿಂದ ನಿರ್ಮಿಸಿದರೆ;          ಕ್ಷಿಪಣಿ,  ವಾಚ್ ಟವೆರ್,   ಆಕಾಶದಲ್ಲಿನ ಮೋಡ  ಮುಂತಾದವುಗಳ  ನಿರ್ಮಾಣಕ್ಕೆ,    ಕಾರ್ಡ್ ಸೀಟ್,  ಹತ್ತಿ,  ಎ???ಡಿ  ಬಲ್ಬ್,  ಮತ್ತು  ಬಣ್ಣ  ಬಳಸಲಾಗಿತ್ತು.

 ಇನ್ನು ಗಣೇಶೋತ್ಸವದಲ್ಲಿ  ಸಾಮೂಹಿಕ ಸತ್ಯಗಣಪತಿ ಕಥೆ,  ಊರಿನ ಶ್ರೀ ಲಕ್ಷ್ಮೀ  ನರಸಿಂಹ ಭಜನಾ ಮಂಡಳಿಯವರಿAದ  ಭಕ್ತಿ ಭಜನೆ,   ಅನ್ನ ಸಂತರ್ಪಣೆ ಸೇರಿದಂತೆ  ವಿವಿಧ  ಧಾರ್ಮಿಕ,  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು ಗಣೇಶೋತ್ಸವ ಅದ್ದೂರಿಯಾಗಿ ಸಂಪನ್ನಗೊAಡಿತು.

ವರದಿ : ನರಸಿಂಹ ನಾಯ್ಕ, ಹರಡಸೆ

About The Author