


ಜೈಲಿನಿ0ದ ಬಿಡುಗಡೆಯಾದ ಆರೋಪಿ ಕೆಲವೇ ದಿನಗಳಲ್ಲಿ ಮತ್ತೆ ಕಳ್ಳತನ!
ಭಟ್ಕಳ: ಶಿರಾಲಿ ಗುಡಿಹಿತ್ಲು ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಹುಂಡಿಯನ್ನು ಒಡೆದು ಹಣ ಕದ್ದ ಇಬ್ಬರು ಕಳ್ಳರು ಭಟ್ಕಳ ಗ್ರಾಮೀಣ ಠಾಣೆ ಪೊಲೀಸರ ಚುರುಕು ಕಾರ್ಯಾಚರಣೆಗೆ ಸಿಕ್ಕಿಬಿದ್ದು ಲಾಕ್‌ಅಪ್‌ಗೆ ಸೇರಿದ್ದಾರೆ! ಬಂಧಿತರು ದರ್ಶನ ಮಂಜುನಾಥ ನಾಯ್ಕ (ಕಾರಗದ್ದೆ) ಹಾಗೂ ನಾರಾಯಣ ನಾಗಪ್ಪ (ಗುಡಿಹಿಟ್ಲು). ಆಗಸ್ಟ್ 29ರ ಮಧ್ಯರಾತ್ರಿ ಹುಂಡಿ ಒಡೆದು ಹಣ ಕದ್ದಿದ್ದ ಈ ದೃಶ್ಯ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿಬಿದ್ದರು.
ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಅವರಿಂದ ಕೃತ್ಯಕ್ಕೆ ಬಳಸಲಾದ ಒಂದು ಬೈಕ್ ಸೇರಿ ರೂ. 1,20,030 ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ. ಆದ್ರೆ ಗಮನಾರ್ಹ ಅಂಶ ಮೊದಲ ಆರೋಪಿ ದರ್ಶನ, ಕಳೆದ ತಿಂಗಳು ರೈಲ್ವೆ ನಿಲ್ದಾಣದ ಬಳಿ ಕಾರು ಕಳವು ಮಾಡಿದ ಪ್ರಕರಣದಲ್ಲಿಯೂ ಕೂಡ ಆರೋಪಿ ಆಗಿದ್ದು, ಜೈಲಿನಿಂದ ಹೊರಬಂದ ತಕ್ಷಣವೇ ಮತ್ತೆ ಕಳ್ಳತನಕ್ಕೆ ಕೈಹಾಕಿದ್ದಾನೆ ಎನ್ನಲಾಗಿದೆ.
ಈ ಪ್ರಕರಣವನ್ನು ಪತ್ತೆ ಹಚ್ಚಿದ ಗ್ರಾಮೀಣ ಠಾಣೆಯ ಸಿ.ಪಿ.ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪಿ.ಎಸ್.ಐ ರನ್ನಗೌಡ ಹಾಗೂ ಠಾಣಾ ಸಿಬ್ಬಂದಿಗಳಾದ ಮಂಜುನಾಥ ಗೊಂಡ, ಮದರ್ ಸಾಬ್ ಚಿಕ್ಕೇರಿ, ಮೋಹನ್, ಈರಣ್ಣ ಪೂಜಾರಿ, ಅಂಬರೀಶ್ ಹಾಗೂ ಚಾಲಕ ದೇವರಾಜ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಪ್ರಕರಣ ಪತ್ತೆ ಹಚ್ಚಿದ ತಂಡವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಅಭಿನಂದಿಸಿದ್ದಾರೆ.
More Stories
1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ 17ನೇ ಪಟ್ಟಾಭಿಷೇಕ ವರ್ಧಂತಿ ಉತ್ಸವ ಸೆ.3 ರಂದು
ಹೊನ್ನಾವರ ಪಟ್ಟಣದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಚೌತಿ ದಿನದಂದು ಪ್ರತಿಷ್ಠಾಪಿಸಿದ ಗಣಪನನ್ನು ಶರಾವತಿ ನದಿಯಲ್ಲಿ ರವಿವಾರ ವಿಸರ್ಜಿಸಿದರು.
ತಾಲೂಕ ಮಟ್ಟದ ದಸರಾ ಕ್ರೀಡಾಕೂಟ