August 31, 2025

ಸೆ.13ರಂದು ಭಟ್ಕಳದಲ್ಲಿ ಬೃಹತ್ ಲೋಕ ಅದಾಲತ್

ಭಟ್ಕಳ: ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆ ಮೇರೆಗೆ ಸೆಪ್ಟೆಂಬರ್ 13ರಂದು ತಾಲೂಕು ನ್ಯಾಯಾಲಯ ಸಂಕೀರ್ಣದಲ್ಲಿ ಬೃಹತ್ ಲೋಕ ಅದಾಲತ್ ನಡೆಯಲಿದೆ. ಕಕ್ಷಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಹಿರಿಯ ಶ್ರೇಣಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ ತಿಳಿಸಿದ್ದಾರೆ.

ಸುದ್ದಿಗಾರರಿಗೆ ಮಾತನಾಡಿದ ಅವರು ಈ ಲೋಕ ಅದಾಲತ್‌ನಲ್ಲಿ ವಕೀಲರ ಸಂಘದ ಸಹಕಾರದಿಂದ 1508 ಬಾಕಿ ಪ್ರಕರಣಗಳನ್ನು ಸಂಧಾನದ ಮೂಲಕ ತ್ವರಿತವಾಗಿ ಇತ್ಯರ್ಥಗೊಳಿಸಬಹುದಾಗಿದೆ ಎಂದರು.

ಚೆಕ್ ಬೌನ್ಸ್, ಬ್ಯಾಂಕ್ ವಸೂಲಾತಿ, ರಾಜಿ ಆಗಬಹುದಾದ ಅಪರಾಧ ಪ್ರಕರಣಗಳು, ಸಣ್ಣಪುಟ್ಟ ಹೊಡೆದಾಟ, ಪತಿ ಪತ್ನಿ ವಿಚ್ಛೇದನ, ಸಿವಿಲ್ ಹಾಗೂ ಗ್ರಾಹಕ ದೂರು ಪ್ರಕರಣಗಳು ಮುಂತಾದವುಗಳನ್ನು ಈ ಅದಾಲತ್‌ನಲ್ಲಿ ಬಗೆಹರಿಸಿಕೊಳ್ಳಬಹುದೆಂದು ಅವರು ವಿವರಿಸಿದರು. ಲೋಕ ಅದಾಲತ್ ಮೂಲಕ ಇತ್ಯರ್ಥವಾದ ಪ್ರಕರಣಗಳಿಗೆ ಆಪೀಲಿನ ಅವಕಾಶವಿಲ್ಲ. ಇದರಿಂದ ಹಣ ಸಮಯ ಉಳಿತಾಯವಾಗುವುದು ಮಾತ್ರವಲ್ಲ, ಎರಡೂ ಕಡೆಯವರಲ್ಲಿ ಉತ್ತಮ ಸಂಬAಧವೂ ಕಾಪಾಡಿಕೊಳ್ಳಬಹುದು ಎಂದು ಕುರಣಿ ತಿಳಿಸಿದರು.

ಕರ್ನಾಟಕ ರಾಜ್ಯ ಸೇವಾ ಕಾನೂನು ಮದ್ಯಸ್ತಿಕೆ ಜುಲೈ 1ರಿಂದ ಅಕ್ಟೋಬರ್ 7ರವರೆಗೆ ಚಾಲ್ತಿಯಲ್ಲಿದ್ದು, 90 ದಿನಗಳ ಈ ಕ್ಯಾಂಪ್‌ನಿAದ ಕಾನೂನು ವಿವಾದ ಬಗೆಹರಿಸಿಕೊಳ್ಳಲು ಸಾರ್ವಜನಿಕರು ಮುಂದೆ ಬರಬೇಕು ಎಂದರು. ಈ ಸಂದರ್ಭದಲ್ಲಿ ಕಾನೂನು ಸೇವಾ ಸಮಿತಿಯ ಕಾರ್ಯದರ್ಶಿ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶೆ ದೀಪಾ ಅರಳಗುಂಡಿ, ಹೆಚ್ಚುವರಿ ನ್ಯಾಯಾಧೀಶೆ ಧನವತಿ ಉಪಸ್ಥಿತರಿದ್ದರು.

About The Author

error: Content is protected !!