August 31, 2025

ಮಡಿವಾಳ ಸಂಘದಿAದ ಸಚಿವರಾದ ಮಂಕಾಳು ವೈದ್ಯರಿಗೆ ಸನ್ಮಾನ

ಹೊನ್ನಾವರ : ತಾಲೂಕಾ ಮಡಿವಾಳರ ಸಂಘದಿAದ ನಿರ್ಮಿಸಲಾದ ಸಮುದಾಯ ಭವನದ ಉದ್ಘಾಟಣಾ ಸಮಾರಂಭದಲ್ಲಿ ಚಿತ್ರದುರ್ಗದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳ ಜೊತೆ ಉದ್ಘಾಟಕರಾಗಿ ಬಂದ ಬಂದರು ಮತ್ತು ಒಳನಾಡು ಜಲಸಾರಿಗೆ ಮತ್ತು ಉತ್ತರ ಕನ್ನಡ ಉಸ್ತುವಾರಿ ಸಚಿವರಾದ ಮಂಕಾಳು ವೈದ್ಯರು ಆಗಮಿಸಿದ್ದು ಸಣ್ಣ, ಹಿಂದುಳಿದ ಸಮುದಾಯವಾದರೂ ಅದ್ಭುತವಾಗಿ ಕಟ್ಟಿದ ಸಮುದಾಯ ಭವನ ನೋಡಿ ಸಂತೋಷ ವ್ಯಕ್ತಪಡಿಸಿದರು. ಸಮಾಜದ ಹಿತ ಚಿಂತಕರೂ ಆದ ಸಚಿವರು ಸ್ವಾಮಿಗಳ ಉಪಸ್ಥಿತಿಯಲ್ಲಿ ಮುಂದಿನ ಕಾಮಗಾರಿಗೆ ತನ್ನ ಸಹಕಾರ, ಸಹಾಯದ ಭರವಸೆ ನೀಡಿದ್ದರು. ನುಡಿದಂತೆ ನಡೆದ ಸಚಿವರು ಅವರ ಸಹಾಯ ಮತ್ತು ಸಹಕಾರಕ್ಕೆ ಹೊನ್ನಾವರ ತಾಲೂಕಾ ಮಡಿವಾಳರ ಸಂಘದ ಪದಾಧಿಕಾರಿಗಳು ಅವರ ನಿವಾಸಕ್ಕೆ ಹೋಗಿ ಅಭಿನಂದನೆ ಸಲ್ಲಿಸಿ ಸನ್ಮಾನಿದರು, ಸಂಘದ ಮುಂದಿನ ಯೋಜನೆಗಳಾದ ಬಡ ಮಕ್ಕಳ ವಸತಿನಿಲಯ ಕಾಮಗಾರಿಗೆ ಸಹಕಾರಕ್ಕೆ ಮನವಿ ಮಾಡಿದ್ದು, ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಭರವಸೆ ಸಚಿವರು ನೀಡಿದ್ದಾರೆ.

ಆ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕು. ಬೀನಾ ವೈದ್ಯ. ಸಹಕಾರ ನೀಡಿದ ರಾಜ್ಯ ಕಾಂಗ್ರೆಸ್ ಸಂಯೋಜನಾಧಿಕಾರಿ ನಾಗರಾಜ್ ಮಡಿವಾಳ ಸಿರ್ಸಿ, ಸಂಘದ ಪದಾಧಿಕಾರಿಗಳಾದ ಡಿ ಡಿ ಮಡಿವಾಳ, ಉಮೇಶ್ ಮಡಿವಾಳ, ಇಂಜಿನಿಯರ್ ಶಿವಾನಂದ್ ಹೊನ್ನಾವರ, ಸಂತೋಷ ಹೊನ್ನಾವರ, ವೆಂಕಟೇಶ್ ಮಡಿವಾಳ ಶಿಕ್ಷಕರು ಹಾಜರಿದ್ದರು.

About The Author

error: Content is protected !!