September 3, 2025

ಬಾಕಡಕೇರಿ ಬಸ್ತಿ ಕಾಯ್ಕಿಣಿಯಲ್ಲಿ 24ನೇ ವರ್ಷದ ಗಣೇಶೋತ್ಸವ

ಭಟ್ಕಳ: ಬಾಕಡಕೇರಿ ಬಸ್ತಿ ಕಾಯ್ಕಿಣಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ 24ನೇ ವರ್ಷದ ಶ್ರೀ ಗಣೇಶೋತ್ಸವ ಭಕ್ತಿಭಾವ ಮತ್ತು ಸಾಂಸ್ಕೃತಿಕ ಸಡಗರದಿಂದ ನೆರವೇರಿತು. ಬುಧವಾರ ಬೆಳಿಗ್ಗೆ ಮೂರ್ತಿಯ ಪ್ರತಿಷ್ಠಾಪನೆ ಬಳಿಕ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು. ಮಧ್ಯಾಹ್ನ ಆಟೋಟ ಸ್ಪರ್ಧೆ, ಭಜನಾ ಕಾರ್ಯಕ್ರಮಗಳು ಭಕ್ತರ ಮನರಂಜನೆಗೂ ಕಾರಣವಾದವು.

ಗುರುವಾರ ಶ್ರೀ ಸತ್ಯನಾರಾಯಣ ವೃತ, ಅನ್ನಸಂತರ್ಪಣೆ ನಡೆಯಿತು. ಸಂಜೆ ಕುಮಟಾದ ಡಾನ್ಸ್ ಡಿವೋಟರ್ಸ್ ತಂಡದ ನೃತ್ಯ ಪ್ರದರ್ಶನ ಹಾಗೂ ರಾಜ್ಯದ ಕಲಾವಿದರಿಂದ ನಾದ ನೃತ್ಯ ಸಂಗೀತ ಕಾರ್ಯಕ್ರಮಗಳು ಭಕ್ತರ ಮೆಚ್ಚುಗೆ ಪಡೆದವು. ಶುಕ್ರವಾರ ವಿಶೇಷ ಪೂಜೆ, ನಂತರ ವಿಸರ್ಜನಾ ಮೆರವಣಿಗೆಯಲ್ಲಿ ಭಕ್ತಾದಿಗಳು ಡಿಜೆ ಗೀತೆಗಳಿಗೆ ಹೆಜ್ಜೆ ಹಾಕುತ್ತಾ ಗಣೇಶನ ಮೂರ್ತಿಯನ್ನು ದೇವಿಕಾನ ಹೊಳೆಯಲ್ಲಿ ವಿಸರ್ಜಿಸಿದರು.

ಪ್ರತಿವರ್ಷ ಮೂರ್ತಿ ತಂದುಕೊಡುವ ಕೆ.ಆರ್. ನಾಯಕ (ನಿವೃತ್ತ ಶಿಕ್ಷಕರು, ಕಾಯ್ಕಿಣಿ) ಈ ಬಾರಿಯೂ ತಮ್ಮ ಸೇವೆ ಸಲ್ಲಿಸಿದರು. ಸಮಿತಿಯ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷ ಮಾದೇವ ನಂದಿ ಬಾಕಡ, ಉಪಾಧ್ಯಕ್ಷ ಮಾದೇವ ದುರ್ಗಪ್ಪ ಬಾಕಡ, ಖಜಾಂಚಿ ತಿಮ್ಮಪ್ಪ ಶಂಭು ಬಾಕಡ, ಕಾರ್ಯದರ್ಶಿ ಮಂಜುನಾಥ ಮಾಸ್ತಪ್ಪ ಬಾಕಡ, ಸಹ ಉಪಾಧ್ಯಕ್ಷ ಶ್ರೀಧರ ಬಾಬು ಬಾಕಡ, ಸಹ ಕಾರ್ಯದರ್ಶಿ ಈಶ್ವರ ಮಂಗಳಾ ಬಾಕಡ ಸೇರಿದಂತೆ ಸದಸ್ಯರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.

About The Author

error: Content is protected !!